Posts

Showing posts from March, 2023

ರಾಜಕೀಯ ಪಕ್ಷಗಳ ಪ್ರಣಾಳಿಕೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಯ ಹಕ್ಕೊತ್ತಾಯವನ್ನು ಸೇರ್ಪಡೆಗೊಳಿಸುವಂತೆ ಮನವಿ.

Image
ದಿನಾಂಕ 30.03.2023 ರಂದು ಹಾಸನ ಜಿಲ್ಲಾ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದಿಂದ  "ಬಾಲಕಾರ್ಮಿಕ ಪದ್ಧತಿ ವಿರೋದಿ ಆಂದೋಲನ, ಕರ್ನಾಟಕ" ಇದರ ವತಿಯಿಂದ ರಾಜಕೀಯ ಪಕ್ಷಗಳ ಪ್ರಣಾಳಿಕೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಯ  ಹಕ್ಕೊತ್ತಾಯವನ್ನು ಸೇರ್ಪಡೆಗೊಳಿಸುವಂತೆ ಎಲ್ಲಾ ಪಕ್ಷಗಳ ಕಛೇರಿಗಳನ್ನು ಸಂಪರ್ಕಿಸಿ ಮನವಿ ಸಲ್ಲಿಸಲಾಯಿತು.  ಸಾಮಾಜಿಕ ಪಿಡುಗಾದ ಮಾದಕ ವ್ಯಸನ,ವೇಶ್ಯಾವಾಟಿಕೆ,ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ,ಪೋಕ್ಸೋ ಹೀಗೇ ಹಲವಾರು ಪಿಡುಗುಗಳ ಪರಿಹಾರದತ್ತ ಗಮನ ಹರಿಸುವುದು ಅವಶ್ಯಕವಾಗಿದೆ. ಈ ಕಾರಣಗಳಿಂದ  ಮಕ್ಕಳ ಭವಿಷ್ಯವೇ ಪ್ರತಿ ಕ್ಷಣ ಪ್ರತಿ ಕುಟುಂಬವು ಆತಂಕದಲ್ಲಿ  ಸಿಲುಕಿರುವ ಕಾರಣ ಇದರ ಕುರಿತು ರಾಜಕೀಯ ಪಕ್ಷಗಳೂ ಗಮನ ಹರಿಸಿ ಜಾಗೃತಿ ಮತ್ತು ರಕ್ಷಣಾ ಕಾರ್ಯಕ್ಕೆ ಮುಂದಾಗಬೇಕೆಂದು.  ಮತ್ತು ಪ್ರಸ್ತುತ ಪರಿಸ್ಥಿತಿಯಲ್ಲಿ ಇದು ಹೆಚ್ಚು ಪ್ರಯೋಜನಕಾರಿಯಾಗಿ ಪರಿಣಾಮ ಬೀರುವಲ್ಲಿ ಎಲ್ಲರ ಸಹಕಾರವನ್ನು ಕೋರಿ ಮನವಿ ಸಲ್ಲಿಸಲಾಯಿತು.. ಈ ಆಂದೋಲನಕ್ಕೆ ಪ್ರಚೋದನ ಸಂಸ್ಥೆಯ ಪೌಲಸ್, ಪ್ರಜ್ವಲ್, ಸ್ಪಂದನ ಸಿರಿ ವೇದಿಕೆ ಕಲಾವತಿಮಧುಸೂದನ, ಜೀವಧಾರ ಸುನೀಲ್,ಹರ್ಷಿತಾ ಶೈಲಾ,ವಿವೇಕಾನಂದ ಯೂತ್ ಮೂವ್ ಮೆಂಟ್,ಗೋವಿಂದ್,ಮುಂತಾದವರು ಪಾಲ್ಗೊಳ್ಳುವ ಮೂಲಕ ಪ್ರಚಾರ ಕಾರ್ಯ ಯಶಸ್ವಿಯಾಗಿ ನೆರವೇರಿತು.

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ, ಹಾಸನ ಇವರ ಅಂತರ್ಜಾಲತಾಣದ ೧೦೪ ನೇ ಮಾಲಿಕೆಯ ಕಾರ್ಯಕ್ರಮ.

