Posts

Showing posts from June, 2023

ಆರ್ ಶಶಿಕಲಾ ಅವರಿಗೆ ಪಿಎಚ್.ಡಿ. ಪದವಿ ಪ್ರದಾನ.

Image
ತುಮಕೂರು : ಆರ್ ಶಶಿಕಲಾ ಅವರು ತುಮಕೂರು ವಿಶ್ವವಿದ್ಯಾನಿಲಯದ  ಡಾ ಡಿ.ವಿ. ಗುಂಡಪ್ಪ  ಕನ್ನಡ  ಅಧ್ಯಯನ ಕೇಂದ್ರದ ಪ್ರಾಧ್ಯಾಪಕರಾದ ಪ್ರೊ. ನಿತ್ಯಾನಂದ ಬಿ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ  ಸಂಶೋಧನೆ ನಡೆಸಿ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದ "ಕನ್ನಡ ಸ್ತ್ರೀವಾದಿ ಸಾಂಸ್ಕೃತಿಕ ವಿಮರ್ಶೆಯ ಸ್ವರೂಪ" ಎಂಬ ಮಹಾಪ್ರಬಂಧಕ್ಕೆ  ತುಮಕೂರು ವಿಶ್ವವಿದ್ಯಾನಿಲಯವು ಪಿ.ಹೆಚ್‌ಡಿ. ಪದವಿ ಪ್ರಧಾನ ಮಾಡಿದೆ.  ಆರ್ ಶಶಿಕಲಾ ಅವರು ಪ್ರಸ್ತುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ, ಚಿಂತಾಮಣಿ, ಚಿಕ್ಕಬಳ್ಳಾಪುರ ಜಿಲ್ಲೆ ಇಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಯಶಸ್ವಿಯಾಗಿ ನಡೆದ ಅಖಿಲ ಕರ್ನಾಟಕ ಸ್ಪಂದನ ಸಿರಿ ಪ್ರಥಮ ಸಾಹಿತ್ಯ ಮತ್ತು ಸಂಸ್ಕೃತಿ ಸಮ್ಮೇಳನ.

Image
ಹಾಸನ: 25-6-2023ರ  ಭಾನುವಾರ ನಮ್ಮ ಹಾಸನ ಚಾರಿಟಬಲ್ ಟ್ರಸ್ಟ್ ಹಾಗೂ ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಸ್ಪಂದನ ಸಿರಿ  12ನೇ ವಾರ್ಷಿಕೋತ್ಸವದ ಅಂಗವಾಗಿ "ಅಖಿಲ ಕರ್ನಾಟಕ ಸ್ಪಂದನ ಸಿರಿ ಪ್ರಥಮ ಸಾಹಿತ್ಯ  ಮತ್ತು ಸಂಸ್ಕೃತಿ ಸಮ್ಮೇಳನವನ್ನು ಸಾಹಿತಿ ಶ್ರೀಮತಿ ಜಯಂತಿ ಚಂದ್ರಶೇಖರ್ ರವರ ಅಧ್ಯಕ್ಷತೆಯಲ್ಲಿ ನೆರವೇರಿಸಲಾಯಿತು. ಕಾರ್ಯಕ್ರಮವನ್ನು ಹಾಸನ ಜಿಲ್ಲಾ ನ್ಯಾಧೀಶರಾದ ಶ್ರೀಯುತ ರವಿಕಾಂತ್ ರವರು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಕುಟುಂಬಗಳಲ್ಲಿ ಹೊಂದಾಣಿಕೆಯಿಂದ ಇದ್ದಾಗಾ ಮಾತ್ರ ಅಭಿವೃದ್ಧಿಯನ್ನು ಕಾಣಲು ಸಾಧ್ಯ ಎಂದರು. ಸ್ಪಂದನ ಸಿರಿ ಸಂಸ್ಥಾಪಕ ರಾಜ್ಯಧ್ಯಕ್ಷೆ ಕಲಾವತಿ ಮಧುಸೂದನ ಮತ್ತು ತಂಡದಿಂದ ತಬಲಾ ವಾದಕರಾದ ಶ್ರೀ ಆನಂದ್ ಹಾಗೂ ಕೀಬೋರ್ಡ ಜಯಣ್ಣನವರು ಸುಮಧುರವಾದ ಸುಗಮ ಸಂಗೀತದಿಂದ ಕಾರ್ಯಕ್ರಮವನ್ನು ಆರಂಭಿಸಿದರು. ನಂತರ ಕಲಾವತಿಮಧುಸೂಧನರವರ ಸೂಕ್ತಿ ಸುಧೆ, ಮುಕ್ತ ಸಂಕಲನ, ಸಂಪಾದಕತ್ವದಲ್ಲಿ "ಮನನ ಮಾರ್ಗ" ಪ್ರಬಂಧ ಸಂಕಲನ ಹಾಗೂ ವಿಚಾರಮಂಟಪ ಸಾಹಿತ್ಯ ವೇದಿಕೆಯಾ ಅಧ್ಯಕ್ಷರಾದ ಶ್ರೀ ವರುಣ್ ರಾಜ್ ಜಿ ಮತ್ತು ಬಳಗದ ಸಂಪಾದಕತ್ವದಲ್ಲಿ ವಿವಿಧ ಕವಿಗಳ ಕವಿತೆಗಳ ಕವನ ಸಂಕಲನಗಳನ್ನು ಸಾಹಿತಿ ಗೊರೂರು ಅನಂತರಾಜು ಮತ್ತು ಗಣ್ಯರಿಂದ ಲೋಕಾರ್ಪಣೆ ಮಾಡಲಾಯಿತು. ಮತ್ತು ಸಂಸ್ಥೆಗಾಗಿ ನಿಷ್ಠೆಯಿಂದ ಸೇ...

