ಹೆಚ್. ಎಸ್. ಪ್ರತಿಮಾ ಹಾಸನ್ ರವರಿಗೆ ರೋಟರಿ ಮೈಸೂರ್ ಸ್ಟಾರ್ ಪ್ರಶಸ್ತಿ ಪ್ರಧಾನ.
ಲೇಖಕಿಯಾಗಿ, ಗಾಯಕಿಯಾಗಿ, ಶಿಕ್ಷಕಿಯಾಗಿ, ಸಮಾಜಸೇವಕಿಯಾಗಿ ಎಲ್ಲಾ ಕ್ಷೇತ್ರದಲ್ಲೂ ಗುರುತಿಸಿಕೊಂಡಿರುವ ಆಶು ಕವಿತ್ರಿ, ವಾಗ್ಮಿ ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್ ರವರು ಬಹುಮುಖ ಪ್ರತಿಭೆ, ಇವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು, ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ ಟ್ರಸ್ಟ್ ಮೈಸೂರು, ಹಿಮಾಲಯ ಪ್ರತಿಷ್ಠಾನ ಮೈಸೂರು, ರೋಟರಿ ಕ್ಲಬ್ ಆಫ್ ಮೈಸೂರು ಸ್ಟಾರ್ಸ್, ಈ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆದ ರಾಜ್ಯಮಟ್ಟದ ಪ್ರಥಮ ಮುಕ್ತಕ ಸಾಹಿತ್ಯೋತ್ಸವ 2023ರಲ್ಲಿ ಇವರು ರಚಿಸಿದ ಮುಕ್ತಕಗಳನ್ನು, ಮುಕ್ತಕ ವಾಚನವನ್ನು ಗುರುತಿಸಿ ಸನ್ಮಾನಿಸಲಾಯಿತು. ಅಲ್ಲದೇ, ಕಾವ್ಯದಲ್ಲಿ ಇವರ ಸಾಧನೆಯನ್ನು ಗುರುತಿಸಿ, ರೋಟರಿ ಕ್ಲಬ್ ಆಫ್ ಮೈಸೂರು ಸ್ಟಾರ್ಟ್ ನ ಅಧ್ಯಕ್ಷರಾದ ಸಂತೋಷ್ ಗೌಡರವರು ರೋಟರಿ ವತಿಯಿಂದ ಸಾಧಕಿಯಾದ ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್ ರವರಿಗೆ "ರೋಟರಿ ಮೈಸೂರು ಸ್ಟಾರ್" ಎಂಬ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ಮುಕ್ತಕ ಕವಿ ಪರಿಷತ್ತಿನಲ್ಲಿ ಹಾಸನದ ಜಿಲ್ಲಾಧ್ಯಕ್ಷರಾಗಿ ಶ್ರೀಯುತರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಮುಕ್ತಕ ಪರಿಷತ್ತಿನ ಸಂಸ್ಥಾಪಕರಾದ ಮುತ್ತುಸ್ವಾಮಿ ರವರು, ಮುಕ್ತ ಕ ಸಮ್ಮೇಳನದ ಅಧ್ಯಕ್ಷರಾದಂತಹ ಕಮಲಾ ರಾಜ್ಯೋತ್ಸವರು, ಹಿಮಾಲಯ ಪ್ರತಿಷ್ಠಾನದ ಸಂಸ್ಥಾಪಕ ಅನಂತ. ಏನ್. ರವರು ರೋಟರಿ ಕ್ಲಬ್ ಆಫ್ ಮೈಸೂರು ಸ್ಟಾರ್ಸ್ ಅಧ್ಯಕ್ಷರಾದ ಸಂತೋಷ್ ಗೌಡ ರವರು, ಶಾಸಕರಾದಂತಹ ಶ್ರೀವತ್ಸ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Comments
Post a Comment