Image
ದಿನಾಂಕ-೨೬-೩-೨೦೨೩ ರ ಭಾನುವಾರ ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ, ಹಾಸನ ವತಿಯಿಂದ  ಬದುಕು-ಬರಹದ  ೧೦೪ ನೇ ಮಾಲಿಕೆಯ "ಅಂತರ್ಜಾಲತಾಣ ಕಾರ್ಯಕ್ರಮದಲ್ಲಿ  ಪೂಜ್ಯರಾದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಜಿಯವರಿಗೆ ಗೀತನಮನವನ್ನು ಸಲ್ಲಿಸುವುದರೊಂದಿಗೆ ಪ್ರಥಮ ವಚನಕಾರರಾದ ಜೇಡರ ದಾಸಿಮಯ್ಯನ ಜಯಂತಿಯನ್ನು ಆಚರಿಸಲಾಯಿತು.       ಬೆಂಗಳೂರು ಜಿಲ್ಲಾ ಸಂಯೋಜಕರಾದ  ಶ್ರೀಮತಿ ರಮಾಪ್ರಸನ್ನ ರವರು ಆಧ್ಯಪ್ರವರ್ತಕರು ಮತ್ತು ಪ್ರಥಮ ವಚನಕಾರರಾದ ಜೇಡರ ದಾಸಿಮಯ್ಯ  ಕಾಯಕವೇ ಕೈಲಾಸವೆಂದು ಬಾಳಿ ವೈಚಾರಿಕ ಚಿಂತನೆಯ  ಮಾರ್ಗದರ್ಶಕರಾಗಿದ್ದವರು ಎಂದು ಪ್ರಾಸ್ತಾವಿಕ ನುಡಿದರು. ಸುನಂದ ಸುಭಾಷ್ ಪ್ರಾರ್ಥನೆಯಿಂದ ಆರಂಭಿಸಿ, ರಾಜ್ಯಾಧ್ಯಕ್ಷರಾದ ಕಲಾವತಿಮಧುಸೂದನ ಜೇಡರ ದಾಸಿಮಯ್ಯನ ವಚನ ಗಾಯನದೊಂದಿಗೆ ಕಗ್ಗದ ವಾಚನ ಮಾಡಿದರು. ವ್ಯಾಖ್ಯಾನದಲ್ಲಿ  ಅಳಿವಿಲ್ಲದ ಪ್ರಕೃತಿಯ ವಿಶೇಷತೆಯಲ್ಲಿ  ರಾಗದ್ವೇಷಗಳೆಂಬ ತೊಡಕು ಕೊನೆಯಿರದ ಬಲೆ ಇದ್ದಂತೆ. ಆ ಬಲೆಯೊಳಗಿದ್ದೇ ಇಲ್ಲದಂತೆ ಸನ್ಮಾರ್ಗದಿಂದ ಶಾಂತಿ ನೆಮ್ಮದಿಯನ್ನು ಕಂಡುಕೊಳ್ಳುವ ಮೂಲಕ ಉತ್ತಮ ಜೀವನವನ್ನು ರೂಪಿಸಿಕೊಳ್ಳುವ ಮಾರ್ಗವನ್ನು ಡಿವಿಜಿಯವರು ಕಗ್ಗದಲ್ಲಿ ಸೂಚಿಸಿದ್ದಾರೆ ಎಂದರು.  ತದನಂತರ ಹಿರಿಯರಾದ ಶ್ರೀಮತಿ ರಾಜಮ್ಮ ಶ್ರೀನಿವಾಸ್, ದಾಕ್ಷಾಯಿಣಿ ಮುರುಗನ್, ಇಂದುಮತಿ,ಪರಿಣಿತ,ಸ್ಮಿತಾ ಹೇಮ...

ಕರುನಾಡ ಹಣತೆ ಕವಿ ಬಳಗ ತುಮಕೂರು ಜಿಲ್ಲೆ ಕಲ್ಪತರೋತ್ಸವ-2023ರ ಸಾಹಿತ್ಯ ಸಮ್ಮೇಳನದ ಶ್ರೀ ಸಿದ್ದಗಂಗಾ ಶ್ರೀ ಪ್ರಶಸ್ತಿಯನ್ನು ವಿದ್ಯಾರ್ಥಿ ರಹಿಮಾನ್ ನದಾಫ್ ಇವರಿಗೆ ಪ್ರಧಾನ‌ ಮಾಡಲಾಯಿತು.