ಪ್ರೈಡ್ ಮಂತ್ ಪ್ರಯುಕ್ತ ವಿಚಾರ ಮಂಟಪ ಬಳಗದ ವತಿಯಿಂದ ಕ್ವೀರ್ ಕಾವ್ಯದ ಓದು -ಸಂವಾದ ಕಾರ್ಯಕ್ರಮ.

Image
 ದಿನಾಂಕ :  30.06.2023  ರಂದು ಸಂಜೆ 07:00 ಕ್ಕೆ. ಭಾಗವಹಿಸುವವರು ಸ್ವರಚಿತ ಕವಿತೆಗಳನ್ನು/ ಇತರರ ಆಯ್ದ ಕವನಗಳನ್ನು/ ಆಯ್ದ ಭಾಗಗಳನ್ನು ವಾಚನ ಮಾಡಬಹುದು. ಕವಿತೆ ಹುಟ್ಟಿದ್ದ ಸಂದರ್ಭ, ಅದರ ಹಿಂದಿನ  ಅನುಭವಗಳ ಕುರಿತು ಮಾತನಾಡಬಹುದು. ಎಲ್ಲರಿಗೂ  ಪ್ರೀತಿಯ ಸ್ವಾಗತ ಹೆಚ್ಚಿನ‌ ಮಾಹಿತಿಗೆ ಸಂಪರ್ಕಿಸಿ : ಗೌತಮ್ ಗೌಡ. # 9902549766  ಧನ್ಯವಾದಗಳು.. 🙏 ಹ್ಯಾಪಿ ಪ್ರೈಡ್ 🏳️‍🌈 ಗೂಗಲ್ ಮೀಟ್ ಲಿಂಕ್ :  meet.google.com/wgc-zzue-ajd

ಪ್ರಭುಕುಮಾರ ಪಿ ಅವರಿಗೆ ತುಮಕೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪ್ರಧಾನ.

Image
  ಪ್ರಭುಕುಮಾರ ಪಿ ಅವರು ತುಮಕೂರು ವಿಶ್ವವಿದ್ಯಾನಿಲಯದ  ಡಾ ಡಿ ವಿ ಗುಂಡಪ್ಪ  ಕನ್ನಡ  ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾದ ಪ್ರೊ. ನಿತ್ಯಾನಂದ ಬಿ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ  ಸಂಶೋಧನೆ ನಡೆಸಿ ವಿಶ್ವವಿದ್ಯಾನಿಲಯ ಕ್ಕೆ ಸಲ್ಲಿಸಿದ "ಅಲ್ಲಮಪ್ರಭುವಿನ ಜ್ಞಾನಮೀಮಾಂಸೆ" ಎಂಬ ಮಹಾಪ್ರಬಂಧ ಕ್ಕೆ  ತುಮಕೂರು ವಿಶ್ವವಿದ್ಯಾನಿಲಯವು ಪಿ.ಹೆಚ್‌ಡಿ.ಪದವಿಯನ್ನು ಪ್ರದಾನ ಮಾಡಿದೆ.  ಪ್ರಭುಕುಮಾರ ಪಿ ಅವರು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಅರೇಚಾಕನಹಳ್ಳಿ ಗ್ರಾಮದ ಪುಟ್ಟಲಿಂಗಯ್ಯ ಮತ್ತು ನಿಂಗರಾಜಮ್ಮ ದಂಪತಿಗಳ ಮಗನಾಗಿದ್ದಾರೆ.

