ಸಂಜಯಕುಮಾರ ಯ. ಬಿರಾದಾರ ಅವರಿಗೆ ಧಾರವಾಡ ಜಿಲ್ಲಾಧಿಕಾರಿಗಳಾದ ಮಾನ್ಯ ಶ್ರೀ ಗುರುದತ್ತ ಹೆಗಡೆ ಅವರಿಂದ ಅಭಿನಂದನೆ.
ಕರ್ನಾಟಕ ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಸ್ವಯಂ ಸೇವಕ ಹಾಗೂ ಸಮಾಜ ಸೇವಕನಾದ ಕು. ಸಂಜಯಕುಮಾರ ಯ. ಬಿರಾದಾರ ಅವರಿಗೆ ಧಾರವಾಡ ಜಿಲ್ಲಾಧಿಕಾರಿಗಳಾದ ಮಾನ್ಯ ಶ್ರೀ ಗುರುದತ್ತ ಹೆಗಡೆ ಅವರು ಕು. ಸಂಜಯಕುಮಾರ ಯ. ಬಿರಾದಾರ ಇವರು ಸನ್ 2023ರ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಸ್ವೀಪ್ ಕಾರ್ಯಕ್ರಮದಡಿಯಲ್ಲಿ ಭಿತ್ತಿ ಚಿತ್ರ ಹಾಗೂ ಜಾಗೃತಿ ಬರಹಗಳ ಮೂಲಕ ಮತದಾರರಿಗೆ ಮತದಾನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮತದಾನ ಜಾಗೃತಿಯ ಅಭಿಯಾನದಲ್ಲಿ ಪಾಲ್ಗೊಂಡಿದ್ದಕ್ಕಾಗಿ ಸದರಿಯವರನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಭಿನಂದಿಸಿ ಮಾನ್ಯ ಜಿಲ್ಲಾಧಿಕಾರಿಗಳು ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಜಯ್ ಅವರಿಗೆ ಬಸವನ ಬಾಗೇವಾಡಿ ತಾಲ್ಲೂಕಿನ ಶಾಸಕರು ಹಾಗೂ ಸಚಿವರಾದ ಶ್ರೀ ಶಿವಾನಂದ ಎಸ್ ಪಾಟೀಲ್, ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಕೆ.ಬಿ. ಗುಡಸಿ, ಕುಲಸಚಿವರಾದ ಪ್ರೊ. ಯಶಪಾಲ ಕ್ಷೀರಸಾಗರ, ಕ.ವಿ.ವಿ ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಪ್ರೊ. ಸಂಗಪ್ಪ ಜಿ ಚಲವಾದಿ, ಎನ್.ಎಸ್.ಎಸ್ ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತರಾದ ಡಾ. ಬಿ.ಎಸ್.ಭಜಂತ್ರಿ, ಭೂಗೋಳಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ವಿ.ಬಿ.ಸಾವಿರಮಠ, ಪ್ರಾಧ್ಯಾಪಕರಾದ ಶೈಲಜಾ ಅಮರಶೆಟ್ಟಿ ಅವರು ಹಾಗೂ ಶಿಕ್ಷಕರು, ಸ್ನೇಹಿತರು, ಕುಟುಂಬದವರು ಶುಭಹಾರೈಸಿದ್ದಾರೆ.
Comments
Post a Comment