Image
ಮಾರ್ಚ್26 ಭಾನುವಾರದಂದು ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣದಲ್ಲಿ ನಡೆದ ಕರುನಾಡ ಹಣತೆ ಕವಿ ಬಳಗ ತುಮಕೂರು ಜಿಲ್ಲೆ ಕಲ್ಪತರೋತ್ಸವ-2023ರ ಸಾಹಿತ್ಯ ಸಮ್ಮೇಳನವು ಜರುಗಿತು. ವಿದ್ಯಾರ್ಥಿ, ಸಾಹಿತಿ, ಬಾಗಲಕೋಟ್ ಜಿಲ್ಲೆ ಇಲಕಲ್ ತಾಲೂಕಿನ ಚಟ್ನಿಹಾಳ್ ಗ್ರಾಮದ ಕು.ರಹಿಮಾನಸಾಬ್. ಖಾ.ನದಾಫ್ ಇವರು ವಿದ್ಯಾರ್ಥಿಯಾಗಿದ್ದು, ಇವರು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿ ಕೊಂಡಿದ್ದಾರೆ. ಹಲವಾರು ಕವಿಗೋಷ್ಠಿಗಳಲ್ಲಿ ಇವರು ಕವನ‌ವಾಚನ ಮಾಡಿದ್ದು,  ಹೊನ್ನಕುಸುಮು ಸಾಹಿತ್ಯ ವೇದಿಕೆ, ಹಂಪಿ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಬರಹಗಾರರ ಸಂಘ ಹೂವಿನ ಹಡಗಲಿ,   ಸಾವಿರ ಕವಿಗೋಷ್ಠಿಯಲ್ಲಿ ಹೊರತರಲಾದ ಹುಡುಕಾಟ ಸಂಕಲನದಲ್ಲಿ ಶ್ರೀಯುತರ ಕವನ 'ಬನ್ನಿ ಕನ್ನಡವನ್ನು ಕಟ್ಟೋಣ' ಸೇರ್ಪಡೆಯಾಗಿದೆ. ಕರುನಾಡ ಹಣತೆ ಕವಿ ಬಳಗ ಚಿತ್ರದುರ್ಗ ವತಿಯಿಂದ ಬಾಗಲಕೋಟ ಜಿಲ್ಲೆಯ ಯುವ ಸಂಘಟನ ಕಾರ್ಯದರ್ಶಿಯಾಗಿಯೂ ಆಯ್ಕೆಯಾಗಿದ್ದು, ಇತ್ತೀಚಿಗೆ ದಲಿತ ವಿದ್ಯಾರ್ಥಿ ಪರಿಷತನ್ ತಾಲೂಕಿನ ಪ್ರಧಾನ್ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಈ ಎಲ್ಲಾ ವಿಭಾಗದಲ್ಲಿ ಉದಯೋನ್ಮುಖಿವಾಗಿ ಬೆಳೆಯುತ್ತಿರುವ  ರಹಿಮಾನಸಾಬ್ ನದಾಫ್ ರವರ ಪ್ರತಿಭೆ ಹಾಗೂ ಸಾಹಿತ್ಯ ಸೇವೆಯನ್ನು ಗುರುತಿಸಿ. ರಾಜ್ಯ ಕರುನಾಡ ಹಣತೆ ಕವಿ ಬಳಗ & ಸಂಸ್ಕೃತಿಕ ಕಲಾ ತಂಡ ಚಿತ್ರದುರ್ಗ ಜಿಲ್ಲೆ ಕರುನಾಡ ಹಣತೆ ಕವಿ ಬಳಗ ತುಮಕೂರ ಕನ್ನಡ ಕಲ್ಪತರೋತ್ಸವ...

ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ.

Image
ಶ್ರೀಮತಿ ಸವಿತಾ ಅಮರಶೇಟ್ಟಿ ಅಭಿಮಾನಿ ಬಳಗ ಧಾರವಾಡ, ಗ್ರಾಮೀಣ ಮತಕ್ಷೇತ್ರ ಇವರ ನೇತೃತ್ವದಲ್ಲಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ, ಧಾರವಾಡ. ಹಾಗೂ ಎಸ್.ಡಿ.ಎಮ್ ನಾರಾಯಣ ಹೃದಯಾಲಯ, ಧಾರವಾಡ, ಇವರ ಸಹಯೋಗದಲ್ಲಿ ತಜ್ಞವೈದ್ಯರಿಂದ “ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ” ವನ್ನು ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಸರಕಾರಿ ಮಾದರಿಯ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ  ಆಯೋಜಿಸಲಾಯಿತು.  ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿದ ಶ್ರೀಮತಿ ಸವಿತಾ ಅಮರಶೇಟ್ಟಿ ಅವರು ಮಾತನಾಡಿ ಈಗಿನ ಕಾಲಘಟ್ಟದಲ್ಲಿ ಮನುಷ್ಯ ತಮ್ಮ ಒತ್ತಡ ಜೀವನ ಶೈಲಿಯಿಂದ ಅಧಿಕ ರಕ್ತದೊತ್ತಡ, ಮಧುಮೇಹ ಮಾನಸಿಕ ಒತ್ತಡ ಸೇರಿದಂತೆ ಹಲವಾರು ಕಾಯಿಲೆಗಳನ್ನು ಹೊಂದಿರುತ್ತಾರೆ. ಕಾಲಕಾಲಕ್ಕೆ ತಪಾಸಣೆ ಹಾಗೂ ವೈದ್ಯರ ಚಿಕಿತ್ಸೆಯಿಂದ ರೋಗಗಳನ್ನು ಪ್ರಾಥಮಿಕ ಹಂತದಲ್ಲಿಯೆ ಪತ್ತೆ ಹಚ್ಚಿ ಗುಣಪಡಿಸಬಹುದು ಎಂದರು. ನಮ್ಮ ಸುವರ್ಣ ಎಜ್ಯುಕೇಶನ್ ಟ್ರಸ್ಟ್ (ರಿ) ಸಾರ್ವಜನಿಕರ ಸೇವೆಗಾಗಿಯೇ ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದೆ. ಯಾರಿಗೆ ಅಗತ್ಯತೆ ಇರುತ್ತದೆಯೋ ಅಲ್ಲಿ ಸೇವೆ ಮಾಡುವ ಕೆಲಸ ನಮ್ಮ ಸುವರ್ಣ ಎಜುಕೇಶನ್ ಟ್ರಸ್ಟ್ ವತಿಯಿಂದ ನಡೆಯುತ್ತದೆ. ಮನುಷ್ಯನಿಗೆ ಆರೋಗ್ಯವೇ ಮುಖ್ಯ, ಅದನ್ನು ನಾವು ಕಾಪಾಡಿಕೊಳ್ಳಬೇಕು ಆದ್ದರಿಂದ ಈ ಶಿಬಿರದ ಉಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು, ಎಂದ ಅವರು ಹೆಬ್ಬಳ್ಳಿ ಗ್ರಾಮಂತರ ಭಾಗದ ಜನರು ಇದರ ಸದುಪಯೋಗ ...

