ಯಶಸ್ವಿಯಾಗಿ ನಡೆದ ಅಖಿಲ ಕರ್ನಾಟಕ ಸ್ಪಂದನ ಸಿರಿ ಪ್ರಥಮ ಸಾಹಿತ್ಯ ಮತ್ತು ಸಂಸ್ಕೃತಿ ಸಮ್ಮೇಳನ.
ಹಾಸನ: 25-6-2023ರ ಭಾನುವಾರ ನಮ್ಮ ಹಾಸನ ಚಾರಿಟಬಲ್ ಟ್ರಸ್ಟ್ ಹಾಗೂ ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಸ್ಪಂದನ ಸಿರಿ 12ನೇ ವಾರ್ಷಿಕೋತ್ಸವದ ಅಂಗವಾಗಿ "ಅಖಿಲ ಕರ್ನಾಟಕ ಸ್ಪಂದನ ಸಿರಿ ಪ್ರಥಮ ಸಾಹಿತ್ಯ ಮತ್ತು ಸಂಸ್ಕೃತಿ ಸಮ್ಮೇಳನವನ್ನು ಸಾಹಿತಿ ಶ್ರೀಮತಿ ಜಯಂತಿ ಚಂದ್ರಶೇಖರ್ ರವರ ಅಧ್ಯಕ್ಷತೆಯಲ್ಲಿ ನೆರವೇರಿಸಲಾಯಿತು.
ಕಾರ್ಯಕ್ರಮವನ್ನು ಹಾಸನ ಜಿಲ್ಲಾ ನ್ಯಾಧೀಶರಾದ ಶ್ರೀಯುತ ರವಿಕಾಂತ್ ರವರು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಕುಟುಂಬಗಳಲ್ಲಿ ಹೊಂದಾಣಿಕೆಯಿಂದ ಇದ್ದಾಗಾ ಮಾತ್ರ ಅಭಿವೃದ್ಧಿಯನ್ನು ಕಾಣಲು ಸಾಧ್ಯ ಎಂದರು.
ಸ್ಪಂದನ ಸಿರಿ ಸಂಸ್ಥಾಪಕ ರಾಜ್ಯಧ್ಯಕ್ಷೆ ಕಲಾವತಿ ಮಧುಸೂದನ ಮತ್ತು ತಂಡದಿಂದ ತಬಲಾ ವಾದಕರಾದ ಶ್ರೀ ಆನಂದ್ ಹಾಗೂ ಕೀಬೋರ್ಡ ಜಯಣ್ಣನವರು ಸುಮಧುರವಾದ ಸುಗಮ ಸಂಗೀತದಿಂದ ಕಾರ್ಯಕ್ರಮವನ್ನು ಆರಂಭಿಸಿದರು.
ನಂತರ ಕಲಾವತಿಮಧುಸೂಧನರವರ ಸೂಕ್ತಿ ಸುಧೆ, ಮುಕ್ತ ಸಂಕಲನ, ಸಂಪಾದಕತ್ವದಲ್ಲಿ "ಮನನ ಮಾರ್ಗ" ಪ್ರಬಂಧ ಸಂಕಲನ ಹಾಗೂ ವಿಚಾರಮಂಟಪ ಸಾಹಿತ್ಯ ವೇದಿಕೆಯಾ ಅಧ್ಯಕ್ಷರಾದ ಶ್ರೀ ವರುಣ್ ರಾಜ್ ಜಿ ಮತ್ತು ಬಳಗದ ಸಂಪಾದಕತ್ವದಲ್ಲಿ ವಿವಿಧ ಕವಿಗಳ ಕವಿತೆಗಳ ಕವನ ಸಂಕಲನಗಳನ್ನು ಸಾಹಿತಿ ಗೊರೂರು ಅನಂತರಾಜು ಮತ್ತು ಗಣ್ಯರಿಂದ ಲೋಕಾರ್ಪಣೆ ಮಾಡಲಾಯಿತು.