ಕಾವ್ಯದೀವಿಗೆ ಕೃತಿ ಲೋಕಾರ್ಪಣೆ

Image
    ವಿಚಾರ ಮಂಟಪ ಬಳಗದ ವತಿಯಿಂದ ವರುಣ್‌ರಾಜ್‌ ಜಿ ಮತ್ತು ಧನುಷ್‌ ಎಚ್‌ ಶೇಖರ್‌ ಇವರು ಸಂಪಾದಿಸಿರುವ ʼಕಾವ್ಯದೀವಿಗೆʼ ಕವನ ಸಂಕಲನವು ಲೋಕಾರ್ಪಣೆಗೆ ಸಿದ್ಧವಾಗಿದೆ. ಕೃತಿಯನ್ನು ಹಾಸನದ ʼಸ್ಪಂದನ ಸಿರಿʼ ಪ್ರಕಾಶನವು ಪ್ರಕಟಿಸುತ್ತಿದ್ದು, ಇದೇ ಭಾನುವಾರ ದಿನಾಂಕ: ೨೫.೦೬.೨೦೨೩ ರಂದು ಹಾಸನದಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ೧೨ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪುಸ್ತಕ ಲೋಕಾರ್ಪಣೆಗೊಳ್ಳಲಿದೆ. ʼಕಾವ್ಯದೀವಿಗೆʼ ಕವನ ಸಂಕಲನವು ನಾಡಿನ ವಿವಿಧ ಪ್ರದೇಶಗಳ ಒಟ್ಟು ೬೨ ಯುವ ಬರಹಗಾರರ ಬರಹಗಳನ್ನೊಳಗೊಂಡ ಕೃತಿಯಾಗಿದ್ದು, ಯುವ ಬರಹಗಾರರ ಅಭಿವ್ಯಕ್ತಿಗೆ ವೇದಿಕೆಯನ್ನೊದಗಿಸುವ ಹಾಗೂ ಅವರನ್ನು ಪ್ರೋತ್ಸಾಹಿಸುವ ಉದ್ದೇಶವನ್ನು ಹೊಂದಿದೆ. ವಿಚಾರ ಮಂಟಪ ಬಳಗವು ೫ ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದು ಇದರ ನೆನಪಿಗಾಗಿ ʼಕಾವ್ಯದೀವಿಗೆʼಯನ್ನು ಹೊರತರುತ್ತಿದೆ. ಈ ಕೃತಿಗೆ ಅಮರ್ ಬಿ ಇವರ ಮುನ್ನುಡಿಯನ್ನು ಬರೆದಿದ್ದು, ದಾದಪೀರ್‌ ಜೈಮನ್‌, ದೇವರಾಜ್‌ ಹುಣಸೀಕಟ್ಟೆ ಹಾಗೂ ಗೌತಮ್‌ ಗೌಡ ಇವರು ಆಶಯ ನುಡಿಯನ್ನೂ ಹಾಗೂ ಚಂದನ್‌ ಡಿ.ಎನ್.‌ ಇವರು ಬೆನ್ನುಡಿಯನ್ನೂ ಬರೆದಿದ್ದಾರೆ.   ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಹಾಸನದ ಸಾಹಿತಿ ಶ್ರೀ ಗೊರೂರು ಅನಂತರಾಜು ಅವರು ಪುಸ್ತಕ ಬಿಡುಗಡೆಗೊಳಿಸಿ ಕೃತಿಯನ್ನು ಕುರಿತು ಮಾತನಾಡಲಿದ್ದು, ʼಸ್ಪಂದನ ಸಿರಿʼ ಸಾಹಿತ್ಯ ವೇದಿಕೆಯ ಶ್ರೀಮತಿ ಕಲಾವತಿ ಮಧುಸೂದನ, ಕಾದ...

ಉದಯೋನ್ಮುಖ ಕವಿಗಳ ಭಾವಾಭಿವ್ಯಕ್ತಿ ಕಾವ್ಯ ದೀವಿಗೆ (ಕೃತಿ ವಿಮರ್ಶೆ) - ಗೊರೂರು ಅನಂತರಾಜು, ಹಾಸನ.