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ವತಿಯಿಂದ ನೈಪುಣ್ಯ ಕೌಶಲ್ಯ ಅಭಿವೃದ್ಧಿ ಕೇಂದ್ರದ ಉದ್ಘಾಟನೆ.

Image
17/3/2023 ರಿಂದ 18/3/2023 ಎರಡು ದಿನಗಳ ಕೌಶಲ್ಯ ತರಬೇತಿಯನ್ನು ಉತ್ತರ ವಿಶ್ವವಿದ್ಯಾಲಯದ ವತಿಯಿಂದ ನೈಪುಣ್ಯ ಕೌಶಲ್ಯ ಅಭಿವೃದ್ಧಿ ಕೇಂದ್ರದ ಉದ್ಘಾಟನೆಯನ್ನು ಮಾನ್ಯ ಕುಲಪತಿಗಳಾದ ನಿರಂಜನ ವಾನಳ್ಳಿ ಅವರು ಉದ್ಘಾಟನೆ ಮಾಡಿ ಮಾತನಾಡುತ್ತಾ ಈ ಆಧುನಿಕ ಕಾಲಘಟ್ಟದಲ್ಲಿ ತುಂಬಾ ಯುವಜನರು ಕೆಲಸವಿಲ್ಲದೆ ಅಲೆಯುತ್ತಿದ್ದಾರೆ ಅವರಲ್ಲಿ ಇರುವ ಕೌಶಲ್ಯದ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಈ ಕೌಶಲ್ಯ ಅಭಿವೃದ್ಧಿ ಕೇಂದ್ರ ಪ್ರಮುಖ ಪಾತ್ರವನ್ನು ವಹಿಸಲಿದೆ ಇದರ ಸದುಪಯೋಗವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಪ್ರತಿಯೊಬ್ಬರಲ್ಲೂ ಅಗಾಧವಾದ ಶಕ್ತಿ ಇರುತ್ತದೆ ಆ ಕೆಲಸವನ್ನು ಹೊರತೆಗೆಯುವ ಕೆಲಸವನ್ನು ನಾವು ಮಾಡಬೇಕು ತುಂಬಾ ಜನಕ್ಕೆ ಇಂಗ್ಲಿಷ್ ಎಂದರೆ ಭಯ ಇಂಗ್ಲಿಷ್ ಬರದೇ ಇರುವ ಒಂದೇ ಒಂದು ಕಾರಣಕ್ಕೆ ಸಂದರ್ಶನದಲ್ಲಿ ವಿಫಲರಾಗುತ್ತಿರುತ್ತಾರೆ. ಕೆಲಸ ಸಿಗದೇ ಆಗುತ್ತಿರುತ್ತದೆ. ಧೈರ್ಯದಿಂದ ಮುನ್ನುಗ್ಗಿದರೆ ಕಲಿತರೆ ಎಲ್ಲವೂ ಸಾಧ್ಯವಾಗುತ್ತದೆ ಈ ಕೇಂದ್ರದಿಂದ ಇಂಗ್ಲಿಷ್ನ್ನು ಕಲಿಸುವ ಕೆಲಸವನ್ನು ಮಾಡಲಾಗುತ್ತದೆ ಎರಡು ದಿನಗಳ ಕಾಲ ಮೈಸೂರಿನ ಫೋಕಸ್ ಅಕಾಡೆಮಿಯಿಂದ ಬಂದಿರುವ ಮುರಳಿಧರನ್ ಮತ್ತು ಉಮೇಶ್ ಅವರು ನಿಮಗೆ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಳ್ಳುವ ನಿಟ್ಟಿನಲ್ಲಿ ತರಬೇತಿಯನ್ನು ಕೊಡಲಿದ್ದಾರೆ ಅದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು. ಮೌಲ್ಯಮಾಪನ ಕುಲ ಸಚಿವರಾದ ಡಾ. ಡಿ ಡಾಮಿನಿಕ್ ಅವರು ಮಾತನಾಡುತ್ತಾ ವಚನ ಚಳು...