ಮತ್ತು ಸಂಸ್ಥೆಗಾಗಿ ನಿಷ್ಠೆಯಿಂದ ಸೇವೆಸಲ್ಲಿಸಿದ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಂತರ ಮಹಿಳಾ ಶೋಷಣೆಯ "ವಿಭಿನ್ನ ಮುಖಗಳು" ವಿಚಾರ ಗೋಷ್ಠಿಯಲ್ಲಿ ಪ್ರಸ್ತುತ ಕುಟುಂಬಗಳು ಸಮಸ್ಯೆಗೆ ಸಿಲುಕುತ್ತಿರುವ ಕಾರಣಗಳನ್ನು ಸವಿವರವಾದ ವಿವರಗಳೊಂದಿಗೆ ಪ್ರಚೋದನ ಸಂಸ್ಥೆಯ ಪೌಲಸ್ ರವರು ಆಶಯ ನುಡಿದರು. ಪ್ರೊ.ಎಂ.ಇರ್ಷಾದ್, ಸಾಹಿತಿ ಶ್ರೀಮತಿ ಶೈಲಜಾ ಹಾಸನ ರವರು ವಿಚಾರಮಂಡನೆ ಮಾಡಿದರು.. ನಂತರ ಅಧ್ಯಕ್ಷೀಯ ನುಡಿಯಲ್ಲಿ ಮಹಿಳಾ ಮತ್ತು ಮಕ್ಕಳ ರಕ್ಷಣಾ ಸಮಿತಿ ಸದಸ್ಯರಾದ ಶ್ರೀಮತಿ ಗೀತಾ ರವರು ಕುಟುಂಬದಲ್ಲೇ ಶೋಷಣೆಗೊಳಗಾಗುತ್ತಿರುವ ಹಲವಾರು ಘಟನೆಗಳನ್ನು ಅತ್ಯಂತ ವಿಷಾದದಿಂದ ಹಂಚಿಕೊಂಡರಲ್ಲದೆ..ಕುಟುಂಬದಲ್ಲೇ ರಕ್ಷಣೆ ಇಲ್ಲದಿರುವ ಕಾರಣ ಎಲ್ಲರೂ ಜಾಗೃತವಾಗಿರುವುದು ಅತ್ಯಂತ ಅವಶ್ಯಕವಾಗಿದೆ ಎಂದು ನುಡಿದರು.
ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಕವಿಗೋಷ್ಠಿಗಳಲ್ಲಿ ಕಲಾವಿದರು ಕವಿಗಳೆಲ್ಲರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ನಮ್ಮ ಹಾಸನ ಚಾರಿಟಬಲ್ ಟ್ಸಸ್ಟ್ ಅಧ್ಯಕ್ಷರಾದ ಹರೀಶ್.ಕೆ.ಆರ್,ಚಿಣ್ಣರ ಲೋಕ ಟ್ರಸ್ಟ್ ಅಧ್ಯಕ್ಷರಾದ ಡಾ.ಹರೀಶ್ ನಿವೃತ್ತ ತಹಶಿಲ್ದಾರರಾದ ಎ.ವಿ.ರುದ್ರಪ್ಪಾಜಿ, ಹಾಸನ ಜಿಲ್ಲಾಧ್ಯಕ್ಷೆ ಶ್ರೀಮತಿ ಆಶಾಕಿರಣ್,ಉಪಾಧ್ಯಕ್ಷರಾದ ಶ್ರೀ ಕೇಶವ ಕಿರಣ್ ನಿರೂಪಿಸಿದರು. ಕಾಸರಗೋಡಿನ ಶಿಕ್ಷಣ ತಜ್ಞರಾದ ವಿ.ಬಿ.ಕುಳಮರ್ವ,ಶ್ರೀ ವೈ.ಎಸ್. ವೀರಭದ್ರಪ್ಪ,
ಪತ್ರಕರ್ತೆ ಲೀಲಾವತಿ, ಪದ್ಮಾವತಿ, ಉದಯರವಿ, ಶುಭಮಂಗಳ ಸತೀಶ್,ಸತೀಶ್,ಆಲೂರು ಅಧ್ಯಕ್ಷರಾದ ಶ್ರೀ ಜಯರಾಮ್ ಬೆಟ್ಟದಯ್ಯ,ವರುಣ್ ರಾಜ್,ಸ್ಮಿತಾ ಹೇಮೇಶ್, ಪ್ರತಿಮಾ ಮಯ್ಯಾ,ದಾಕ್ಷಯಿಣಿ ಮುರುಗನ್,ಪ್ರೇಮಾಪ್ರಶಾಂತ್,ಹಿರಿಯ ಸಾಹಿತಿ ಎನ್.ಎಲ್.ಚನ್ನೇಗೌಡ,ಜನತಾ ಮಾದ್ಯಮ ಶ್ರೀ ರವಿಕುಮಾರ್
ಸೇರಿದಂತೆ ಸುಮಾರು 200ರಕ್ಕೂ ಹೆಚ್ಚು ಆಸಕ್ತರು ಕಲಾವಿದರು ಸಾಹಿತ್ಯಸಕ್ತರೊಂದಿಗೆ ಕಾರ್ಯಕ್ರಮ ಸುಸಂಪನ್ನವಾಯಿತು.
Comments
Post a Comment