Image
ಹಾಸನದ 'ಸ್ಪಂದನ ಸಿರಿ' ಪ್ರಕಾಶನವು  'ಕಾವ್ಯದೀವಿ'ಗೆ ಕವನ ಸಂಕಲನವನ್ನು ಪ್ರಕಟಿಸುತ್ತಿದೆ. ಶ್ರೀಮತಿ ಕಲಾವತಿ ಮಧುಸೂಧನ್ ಇವರ ಸಾರಥ್ಯದ 'ಸ್ಪಂದನ ಸಿರಿ' ವೇದಿಕೆಯ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ, ಜೂನ್ ೨೫ ರಂದು ಈ ಕೃತಿ ಬಿಡುಗಡೆಯಾಗುತ್ತಿದೆ.  ವರುಣ್‌ರಾಜ್ ಜಿ. ಮತ್ತು ಧನುಷ್ ಎಚ್ ಶೇಖರ್ ಇವರ ಸಂಪಾದಕತ್ವದ ಹೊಸ ತಲೆಮಾರಿನ ಉದಯೋನ್ಮುಖ ಕವಿಗಳ ೬೨ ಕವಿತೆಗಳು ಸಂಕಲನದಲ್ಲಿವೆ.  "ಹೊಸಬರ ಬಹುತೇಕ ಚೊಚ್ಚಲ ಕವನಗಳು ಕಾವ್ಯ ತತ್ವದ ದೃಷ್ಟಿಯಿಂದಷ್ಟೇ ಅಲ್ಲ ಕಾಗುಣಿತಾದಿ ಪ್ರಾಥಮಿಕ ಭಾಷಾ ಬಳಕೆಯ ದೃಷ್ಟಿಯಿಂದಲೂ ಹತ್ತು ಹಲವು ದೋಷಗಳಿಂದ ಕೂಡಿರುತ್ತವೆ.  ಆ ಎಲ್ಲವನ್ನು ತಾಳ್ಮೆಯಿಂದ ಅವಲೋಕಿಸಿ ಆಯಾ ಕವಿಗಳ ನಿರಂತರ ಸಂಪರ್ಕದಲ್ಲಿ ಕವನಗಳನ್ನು ಭಾಷೆ ದೃಷ್ಟಿಯಲ್ಲಿ  ಒಪ್ಪ ಓರಣಗೊಳಿಸಿ ಪ್ರಕಟಿಸುವ ಸಾಹಸ ಸಂಪಾದಕರದು.  ಇದು ಸಾಹಿತ್ಯವನ್ನು ಕುರಿತು ಮೇಲಾಗಿ ಮನುಷ್ಯರು ಮತ್ತು ಅವರ ಬದುಕನ್ನು ಕುರಿತು ಆರ್ದ್ರ ಆಧ್ಯಾತ್ಮಿಕ ಪ್ರೀತಿಯಿದ್ದರಷ್ಟೇ ಸಾಧ್ಯ, ಆತ್ಮತೃಪ್ತಿಯನ್ನು ಹೊರತುಪಡಿಸಿ ಇನ್ಯಾವ ಲಾಭವನ್ನೂ  ಇಂಥ ಸಂಪಾದನ ಕೆಲಸ ನೀಡುವುದಿಲ್ಲ" ಎಂಬ ಅಮರ್ ಬಿ. ಇವರ ಮಾತು ಒಪ್ಪತಕ್ಕದ್ದೇ.  ಇಂತಹ ಅನುಭವ ನನಗೂ ಆಗಿದೆ.  ೧೯೮೫ರಲ್ಲಿ ನಾನು ರಾಜ್ಯಾದ್ಯಂತ ನೂರು ಕವಿಗಳಿಂದ ನೂರು ಕವನಗಳನ್ನು ಸಂಗ್ರಹಿಸಿ 'ಸಮ್ಮಿಲನ' ಕೃತಿ ಪ್ರಕಟಿಸಿ, "ಯಾರೂ ದಿಡೀರ್ ಎಂದು ಲೇಖಕ...

ಹಿರೇಮಾಗಿಯ ಶ್ರೀ ಮುತ್ತು ವಡ್ಡರ ಕರುನಾಡ ಕವಿ ಪ್ರಶಸ್ತಿಗೆ ಆಯ್ಕೆ

Image
ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಶ್ರೀ ಮುತ್ತು.ಯ.ವಡ್ಡರ ಇವರು ತಮ್ಮನ್ನು ತಾವು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿ ಕೊಂಡು ಹಲವಾರು ರೀತಿಯ ಕವನಗಳನ್ನು, ಪ್ರತಿನಿತ್ಯ ಪತ್ರಿಕೆಗಳಿಗೆ ವಿಶೇಷ ರೀತಿಯ ಲೇಖನಗಳನ್ನು ಬರೆಯುತ್ತಿದ್ದು,ಇವರ ಅಲ್ಪ ಪ್ರತಿಭೆ ಹಾಗೂ ಇವರು ಬರೆದ ಕವನಗಳನ್ನು ಪರಿಗಣಿಸಿ ಹಾಗೂ ತಾಲೂಕು ಮತ್ತು ಜಿಲ್ಲಾ ಮಟ್ಟದ ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸಿ ಹಲವು ಕವನಗಳನ್ನು ವ್ಯಕ್ತಪಡಿಸಿದ್ದಾರೆ.ಇವರ ಸಾಹಿತ್ಯ ಕ್ಷೇತ್ರದ ಸಾಧನೆಯನ್ನು ಗುರುತಿಸಿ ನಮ್ಮ ಕನ್ನಡ ನುಡಿಮುತ್ತು ಸಾಹಿತ್ಯ ವೇದಿಕೆಯು ದಿನಾಂಕ:-01-07-23ರಂದು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ನಡೆಯಲಿರುವ "ಕರುನಾಡ ಅಕ್ಷರ ಜಾತ್ರೆ"ಯಲ್ಲಿ  ಕರುನಾಡ ಕವಿ ಪುರಸ್ಕಾರ ನೀಡಲು ಆಯ್ಕೆ ಮಾಡಲಾಗಿದೆ ಎಂದು  ಜಗದೀಶ.ಎಸ್‌. ಕಾಬನೆ ಅದ್ಯಕ್ಷರು ಕನ್ನಡ ನುಡಿಮುತ್ತು ಸಾಹಿತ್ಯ ವೇದಿಕೆ ಕರ್ನಾಟಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪ್ರಸ್ತುತ ಇವರು ಕವಿವಾಣಿ ಸಾಹಿತ್ಯ ಪರಿಷತ್ತು ವೇದಿಕೆಯ ಸಂಚಾಲಕರಾಗಿ, ಕರುನಾಡು ಹಣತೆ ಕವಿ ಬಳಗ ವೇದಿಕೆಯ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಸಿದ್ದಗಂಗಾ ಸಾಹಿತ್ಯ ವೇದಿಕೆ, ಬೆಂಗಳೂರ ವೇದಿಕೆಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಸಾಹಿತ್ಯ ಸೇವೆಯು ಈಗೆಯೇ ಮುಂದುವರೆಯಲಿ ಎಂದು ಆಶಿಸುತ್ತೇವೆ.

