ತುಮಕೂರಿನಲ್ಲಿ ಕವಿಗೋಷ್ಠಿ ಹಾಗೂ ಪುಸ್ತಕ ಓದು ಸಂವಾದ ಕಾರ್ಯಕ್ರಮ.
ಎಲ್ಲರಿಗೂ ನಮಸ್ಕಾರಗಳು,
ಇಂದು, ದಿನಾಂಕ 05:02:2023 ಭಾನುವಾರದಂದು ಮಧ್ಯಾಹ್ನ 01:30 ಕ್ಕೆ ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ, ಹಾಸನ ಹಾಗೂ ವಿಚಾರ ಮಂಟಪ ಸಾಹಿತ್ಯ ಬಳಗ ಇವರ ಜಂಟಿ ಸಹಯೋಗದಲ್ಲಿ ತುಮಕೂರು ನಗರದ ಶೆಟ್ಟಿಹಳ್ಳಿ ಗೇಟ್ ಬಳಿಯ ರಾಘವೇಂದ್ರ ಸ್ವಾಮಿ ಮಠದ ಹತ್ತಿರವಿರುವ ಪಿ ಐ ಸೆಂಟರ್ ವಿದ್ಯಾವಿಹಾರ ಸಭಾಂಗಣ ಇಲ್ಲಿ ಶ್ರೀಮತಿ ಆಶಾಕಿರಣ್ ರವರ ಅಪರಾಧಿ ನಾನಲ್ಲ ಪುಸ್ತಕದ ಓದು - ಸಂವಾದ, ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ತುಮಕೂರು ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ರಾಜ್ಯ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಹೆಚ್ಚು ಆಡಂಬರ, ಅಪವ್ಯಯವಿಲ್ಲದೆ, ವಿಚಾರಪರವಾದ ಓದು - ಸಂವಾದ - ಚಿಂತನೆಗಳ ಮೂಲಕ ಯುವ ಮನಸ್ಸುಗಳಲ್ಲಿ ಸಾಹಿತ್ಯಾಭಿವ್ಯಕ್ತಿಯನ್ನು ಸಾಹಿತ್ಯಾಸಕ್ತಿಯನ್ನು, ಸಮಾಜ ಸೇವಾ ಮನೋಭಾವವನ್ನು ಬೆಳೆಸುವ ಸದ್ದುದೇಶದಿಂದ ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಹಾಗೂ ವಿಚಾರ ಮಂಟಪ ಸಾಹಿತ್ಯ ಬಳಗಗಳು ಜಂಟಿಯಾಗಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದು, ಇದರ ಮುಂದುವರೆದ ಭಾಗವಾಗಿ ನಾಳಿನ ಕಾರ್ಯಕ್ರಮವೂ ನಡೆಯಲಿದೆ.
ಎಲ್ಲಾ ಸ್ನೇಹಿತರೂ ಸಾಹಿತ್ಯಾಭಿಮಾನಗಳು ಸದ್ವಿಚಾರಗಳನ್ನು ತಿಳಿಯುವ, ಅರಿಯುವ, ತಿಳಿಸಿ ಪಸರಿಸುವ ಸದುದ್ದೇಶದಿಂದ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಮೂಲಕ ಉದಯೋನ್ಮುಖ ಬರಹಗಾರರನ್ನು ಪ್ರೋತ್ಸಾಹಿಸುವ ನಮ್ಮ ಪ್ರಯತ್ನಕ್ಕೆ ಮತ್ತಷ್ಟು ಶಕ್ತಿತುಂಬಿ ನಮ್ಮ ಮನ ಸಂತೋಷ ಪಡಿಸಬೇಕೆಂದು ತಮ್ಮೆಲ್ಲರಲ್ಲಿ ವಿನಂತಿಸುತ್ತೇವೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
9448241450, ವರುಣ್ ರಾಜ್ ಜಿ.
ಸರ್ವರಿಗೂ ಸುಸ್ವಾಗತ
Comments
Post a Comment