ಯಶಸ್ವಿಯಾಗಿ ನಡೆದ ತನುಶ್ರೀ ಸಾಹಿತ್ಯ ವೇದಿಕೆ ನಾಲ್ಕನೇ ರಾಜ್ಯ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮ.


ದಿ :05/06/2023 ರಂದು ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆ (ರಿ) ಚಿತ್ರದುರ್ಗ ವತಿಯಿಂದ ಅಂತರ್ಜಾಲ ಆಧಾರಿತ ರಾಜ್ಯ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮ ಅಧ್ಯಕ್ಷತೆ ಶ್ರೀಮತಿ ಪುಷ್ಪವಲ್ಲಿ ಎಂ. ಎಮ್. ಮುಖ್ಯೋಪಾಧ್ಯಾಯರು ಮತ್ತು ಕವಯಿತ್ರಿ ವಹಿಸಿದ್ದರು. ಪ್ರಾಸ್ತಾವಿಕವಾಗಿ ಬಸವರಾಜ ಪೂಜಾರ್ ಕೋಡಿಹಳ್ಳಿ ಉಪಾಧ್ಯಕ್ಷರು ತನುಶ್ರೀ ಸಾಹಿತ್ಯ ವೇದಿಕೆ ಮಾತನಾಡಿ 'ಇದು ನಮ್ಮ ವೇದಿಕೆ ನಾಲ್ಕನೇ ಕವಿಗೋಷ್ಠಿ ಕಾರ್ಯಕ್ರಮ ಎಲ್ಲಾ ಕವಿಗಳಿಗೆ ಮುಕ್ತ ಅವಕಾಶ ನೀಡುವ ಮೂಲಕ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಮಾಡುವ ಮೂಲಕ ಎಲ್ಲಾ ಕವಿಗಳಿಗೆ ಅವಕಾಶ ನೀಡುವುದು ನಮ್ಮ ಕರ್ತವ್ಯ ಎಂದರು. ಪರಿಸರ ದಿನಾಚರಣೆ ಕುರಿತು ಎಸ್. ರಾಜು ಸೂಲೇನಹಳ್ಳಿ ರಾಜ್ಯಾಧ್ಯಕ್ಷರು ತನುಶ್ರೀ ಸಾಹಿತ್ಯ ವೇದಿಕೆ ತಮ್ಮ ಮಾತುಗಳಲ್ಲಿ 'ಪರಿಸರ ದಿನಾಚರಣೆ ಆದರ ಮಹತ್ವ ಪ್ರಸ್ತುತ ದಿನಗಳಲ್ಲಿ ಪರಿಸರ ಸ್ಥಿತಿ ಏನಾಗಿದೆ ನಾವೆಲ್ಲರೂ ಕೈ ಜೋಡಿಸಿ ಗಿಡಗಳನ್ನು ಪೋಷಿಸುವ ಕೆಲಸ ಮಾಡೋಣ ಎಂದರು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಪುಷ್ಪವಲ್ಲಿ ಎಂ. ಎಮ್. ತಮ್ಮ ನುಡಿಗಳಲ್ಲಿ' ಪ್ರತಿಯೊಬ್ಬ ಕವಿಗಳ ಕವನ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಇನ್ನೂ ಅನುಭವ ಸೇರಿಸಿ ಸಾಕಷ್ಟು ಅರಿವು ಮೂಡಿಸುವ ಕವನ ಹೊರ ಬರಲಿ ಹಾಗೆಯೇ ಸಹೋದರ ಎಸ್. ರಾಜು ಸೂಲೇನಹಳ್ಳಿ ಇಂತಹ ಒಳ್ಳೆಯ ನಿಸ್ವಾರ್ಥ ಕಾರ್ಯಕ್ರಮ ಆಯೋಜನೆ ಮಾಡಿ ತಮ್ಮೆಲ್ಲರಿಗೆ ಅವಕಾಶ ನೀಡಿದ್ದಾರೆ ಎಲ್ಲಾ ಕವಿಗಳಿಗೆ ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಸರ್ವರಿಗೂ ಸ್ವಾಗತ ಚಿದಾನಂದನ ಮೂರ್ತಿ ನೇರ್ಲಹಳ್ಳಿ ಯುವ ಕವಿಗಳು ನೇರವೇರಿಸಿದರು. ಸರ್ವರಿಗೂ ವಂದನಾರ್ಪಣೆ ಮುತ್ತು ಯು ವಡ್ಡರ ಬಾಗಲಕೋಟೆ ಕವಿಗಳು ಅಚ್ಚುಕಟ್ಟಾಗಿ ನೇರವೇರಿಸಿದರು. ಕಾರ್ಯಕ್ರಮದ ನಿರೂಪಣೆ ಜವಾಬ್ದಾರಿ ಶಿವಮೂರ್ತಿ ಟಿ ಕೋಡಿಹಳ್ಳಿ ಸಂಘಟನಾ ಸಂಚಾಲಕರು ತನುಶ್ರೀ ಪ್ರಕಾಶನ ಸೂಲೇನಹಳ್ಳಿ ನೇರವೇರಿಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಒಟ್ಟು 50 ಕ್ಕೂ ಹೆಚ್ಚು ಕವಿಗಳು ಭಾಗವಹಿಸಿದ್ದರು.

Comments

Popular posts from this blog

ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಕರ್ನಾಟಕ ಸಾಂಸ್ಕೃತಿಕ ವೈಭವ ಕಾರ್ಯಕ್ರಮ.

ತುಮಕೂರಿನಲ್ಲಿ ಕವಿಗೋಷ್ಠಿ ಹಾಗೂ ಪುಸ್ತಕ ಓದು ಸಂವಾದ ಕಾರ್ಯಕ್ರಮ.

ಕಾವ್ಯದೀವಿಗೆ ಕೃತಿ ಲೋಕಾರ್ಪಣೆ