ಗಾಯಕರಿಗೆ ಆಸಕ್ತಿ ಮುಖ್ಯ- ವಾಣಿ ನಾಗೇಂದ್ರ.

Image
ಕರ್ನಾಟಕ ರಾಜ್ಯ ಬರಹಗಾರರ ಸಂಘ(ರಿ)ಹೂವಿನ ಹಡಗಲಿ ಇವರು ಆಯೋಜಿಸಿದ ವಾಯ್ಸ್ ಆಪ್ ಕರ್ನಾಟಕ ಸಂಚಿಕೆ-೦೨ರ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕಿ ಶ್ರೀಮತಿ ವಾಣಿ ನಾಗೇಂದ್ರ ಹಾಸನ ಇವರು ತೀರ್ಪುಗಾರರಾಗಿ ಭಾಗವಹಿಸಿ ಮಾತನಾಡಿದರು. ಗಾಯಕರಿಗೆ ತಾಳ್ಮೆ, ಆಸಕ್ತಿ, ಕಲಿಯುವ ಛಲ ಬಹಳ ಮುಖ್ಯ ಜೊತೆಗೆ ರಾಗ ತಾಳ, ಸ್ಪಷ್ಟವಾದ ಉಚ್ಚಾರಣೆ ಮುಖ್ಯ ಹಾಗೂ ಭಕ್ತಿಗೀತೆಗಳನ್ನು ಹಾಡುವಾಗ ಭಕ್ತಿಗೆ ಪ್ರಾಧಾನ್ಯತೆ ಕೊಡುವುದು ಬಹುಮುಖ್ಯ ಎಂದು ಸಲಹೆ ನೀಡಿದರು.ವಾಯ್ಸ್ ಆಫ್ ಕರ್ನಾಟಕ ೨ ನೇ ಸಂಚಿಕೆಯಲ್ಲಿ ಬೇರೆಬೇರೆ ಜಿಲ್ಲೆಯ ಹಾಗೂ ಹೊರರಾಜ್ಯದ ಹೊರದೇಶದ ೪೦ ಕನ್ನಡಿಗರು ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಕಲಾಶ್ರೀ ಮ ಹಾದಿಮನಿ ವಹಿಸಿಕೊಂಡು ಭಕ್ತಿಯೆಂದರೇನು ಇಂದಿನ ಮಕ್ಕಳಿಗೆ ಅದರ ಅವಶ್ಯಕತೆ ಏನು ಎಂಬುದನ್ನು ತಿಳಿಸಿದರು.  ಕಾರ್ಯಕ್ರಮದ ನಿರೂಪಣೆ ಶ್ರೀ ಗೋಪಾಲನಾಯ್ಕ ಕುಷ್ಟಗಿ ಇವರು ತುಂಬಾ ತಾಳ್ಮೆಯಿಂದ ನಡೆಸಿಕೊಟ್ಟರು. ಪ್ರಾರ್ಥನೆ ಕು.ಮಾನಸ ಮಂಜುನಾಥ ಲಕ್ಕಣ್ಷನವರ ನೆರವೇರಿಸಿದರು ಸ್ವಾಗತ ಶ್ರೀ ಮೂರ್ತಿ ಎಲ್ ಇವರು ನಡೆಸಿಕೊಟ್ಟರು.

ಸಂಜಯಕುಮಾರ ಯ. ಬಿರಾದಾರ ಅವರಿಗೆ ಧಾರವಾಡ ಜಿಲ್ಲಾಧಿಕಾರಿಗಳಾದ ಮಾನ್ಯ ಶ್ರೀ ಗುರುದತ್ತ ಹೆಗಡೆ ಅವರಿಂದ ಅಭಿನಂದನೆ.

