ಶ್ರೀಮತಿ ಜಯಂತಿ ಚಂದ್ರಶೇಖರ ಅವರು "ಅಖಿಲ ಕರ್ನಾಟಕ ಸ್ಪಂದನ ಸಿರಿ ಪ್ರಥಮ ಸಾಹಿತ್ಯ ಮತ್ತು ಸಂಸ್ಕೃತಿ ಸಮ್ಮೇಳನ", ದ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ.

ದಿನಾಂಕ-೨೫-೦೬-೨೦೨೩ ರಂದು ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ (ರಿ) ಹಾಸನದ 12ನೇ ವಾರ್ಷಿಕೋತ್ಸವದ ಅಂಗವಾಗಿ  ಹಮ್ಮಿಕೊಳ್ಳಲಾಗಿರುವ
"ಅಖಿಲ ಕರ್ನಾಟಕ ಸ್ಪಂದನ ಸಿರಿ ಪ್ರಥಮ ಸಾಹಿತ್ಯ ಮತ್ತು ಸಂಸ್ಕೃತಿ ಸಮ್ಮೇಳನ", ದ ಸಮ್ಮೇಳನಾಧ್ಯಕ್ಷರಾಗಿ  ಹಾಸನ ಜಿಲ್ಲೆಯ ಶ್ರವಣಬೆಳಗೊಳದ ಹೆಮ್ಮೆಯ ಸಾಹಿತಿ, ಕವಯಿತ್ರಿ,"ಕಾದಂಬರಿ ಶಾರದೆ",

 
ಶ್ರೀಮತಿ ಜಯಂತಿ ಚಂದ್ರಶೇಖರ ಅವರು ಸರ್ವಾನುಮತದಿಂದ ಅಯ್ಕೆ ಯಾಗಿರುತ್ತಾರೆ ಹಾಗೂ ಸದಾ ಸಕ್ರಿಯರಾಗಿ ಹಲವಾರು ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸಾಧಕರಾದ ಖ್ಯಾತ ಸಾಹಿತಿ ಹಾಸನದ ಶ್ರೀ ಗೊರೂರು ಅನಂತರಾಜು, ಪ್ರಕೃತಿ ಪೌಂಡೇಷನ್ ನ ಮುಖ್ಯಸ್ಥರಾದ ಅರಸೀಕೆರೆಯ ಶ್ರೀ ನಾಗವೇದಿ ರಂಗಪ್ಪ, ಬೇಲೂರಿನ ಸಾಹಿತಿ ಶ್ರೀಮತಿ ಆಶಾಕಿರಣ್, ವಿಚಾರ ಮಂಟಪ ಬಳಗದ ಅಧ್ಯಕ್ಷರಾದ  ಶ್ರೀ ವರುಣ್ ರಾಜ್ ಜೀ,  ಶಿವಮೊಗ್ಗೆಯ ಸುಮುಖ ಸೇವಾ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಪ್ರೇಮ್ ಗೌಡ, ಮೈಸೂರಿನ ಮುಕ್ತಕ ಕವಿ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಮುತ್ತುಸ್ವಾಮಿ, ಮೈಸೂರಿನ ಮುಕ್ತಕ ಕವಯತ್ರಿ ಶ್ರೀಮತಿ ಕೆ.ಟಿ.ಶ್ರೀಮತಿ, ಹಾಸನದ ಸಹೃದಯ ಸಂಗಮ ಬಳಗದ ನಿರ್ವಾಹಕಿ ಶ್ರೀಮತಿ ಸುನಿತಾಕಿರಣ್, ಹಾಗೂ  ಬೆಂಗಳೂರಿನ ಶ್ರೀಮತಿ ರಮಾದೇವಿ ಪ್ರಸನ್ನ ಇವರುಗಳನ್ನು  ಶ್ರೀ ಮಧುಸೂದನ ರವರ ಸ್ಮರಣಾರ್ಥವಾಗಿ ಪ್ರತಿವರ್ಷ  ಕೊಡಮಾಡಲಾಗುವ "ಸ್ಪಂದನ ಸಿರಿ ತೀ.ನಂ. ಶ್ರೀ.ರಾಜ್ಯ ಪ್ರಶಸ್ತಿ",ಗೆ ಆಯ್ಕೆ ಮಾಡಲಾಗಿದೆ ಎಂದು  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷೆ ಶ್ರೀಮತಿ ಕಲಾವತಿ ಮಧುಸೂಧನ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಸಮ್ಮೇಳನದ ಸರ್ವಾಧ್ಯಕ್ಷರಿಗೆ ಹಾಗೂ ಎಲ್ಲಾ ಪ್ರಶಸ್ತಿ ಪುರಸ್ಕೃತರಿಗೆ ವಿಚಾರ ಮಂಟಪ ಬಳಗದ ವತಿಯಿಂದ ಪ್ರೀತಿಪೂರ್ವಕ ಅಭಿನಂದನೆಗಳು.


Comments

Popular posts from this blog

ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಕರ್ನಾಟಕ ಸಾಂಸ್ಕೃತಿಕ ವೈಭವ ಕಾರ್ಯಕ್ರಮ.

ತುಮಕೂರಿನಲ್ಲಿ ಕವಿಗೋಷ್ಠಿ ಹಾಗೂ ಪುಸ್ತಕ ಓದು ಸಂವಾದ ಕಾರ್ಯಕ್ರಮ.

ಕಾವ್ಯದೀವಿಗೆ ಕೃತಿ ಲೋಕಾರ್ಪಣೆ