ಪುತಿನ ಅವರ ಜನ್ಮದಿನದ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮ

Image
ದಿನಾಂಕ: 17.03.2023 ರಂದು ಸಂಜೆ 06:00 ಘಂಟೆಗೆ ಗೂಗಲ್ ಮೀಟ್ ಸಾಮಾಜಿಕ ಜಾಲತಾಣದಲ್ಲಿ ವಿಚಾರ ಮಂಟಪ ಬಳಗ ಹಾಗೂ ತನುಶ್ರೀ ಸಾಹಿತ್ಯ ಸಾಂಸ್ಕೃತಿಕ ಕಲಾ ವೇದಿಕೆ (ರಿ) ಇವರ ಜಂಟಿ ಸಹಯೋಗದಲ್ಲಿ  ಪು.ತಿ.ನ. ಅವರ ಜನ್ಮದಿನದ  ಪ್ರಯುಕ್ತ ವಿಶೇಷ ಉಪನ್ಯಾಸ  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತುಮಕೂರಿನ ಸಂಶೋಧಕರಾದ  ರಂಗಸ್ವಾಮಿ ಹೆಚ್ ಇವರು "ಚಿಂತನಾಶೀಲ ಪ್ರತಿಭೆಯ ಕವಿ ಪುತಿನ" ಎಂಬ ವಿಷಯವನ್ನು ಕುರಿತು ಉಪನ್ಯಾಸ ನೀಡಲಿದ್ದು, ಎಲ್ಲಾ ಸಾಹಿತ್ಯಾಸಕ್ತರು ಬಾಗವಹಿಸಬೇಕೆಂದು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: #9448241450 ವರುಣ್ ರಾಜ್ ಜಿ. http://meet.google.com/vuj-mopx-dzo

ಒಂದೊಂದು ಮಗುವೂ ದೇಶದ ಅಮೂಲ್ಯವಾದ ದೊಡ್ಡ ಆಸ್ತಿ - ಕಲಾವತಿ ಮಧುಸೂದನ.

Image
ಒಂದೊಂದು ಮಗುವೂ ದೇಶದ ಅಮೂಲ್ಯವಾದ ದೊಡ್ಡ ಆಸ್ತಿ. ಆದರೇ ವಿದ್ಯಾರ್ಥಿ ಹಂತದಲ್ಲೇ ಹಲವಾರು ಕಾರಣಗಳಿಂದ ಬಾಲ್ಯವಿವಾಹವಾಗಿ ಆರಂಭದಲ್ಲೇ ವಿದ್ಯಾಭ್ಯಾಸ ಕಡಿತಗೊಂಡು ಉತ್ತಮ ಭವಿಷ್ಯಗಳೇ ಮುರುಟಿ ಹೋಗುತ್ತಿವೆ. ಇದು ದಿನೇದಿನೇ ಹೆಚ್ಚುತ್ತಿದ್ದು  ದೇಶದ ಸರ್ವಾಂಗೀಣ ಅಭಿವೃದ್ಧಿ ಕುಂಠಿತವಾಗಲು ಕಾರಣವಾಗುತ್ತಿದೆ. ದೇಶದ ಪ್ರಗತಿಗೆ ಮಾರಕವಾಗುತ್ತಿರುವುದು ಆತಂಕಕಾರಿಯಾಗಿದೆ.  ಈ ಪಿಡುಗನ್ನು ತಡೆಗಟ್ಟುವುದು ಸಮಾಜದ ಎಲ್ಲಾ ಸ್ಥರಗಳ ಹೊಣೆಗಾರಿಕೆಯಾಗಿದೆ. ಎಂದು ಹಾಸನ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಹಾಸನ ಜಿಲ್ಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಮತ್ತು ಪೃಕೃತಿ ಫೌಂಡೇಶನ್ ಸಹಯೋಗದೊಂದಿಗೆ ಹೊಳೆನರಸಿಪುರದ ಶಿಕ್ಷಕರ ಭವನದಲ್ಲಿ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದ ಪ್ರಾಸ್ತಾವಿಕದಲ್ಲಿ ಸ್ಪಂದನ ಸಿರಿ ರಾಜ್ಯಾಧ್ಯಕ್ಷೆ ಕಲಾವತಿ ಮಧುಸೂದನರವರು ಮಾತನಾಡುತ್ತಾ, ಬಾಲ್ಯವಿವಾಹದಂತಹ ಪಿಡುಗನ್ನು ತಡೆಗಟ್ಟುವಲ್ಲಿ ಪೋಶಕರೊಂದಿಗೆ ಸಮುದಾಯದ ಶಾಲೆಗಳ ಪಾತ್ರವೂ ಮಹತ್ವದ್ದಾಗಿದ್ದು. ಈ ಕುರಿತು ಗಂಭೀರವಾಗಿ ಸಮಾಲೋಚಿಸಿ ತುರ್ತಾಗಿ ಕಾರ್ಯಪ್ರವೃತ್ತವಾಗುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.  ಉದ್ಘಾಟಕರಾಗಿ  ಗೌರವಾನ್ವಿತ ಹಿರಿಯ ಜಿಲ್ಲಾ ನ್ಯಾಯಾಧೀಶರಾದ ಶ್ರೀ ರವಿಕಾಂತ್ ರವರು ಮಕ್ಕಳಿಗೆ ಯಾವುದೇ ರೀತಿಯಾದ ಕುಂದು ಕೊರತೆಗಳಿದ್ದಲ್ಲಿ ಕೂಡಲೇ ...