Image
ಕರ್ನಾಟಕ ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಸ್ವಯಂ ಸೇವಕ ಹಾಗೂ ಸಮಾಜ ಸೇವಕನಾದ ಕು. ಸಂಜಯಕುಮಾರ ಯ. ಬಿರಾದಾರ ಅವರಿಗೆ ಧಾರವಾಡ ಜಿಲ್ಲಾಧಿಕಾರಿಗಳಾದ ಮಾನ್ಯ ಶ್ರೀ ಗುರುದತ್ತ ಹೆಗಡೆ ಅವರು ಕು. ಸಂಜಯಕುಮಾರ ಯ. ಬಿರಾದಾರ ಇವರು ಸನ್ 2023ರ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಸ್ವೀಪ್ ಕಾರ್ಯಕ್ರಮದಡಿಯಲ್ಲಿ ಭಿತ್ತಿ ಚಿತ್ರ ಹಾಗೂ ಜಾಗೃತಿ ಬರಹಗಳ ಮೂಲಕ ಮತದಾರರಿಗೆ ಮತದಾನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮತದಾನ ಜಾಗೃತಿಯ ಅಭಿಯಾನದಲ್ಲಿ ಪಾಲ್ಗೊಂಡಿದ್ದಕ್ಕಾಗಿ  ಸದರಿಯವರನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಭಿನಂದಿಸಿ ಮಾನ್ಯ ಜಿಲ್ಲಾಧಿಕಾರಿಗಳು ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ.  ಈ ಸಂದರ್ಭದಲ್ಲಿ ಸಂಜಯ್ ಅವರಿಗೆ ಬಸವನ ಬಾಗೇವಾಡಿ ತಾಲ್ಲೂಕಿನ ಶಾಸಕರು ಹಾಗೂ ಸಚಿವರಾದ ಶ್ರೀ ಶಿವಾನಂದ ಎಸ್ ಪಾಟೀಲ್, ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಕೆ.ಬಿ. ಗುಡಸಿ,  ಕುಲಸಚಿವರಾದ ಪ್ರೊ. ಯಶಪಾಲ ಕ್ಷೀರಸಾಗರ, ಕ.ವಿ.ವಿ ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಪ್ರೊ. ಸಂಗಪ್ಪ ಜಿ ಚಲವಾದಿ, ಎನ್.ಎಸ್.ಎಸ್ ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತರಾದ ಡಾ. ಬಿ.ಎಸ್.ಭಜಂತ್ರಿ, ಭೂಗೋಳಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ವಿ.ಬಿ.ಸಾವಿರಮಠ, ಪ್ರಾಧ್ಯಾಪಕರಾದ ಶೈಲಜಾ ಅಮರಶೆಟ್ಟಿ ಅವರು ಹಾಗೂ ಶಿಕ್ಷಕರು, ಸ್ನೇಹಿತರು, ಕುಟುಂಬದವರು ಶುಭಹಾರೈಸಿದ್...

ಹೆಚ್. ಎಸ್. ಪ್ರತಿಮಾ ಹಾಸನ್ ರವರಿಗೆ ರೋಟರಿ ಮೈಸೂರ್ ಸ್ಟಾರ್ ಪ್ರಶಸ್ತಿ ಪ್ರಧಾನ.

