ರಾಜಕೀಯ ಪಕ್ಷಗಳ ಪ್ರಣಾಳಿಕೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಯ ಹಕ್ಕೊತ್ತಾಯವನ್ನು ಸೇರ್ಪಡೆಗೊಳಿಸುವಂತೆ ಮನವಿ.

ದಿನಾಂಕ 30.03.2023 ರಂದು ಹಾಸನ ಜಿಲ್ಲಾ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದಿಂದ  "ಬಾಲಕಾರ್ಮಿಕ ಪದ್ಧತಿ ವಿರೋದಿ ಆಂದೋಲನ, ಕರ್ನಾಟಕ" ಇದರ ವತಿಯಿಂದ ರಾಜಕೀಯ ಪಕ್ಷಗಳ ಪ್ರಣಾಳಿಕೆಯಲ್ಲಿ
ಮಕ್ಕಳ ಹಕ್ಕುಗಳ ರಕ್ಷಣೆಯ  ಹಕ್ಕೊತ್ತಾಯವನ್ನು ಸೇರ್ಪಡೆಗೊಳಿಸುವಂತೆ ಎಲ್ಲಾ ಪಕ್ಷಗಳ ಕಛೇರಿಗಳನ್ನು ಸಂಪರ್ಕಿಸಿ ಮನವಿ ಸಲ್ಲಿಸಲಾಯಿತು. 
ಸಾಮಾಜಿಕ ಪಿಡುಗಾದ ಮಾದಕ ವ್ಯಸನ,ವೇಶ್ಯಾವಾಟಿಕೆ,ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ,ಪೋಕ್ಸೋ ಹೀಗೇ ಹಲವಾರು ಪಿಡುಗುಗಳ ಪರಿಹಾರದತ್ತ ಗಮನ ಹರಿಸುವುದು ಅವಶ್ಯಕವಾಗಿದೆ. ಈ ಕಾರಣಗಳಿಂದ  ಮಕ್ಕಳ ಭವಿಷ್ಯವೇ ಪ್ರತಿ ಕ್ಷಣ ಪ್ರತಿ ಕುಟುಂಬವು ಆತಂಕದಲ್ಲಿ  ಸಿಲುಕಿರುವ ಕಾರಣ ಇದರ ಕುರಿತು ರಾಜಕೀಯ ಪಕ್ಷಗಳೂ ಗಮನ ಹರಿಸಿ ಜಾಗೃತಿ ಮತ್ತು ರಕ್ಷಣಾ ಕಾರ್ಯಕ್ಕೆ ಮುಂದಾಗಬೇಕೆಂದು. 
ಮತ್ತು ಪ್ರಸ್ತುತ ಪರಿಸ್ಥಿತಿಯಲ್ಲಿ ಇದು ಹೆಚ್ಚು ಪ್ರಯೋಜನಕಾರಿಯಾಗಿ ಪರಿಣಾಮ ಬೀರುವಲ್ಲಿ ಎಲ್ಲರ ಸಹಕಾರವನ್ನು ಕೋರಿ ಮನವಿ ಸಲ್ಲಿಸಲಾಯಿತು..
ಈ ಆಂದೋಲನಕ್ಕೆ ಪ್ರಚೋದನ ಸಂಸ್ಥೆಯ ಪೌಲಸ್, ಪ್ರಜ್ವಲ್, ಸ್ಪಂದನ ಸಿರಿ ವೇದಿಕೆ ಕಲಾವತಿಮಧುಸೂದನ, ಜೀವಧಾರ ಸುನೀಲ್,ಹರ್ಷಿತಾ ಶೈಲಾ,ವಿವೇಕಾನಂದ ಯೂತ್ ಮೂವ್ ಮೆಂಟ್,ಗೋವಿಂದ್,ಮುಂತಾದವರು ಪಾಲ್ಗೊಳ್ಳುವ ಮೂಲಕ ಪ್ರಚಾರ ಕಾರ್ಯ ಯಶಸ್ವಿಯಾಗಿ ನೆರವೇರಿತು.

Comments

Popular posts from this blog

ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಕರ್ನಾಟಕ ಸಾಂಸ್ಕೃತಿಕ ವೈಭವ ಕಾರ್ಯಕ್ರಮ.

ತುಮಕೂರಿನಲ್ಲಿ ಕವಿಗೋಷ್ಠಿ ಹಾಗೂ ಪುಸ್ತಕ ಓದು ಸಂವಾದ ಕಾರ್ಯಕ್ರಮ.

ಕಾವ್ಯದೀವಿಗೆ ಕೃತಿ ಲೋಕಾರ್ಪಣೆ