ಮಹಾರಾಷ್ಟ್ರ ಸರ್ಕಾರಕ್ಕೆ ಅಭಿನಂದನೆಗಳು‌ - ಸಂಗಮೇಶ ಎನ್ ಜವಾದಿ.

Image
ಬೀದರ/ಚಿಟಗುಪ್ಪ: ಮಹಾರಾಷ್ಟ್ರ ಸರಕಾರ ಲಿಂಗಾಯತ ಧರ್ಮದ ಉನ್ನತಿಗಾಗಿ "ಬಸವೇಶ್ವರ ಆರ್ಥಿಕ ವಿಕಾಸ  ಮಹಾಮಂಡಳ ಘೋಷಣೆ" ಮಾಡಿ ಎರಡು ನೂರು ಕೋಟಿ ಅನುದಾನ ನೀಡಲು ಬಜೆಟ್ ನಲ್ಲಿ ಪ್ರಸ್ತಾವನೆ ಮಾಡಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಸಾಹಿತಿ, ಪತ್ರಕರ್ತ, ಸಮಾಜ ಸೇವಕರಾದ ಸಂಗಮೇಶ ಎನ್ ಜವಾದಿ ನುಡಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು  ಬಜೆಟ್ ನಲ್ಲಿ ಮಂಡನೆ ಮಾಡಿ, ಇಡೀ ಲಿಂಗಾಯತ ಧರ್ಮದವರ ಹೃದಯ ಗೆದ್ದ ಮಾಹಾರಾಷ್ಟ್ರ ಸರ್ಕಾರಕ್ಕೆ ಹಾಗೂ ಲಿಂಗಾಯತ ಧರ್ಮದ ಉನ್ನತಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಸರ್ವರಿಗೂ ಅಭಿನಂದನೆಗಳು ಸಲ್ಲಿಸುತ್ತೇವೆ.ಲಿಂಗಾಯತರ ಸ್ಥಿತಿ ಗತಿ, ಲಿಂಗಾಯತ ಧರ್ಮ ಮಾನ್ಯತೆ, ಮೀಸಲಾತಿ ಸೇರಿದಂತೆ ಸಮತಾವಾದ ಸಾರುವ ಬಸವ ತತ್ವ ಸಿದ್ಧಾಂತಗಳನ್ನು ಜಾಗತಿಕ ಮಟ್ಟದಲ್ಲಿ ಬೆಳೆಸುವ ಕಾರ್ಯ ಮಹಾರಾಷ್ಟ್ರ ಸರ್ಕಾರ ಇನ್ನು ಹೆಚ್ಚಿನ ರೀತಿಯಲ್ಲಿ ಮಾಡಲಿ ಎಂದು ಪ್ರಾರ್ಥಿಸುತ್ತೇವೆ. ಅದೇ ರೀತಿ ಕೇಂದ್ರ ಸರ್ಕಾರವು ಸಹ ರಾಷ್ಟ್ರ ಮಟ್ಟದಲ್ಲಿ ಬಸವ ಜಯಂತಿ ಆಚರಣೆ ಮಾಡಬೇಕು. ಬಸವಕಲ್ಯಾಣ ಹಾಗೂ ಕೂಡಲಸಂಗಮ ಕ್ಷೇತ್ರಗಳು ಅಂತಾರಾಷ್ಟ್ರೀಯ ಪ್ರವಾಸೋದ್ಯಮ ತಾಣವಾಗಿ ಘೋಷಣೆ ಮಾಡಬೇಕು. ಬಸವಕಲ್ಯಾಣವನ್ನು ಜಿಲ್ಲಾ ಕೇಂದ್ರವಾಗಿ ಘೋಷಣೆ ಮಾಡಬೇಕು ಎನ್ನುವುದು ಸೇರಿದಂತೆ ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗಾಗಿ ಮುಂದಾಗಬೇಕಾಗಿದೆ. ಇದಲ್ಲದೆ ಲಿಂಗಾಯತ ಧರ್ಮದ ಮಾನ್ಯತೆಗಾಗಿ ನಿರಂತರವಾಗಿ ಹೋರಾಟ ಮಾಡುತ್...