Image
ಲೇಖಕಿಯಾಗಿ, ಗಾಯಕಿಯಾಗಿ, ಶಿಕ್ಷಕಿಯಾಗಿ, ಸಮಾಜಸೇವಕಿಯಾಗಿ ಎಲ್ಲಾ ಕ್ಷೇತ್ರದಲ್ಲೂ ಗುರುತಿಸಿಕೊಂಡಿರುವ ಆಶು ಕವಿತ್ರಿ, ವಾಗ್ಮಿ ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್ ರವರು  ಬಹುಮುಖ ಪ್ರತಿಭೆ, ಇವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು, ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ ಟ್ರಸ್ಟ್ ಮೈಸೂರು, ಹಿಮಾಲಯ ಪ್ರತಿಷ್ಠಾನ ಮೈಸೂರು, ರೋಟರಿ ಕ್ಲಬ್ ಆಫ್ ಮೈಸೂರು ಸ್ಟಾರ್ಸ್, ಈ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆದ ರಾಜ್ಯಮಟ್ಟದ ಪ್ರಥಮ ಮುಕ್ತಕ ಸಾಹಿತ್ಯೋತ್ಸವ 2023ರಲ್ಲಿ ಇವರು ರಚಿಸಿದ ಮುಕ್ತಕಗಳನ್ನು, ಮುಕ್ತಕ ವಾಚನವನ್ನು ಗುರುತಿಸಿ ಸನ್ಮಾನಿಸಲಾಯಿತು. ಅಲ್ಲದೇ, ಕಾವ್ಯದಲ್ಲಿ ಇವರ ಸಾಧನೆಯನ್ನು ಗುರುತಿಸಿ, ರೋಟರಿ ಕ್ಲಬ್ ಆಫ್ ಮೈಸೂರು ಸ್ಟಾರ್ಟ್ ನ ಅಧ್ಯಕ್ಷರಾದ ಸಂತೋಷ್ ಗೌಡರವರು ರೋಟರಿ ವತಿಯಿಂದ  ಸಾಧಕಿಯಾದ  ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್ ರವರಿಗೆ   "ರೋಟರಿ  ಮೈಸೂರು ಸ್ಟಾರ್" ಎಂಬ ರಾಜ್ಯ ಪ್ರಶಸ್ತಿಯನ್ನು ನೀಡಿ  ಗೌರವಿಸಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ಮುಕ್ತಕ ಕವಿ ಪರಿಷತ್ತಿನಲ್ಲಿ ಹಾಸನದ ಜಿಲ್ಲಾಧ್ಯಕ್ಷರಾಗಿ ಶ್ರೀಯುತರನ್ನು ಆಯ್ಕೆ ಮಾಡಲಾಯಿತು.  ಕಾರ್ಯಕ್ರಮದಲ್ಲಿ ಕರ್ನಾಟಕ ಮುಕ್ತಕ ಪರಿಷತ್ತಿನ ಸಂಸ್ಥಾಪಕರಾದ ಮುತ್ತುಸ್ವಾಮಿ ರವರು, ಮುಕ್ತ ಕ ಸಮ್ಮೇಳನದ ಅಧ್ಯಕ್ಷರಾದಂತಹ ಕಮಲಾ ರಾಜ್ಯೋತ್ಸವರು, ಹಿಮಾಲಯ ಪ್ರತಿಷ್ಠಾನ...

ಯಶಸ್ವಿಯಾಗಿ ನಡೆದ ತನುಶ್ರೀ ಸಾಹಿತ್ಯ ವೇದಿಕೆ ನಾಲ್ಕನೇ ರಾಜ್ಯ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮ.

Image
ದಿ :05/06/2023 ರಂದು ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆ (ರಿ) ಚಿತ್ರದುರ್ಗ ವತಿಯಿಂದ ಅಂತರ್ಜಾಲ ಆಧಾರಿತ ರಾಜ್ಯ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮ ಅಧ್ಯಕ್ಷತೆ ಶ್ರೀಮತಿ ಪುಷ್ಪವಲ್ಲಿ ಎಂ. ಎಮ್. ಮುಖ್ಯೋಪಾಧ್ಯಾಯರು ಮತ್ತು ಕವಯಿತ್ರಿ ವಹಿಸಿದ್ದರು. ಪ್ರಾಸ್ತಾವಿಕವಾಗಿ ಬಸವರಾಜ ಪೂಜಾರ್ ಕೋಡಿಹಳ್ಳಿ ಉಪಾಧ್ಯಕ್ಷರು ತನುಶ್ರೀ ಸಾಹಿತ್ಯ ವೇದಿಕೆ ಮಾತನಾಡಿ 'ಇದು ನಮ್ಮ ವೇದಿಕೆ ನಾಲ್ಕನೇ ಕವಿಗೋಷ್ಠಿ ಕಾರ್ಯಕ್ರಮ ಎಲ್ಲಾ ಕವಿಗಳಿಗೆ ಮುಕ್ತ ಅವಕಾಶ ನೀಡುವ ಮೂಲಕ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಮಾಡುವ ಮೂಲಕ ಎಲ್ಲಾ ಕವಿಗಳಿಗೆ ಅವಕಾಶ ನೀಡುವುದು ನಮ್ಮ ಕರ್ತವ್ಯ ಎಂದರು. ಪರಿಸರ ದಿನಾಚರಣೆ ಕುರಿತು ಎಸ್. ರಾಜು ಸೂಲೇನಹಳ್ಳಿ ರಾಜ್ಯಾಧ್ಯಕ್ಷರು ತನುಶ್ರೀ ಸಾಹಿತ್ಯ ವೇದಿಕೆ ತಮ್ಮ ಮಾತುಗಳಲ್ಲಿ 'ಪರಿಸರ ದಿನಾಚರಣೆ ಆದರ ಮಹತ್ವ ಪ್ರಸ್ತುತ ದಿನಗಳಲ್ಲಿ ಪರಿಸರ ಸ್ಥಿತಿ ಏನಾಗಿದೆ ನಾವೆಲ್ಲರೂ ಕೈ ಜೋಡಿಸಿ ಗಿಡಗಳನ್ನು ಪೋಷಿಸುವ ಕೆಲಸ ಮಾಡೋಣ ಎಂದರು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಪುಷ್ಪವಲ್ಲಿ ಎಂ. ಎಮ್. ತಮ್ಮ ನುಡಿಗಳಲ್ಲಿ' ಪ್ರತಿಯೊಬ್ಬ ಕವಿಗಳ ಕವನ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಇನ್ನೂ ಅನುಭವ ಸೇರಿಸಿ ಸಾಕಷ್ಟು ಅರಿವು ಮೂಡಿಸುವ ಕವನ ಹೊರ ಬರಲಿ ಹಾಗೆಯೇ ಸಹೋದರ ಎಸ್. ರಾಜು ಸೂಲೇನಹಳ್ಳಿ ಇಂತಹ ಒಳ್ಳೆಯ ನಿಸ್ವಾರ್ಥ ಕಾರ್ಯಕ...

ಶ್ರೀಮತಿ ಜಯಂತಿ ಚಂದ್ರಶೇಖರ ಅವರು "ಅಖಿಲ ಕರ್ನಾಟಕ ಸ್ಪಂದನ ಸಿರಿ ಪ್ರಥಮ ಸಾಹಿತ್ಯ ಮತ್ತು ಸಂಸ್ಕೃತಿ ಸಮ್ಮೇಳನ", ದ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ.

Image
ದಿನಾಂಕ-೨೫-೦೬-೨೦೨೩ ರಂದು ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ (ರಿ) ಹಾಸನದ 12ನೇ ವಾರ್ಷಿಕೋತ್ಸವದ ಅಂಗವಾಗಿ  ಹಮ್ಮಿಕೊಳ್ಳಲಾಗಿರುವ "ಅಖಿಲ ಕರ್ನಾಟಕ ಸ್ಪಂದನ ಸಿರಿ ಪ್ರಥಮ ಸಾಹಿತ್ಯ ಮತ್ತು ಸಂಸ್ಕೃತಿ ಸಮ್ಮೇಳನ", ದ ಸಮ್ಮೇಳನಾಧ್ಯಕ್ಷರಾಗಿ  ಹಾಸನ ಜಿಲ್ಲೆಯ ಶ್ರವಣಬೆಳಗೊಳದ ಹೆಮ್ಮೆಯ ಸಾಹಿತಿ, ಕವಯಿತ್ರಿ,"ಕಾದಂಬರಿ ಶಾರದೆ",   ಶ್ರೀಮತಿ ಜಯಂತಿ ಚಂದ್ರಶೇಖರ ಅವರು ಸರ್ವಾನುಮತದಿಂದ ಅಯ್ಕೆ ಯಾಗಿರುತ್ತಾರೆ ಹಾಗೂ ಸದಾ ಸಕ್ರಿಯರಾಗಿ ಹಲವಾರು ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸಾಧಕರಾದ ಖ್ಯಾತ ಸಾಹಿತಿ ಹಾಸನದ ಶ್ರೀ ಗೊರೂರು ಅನಂತರಾಜು, ಪ್ರಕೃತಿ ಪೌಂಡೇಷನ್ ನ ಮುಖ್ಯಸ್ಥರಾದ ಅರಸೀಕೆರೆಯ ಶ್ರೀ ನಾಗವೇದಿ ರಂಗಪ್ಪ, ಬೇಲೂರಿನ ಸಾಹಿತಿ ಶ್ರೀಮತಿ ಆಶಾಕಿರಣ್, ವಿಚಾರ ಮಂಟಪ ಬಳಗದ ಅಧ್ಯಕ್ಷರಾದ  ಶ್ರೀ ವರುಣ್ ರಾಜ್ ಜೀ,  ಶಿವಮೊಗ್ಗೆಯ ಸುಮುಖ ಸೇವಾ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಪ್ರೇಮ್ ಗೌಡ, ಮೈಸೂರಿನ ಮುಕ್ತಕ ಕವಿ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಮುತ್ತುಸ್ವಾಮಿ, ಮೈಸೂರಿನ ಮುಕ್ತಕ ಕವಯತ್ರಿ ಶ್ರೀಮತಿ ಕೆ.ಟಿ.ಶ್ರೀಮತಿ, ಹಾಸನದ ಸಹೃದಯ ಸಂಗಮ ಬಳಗದ ನಿರ್ವಾಹಕಿ ಶ್ರೀಮತಿ ಸುನಿತಾಕಿರಣ್, ಹಾಗೂ  ಬೆಂಗಳೂರಿನ ಶ್ರೀಮತಿ ರಮಾದೇವಿ ಪ್ರಸನ್ನ ಇವರುಗಳನ್ನು  ಶ್ರೀ ಮಧುಸೂದನ ರವರ ಸ್ಮರಣಾರ್ಥವಾಗಿ ಪ್ರತಿವರ್ಷ  ಕೊಡಮಾಡಲಾಗುವ "ಸ್ಪಂದನ ಸಿರಿ ತೀ.ನಂ. ಶ್ರೀ.ರಾಜ್ಯ...