ಬಾಗಲಕೋಟ ಜಿಲ್ಲೆ ಇಲಕಲ್ ತಾಲೂಕಿನ. ನೂತನ ತಾಲೂಕ ಸಂಘಟನಾ ಪ್ರಧಾನ್ ಕಾರ್ಯದರ್ಶಿಯಾಗಿ ರಹಿಮಾನಸಾಬ್ ನದಾಫ್ ಆಯ್ಕೆ.

Image
ಕರ್ನಾಟಕ ರಾಜ್ಯ ದಲಿತ ವಿದ್ಯಾರ್ಥಿ ಪರಿಷತ್ ಗೆ  ವಿದ್ಯಾರ್ಥಿ, ಕವನ ಬರಹಗಾರ, ರಹಿಮಾನಸಾಬ. ಖಾ.ನದಾಫ್ ಆಯ್ಕೆ ಮಾಡಲಾಗಿದೆ  ಎಂದು ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯ ಸಂಚಾಲಕ ಬಾಲಾಜಿ ಎಂ ಕಾಂಬಳೆ ಅವರ ಅನುಮೋದನೆ ಮೇರೆಗೆ ನೇಮಕ ಮಾಡಲಾಗಿದೆ ಎಂದು ರಾಜ್ಯಾಧ್ಯಕ್ಷ ಶ್ರೀನಾಥ್ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯುನಿಸೇಪ್ ಹಾಗೂ ಯು ರೀಪೋರ್ಟ ಇಂಡಿಯಾ ಪ್ರಶಸ್ತಿಗೆ ಭಾಜನರಾಗುವ ಸಂಜಯಕುಮಾರ ಯ ಬಿರಾದಾರ.

Image
ಕರ್ನಾಟಕ ರಾಜ್ಯದ, ಕರ್ನಾಟಕ ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಸ್ವಯಂ ಸೇವಕ ಸಂಜಯಕುಮಾರ ಯ ಬಿರಾದಾರ ಅವರಿಗೆ ಯುನಿಸೇಪ್ ಫಾರ್ ಎವರಿ ಚೈಲ್ಡ್ ಹಾಗೂ ಯು ರೀಪೋರ್ಟ ಇಂಡಿಯಾ ಇದರ 2 ಮಿಲಿಯನ್ ರೆಸನಲ್ಲಿ ಭಾಗವಹಿಸಿ ಇಡೀ ಭಾರತದಲ್ಲಿಯೇ ಅತಿ ಹೆಚ್ಚು ಯು ರೀಪೋರ್ಟರನ್ನು ಭಾಗಿ ಮಾಡಿರುವುದಕ್ಕಾಗಿ ದೇಶದಲ್ಲಿ ಮೂರನೇಯ ಸ್ಥಾನವನ್ನು ಪಡೆದುಕೊಳ್ಳುವುದರ ಮೂಲಕ, ಯುನಿಸೇಪ್ ಹಾಗೂ ಯು ರೀಪೋರ್ಟ ಇಂಡಿಯಾ ಇದರ ಪ್ರಶಸ್ತಿಗೆ ಭಾಜನರಾಗುವ ಮೂಲಕ ರಾಜ್ಯಕ್ಕೆ ಕೀರ್ತಿಯನ್ನು ತಂದಿದ್ದಾರೆ. ಪ್ರಶಸ್ತಿಯನ್ನು ಯು ರಿಪೋರ್ಟ್ ಇಂಡಿಯಾ ಕೇಂದ್ರ ಕಛೇರಿ ದೆಹಲಿಯಿಂದ ಕಳುಹಿಸಿದ್ದು, ಇದರಲ್ಲಿ ಯುನಿಸೇಪ್, ಭಾರತದ ಮಾಹಿತಿ ಸಂವಹನ ತಂತ್ರಜ್ಞಾನದ ಮುಖ್ಯಸ್ಥರಾದ, ಗಿಬ್ಸನ್ ಮೈಕಲ್ ರಿಯುಂಗು ಅವರಿಂದ  ಸಹಿ ಹಾಕಿದ ಪ್ರಶಸ್ತಿ ಪತ್ರ, ಹಾಗೂ ಯು ರೀಪೋರ್ಟ ಇಂಡಿಯಾ ಇದರ ಭಾರತದ "ಅತ್ಯಂತ ಮೌಲ್ಯಯುತ ಯು-ರಿಪೋರ್ಟರ್" ಆಗಿದ್ದಕ್ಕಾಗಿ ಅಭಿನಂದನೆಗಳನ್ನು ತಿಳಿಸುವುದರ ಮೂಲಕ ಪ್ರಶಸ್ತಿ ಫಲಕವನ್ನು, ಪುಸ್ತಕ, ಪೆನ್ನು, ಬಾಟಲ್, ಬ್ಯಾಗ್, ಯು - ರಿಪೋರ್ಟ್ ಟಿಶರ್ಟ, ಪ್ಯಾಂಟ್ ಎಲ್ಲವನ್ನೂ ಈ ಪ್ರಶಸ್ತಿ ಒಳಗೊಂಡಿದೆ. ಈ ಪ್ರಶಸ್ತಿಯನ್ನು ಧಾರವಾಡ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀ ಗುರುದತ್ತ ಹೆಗಡೆ ಅವರಿಂದ ಈ ಪ್ರಶಸ್ತಿಯನ್ನು ಸ್ವಿಕರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಸಂಜಯಕುಮಾರ ಬಿರಾದಾರ ಅವರನ್ನು ಅಭಿನಂದಿಸಿ...

ಮನೆ ಮನೆ ಕವಿಗೋಷ್ಠಿ ನೂತನ ಸಂಚಾಲಕರಾಗಿ ಶ್ರೀ ಗೊರೂರು ಅನಂತರಾಜು ಆಯ್ಕೆ.

Image
ಇಂದು ನಡೆದ 303ನೇ ಮನೆ ಮನೆ ಕವಿಗೋಷ್ಠಿಯಲ್ಲಿ ನೂತನ ಸಂಚಾಲಕರಾಗಿ         ಶ್ರೀ ಗೊರೂರು ಅನಂತರಾಜು  ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.  ಸಾಲಗಾಮೆ ರಸ್ತೆಯ ಸೆಂಟ್ರಲ್ ಕಾಮರ್ಸ್ ಕಾಲೇಜಿನಲ್ಲಿ ನಡೆದ 303ನೇ ಮನೆ ಮನೆ ಕವಿಗೋಷ್ಠಿ ತುಂಬಾ ಅರ್ಥಪೂರ್ಣವಾಗಿ ಜರುಗಿತು.ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಹಿರಿಯ ಕವಯತ್ರಿ ಶ್ರೀಮತಿ ಸುಶೀಲಾ ಸೋಮಶೇಖರ್ ರವರು ವಹಿಸಿಕೊಂಡಿದ್ದರು. ಅಂತರಾಷ್ಟ್ರೀಯ ಚಿತ್ರಕಲಾವಿದರಾದ ಕೆ.ಟಿ ಶಿವಪ್ರಸಾದ್ ರವರು ತಮ್ಮ ಕಲಾಕೃತಿಗಳ ಅನುಭವ ಕುರಿತು ಮಾತನಾಡಿದರು. ಆನಂತರ ನಡೆದ ಕವಿಗೋಷ್ಠಿಯಲ್ಲಿ ಅಪ್ಪಾಜಿಗೌಡ ಟಿ.ಹೆಚ್, ಎನ್.ಎಲ್ ಚನ್ನೇಗೌಡ, ನಾಗೇಂದ್ರಪ್ರಸಾದ್ ಕೆ.ವಿ, ಪ್ರಜ್ವಲ್ ಕೆ.ಎಂ,ಸರೋಜ ಟಿ.ಎಂ, ಲಕ್ಷ್ಮಿದೇವಿ ದಾಸಪ್ಪ, ಸಿ.ಸುವರ್ಣ ಕೆ.ಟಿ ಶಿವಪ್ರಸಾದ್, ಹೆಚ್.ಎಸ್ ಪ್ರತಿಮಾ ಹಾಸನ್, ಸಾವಿತ್ರಿ ಬಿ ಗೌಡ, ಸೌಮ್ಯಪ್ರಸಾದ್,ವಸುಮತಿ ಜೈನ್, ಛಲಗಾತಿ ಪ್ರಣತಿ ಪಿ ಹರಿತ್ಸಾ, ಪ್ರೇಮ ಪ್ರಶಾಂತ್, ಜಯಂತಿ ಚಂದ್ರಶೇಖರ್,ಯಮುನಾವತಿ.ಹೆಚ್.ಕೆ,ಲಲಿತ ಎಸ್, ಹೆಚ್.ಬಿ ಚೂಡಾಮಣಿ, ನೀಲಾವತಿ ಸಿ.ಎನ್ ಕವನ ವಾಚಿಸಿದರು. ಚಂದ್ರಕಾಂತ ಪಡೆಸೂರು, ಸುಶೀಲಾ ಸೋಮಶೇಖರ್, ಜಯದೇವಪ್ಪನವರು ಕವನಗಳನ್ನು ವಿಶ್ಲೇಷಿಸಿದರು. ಸಮುದ್ರವಳ್ಳಿ ವಾಸು, ರುದ್ರಾಣಿ.ಕೆ.ಎಸ್,ಸುಮಾರಮೇಶ, ಗೊರೂರು ಶಿವೇಶ್,ಸ.ವೆಂ.ಪೂರ್ಣಿಮಾ, .ಬಿ.ಎಂ.ಭಾರತಿ ಹಾದಿಗೆ,ಅಗ್ರಹಾರ ...