ಒಂದೊಂದು ಮಗುವೂ ದೇಶದ ಅಮೂಲ್ಯವಾದ ದೊಡ್ಡ ಆಸ್ತಿ - ಕಲಾವತಿ ಮಧುಸೂದನ.


ಒಂದೊಂದು ಮಗುವೂ ದೇಶದ ಅಮೂಲ್ಯವಾದ ದೊಡ್ಡ ಆಸ್ತಿ. ಆದರೇ ವಿದ್ಯಾರ್ಥಿ ಹಂತದಲ್ಲೇ ಹಲವಾರು ಕಾರಣಗಳಿಂದ ಬಾಲ್ಯವಿವಾಹವಾಗಿ ಆರಂಭದಲ್ಲೇ ವಿದ್ಯಾಭ್ಯಾಸ ಕಡಿತಗೊಂಡು ಉತ್ತಮ ಭವಿಷ್ಯಗಳೇ ಮುರುಟಿ ಹೋಗುತ್ತಿವೆ. ಇದು
ದಿನೇದಿನೇ ಹೆಚ್ಚುತ್ತಿದ್ದು  ದೇಶದ ಸರ್ವಾಂಗೀಣ
ಅಭಿವೃದ್ಧಿ ಕುಂಠಿತವಾಗಲು ಕಾರಣವಾಗುತ್ತಿದೆ. ದೇಶದ ಪ್ರಗತಿಗೆ ಮಾರಕವಾಗುತ್ತಿರುವುದು ಆತಂಕಕಾರಿಯಾಗಿದೆ. 
ಈ ಪಿಡುಗನ್ನು ತಡೆಗಟ್ಟುವುದು ಸಮಾಜದ ಎಲ್ಲಾ ಸ್ಥರಗಳ ಹೊಣೆಗಾರಿಕೆಯಾಗಿದೆ. ಎಂದು ಹಾಸನ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಹಾಸನ ಜಿಲ್ಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಮತ್ತು ಪೃಕೃತಿ ಫೌಂಡೇಶನ್ ಸಹಯೋಗದೊಂದಿಗೆ ಹೊಳೆನರಸಿಪುರದ ಶಿಕ್ಷಕರ ಭವನದಲ್ಲಿ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದ ಪ್ರಾಸ್ತಾವಿಕದಲ್ಲಿ ಸ್ಪಂದನ ಸಿರಿ ರಾಜ್ಯಾಧ್ಯಕ್ಷೆ ಕಲಾವತಿ ಮಧುಸೂದನರವರು ಮಾತನಾಡುತ್ತಾ, ಬಾಲ್ಯವಿವಾಹದಂತಹ ಪಿಡುಗನ್ನು ತಡೆಗಟ್ಟುವಲ್ಲಿ ಪೋಶಕರೊಂದಿಗೆ ಸಮುದಾಯದ ಶಾಲೆಗಳ ಪಾತ್ರವೂ ಮಹತ್ವದ್ದಾಗಿದ್ದು. ಈ ಕುರಿತು ಗಂಭೀರವಾಗಿ ಸಮಾಲೋಚಿಸಿ ತುರ್ತಾಗಿ ಕಾರ್ಯಪ್ರವೃತ್ತವಾಗುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು. 
ಉದ್ಘಾಟಕರಾಗಿ  ಗೌರವಾನ್ವಿತ ಹಿರಿಯ ಜಿಲ್ಲಾ ನ್ಯಾಯಾಧೀಶರಾದ ಶ್ರೀ ರವಿಕಾಂತ್ ರವರು ಮಕ್ಕಳಿಗೆ ಯಾವುದೇ ರೀತಿಯಾದ ಕುಂದು ಕೊರತೆಗಳಿದ್ದಲ್ಲಿ ಕೂಡಲೇ ಸಂಬಂಧಪಟ್ಟ ಇಲಾಖೆಗಳಿಗೆ ದೂರು ಸಲ್ಲಿಸುವ ಮೂಲಕ ಪರಿಹಾರಕ್ಕೆ ಪ್ರಯತ್ನಿಸುವುದು. ಪೋಶಕರಲ್ಲಿ ಅರಿವು ಮೂಡಿಸುವುದು  ಮತ್ತು ಕಾನೂನು, ಹಕ್ಕು ನಿಯಮಾವಳಿಗಳ ಹಾಗೂ ಬಾಲ್ಯವಿವಾಹದ ದುಷ್ಪರಿಣಾಮ ಕುರಿತಾದ ನಾಟಕ ಪ್ರದರ್ಶನಗಳನ್ನು ಮಕ್ಕಳಿಂದಲೇ ಮಾಡಿಸುವ ಮೂಲಕವು  ಪರಿಣಾಮಕಾರಿಯಾಗಿ ಅರಿವು ಮೂಡಿಸಲು ಪ್ರಯತ್ನಿಸ ಬೇಕೆಂದರಲ್ಲದೇ, ಕಾನೂನಿನ ನೆರವು, ಸವಲತ್ತುಗಳು ಮತ್ತು ಕೈಗೊಳ್ಳಬೇಕಾದ ಸವಿವರವಾದ ಕ್ರಮಗಳನ್ನು ತಿಳಿಸುವುದರೊಂದಿಗೆ ಯಾವುದೇ ಸಂದರ್ಭದಲ್ಲಿಯೂ ಹಿಂಜರಿಯದೇ ಕಾರ್ಯಪ್ರವೃತ್ತರಾಗ ಬೇಕು.ಈ ನಿಟ್ಟಿನಲ್ಲಿ ನಾವೂ ನಿಮ್ಮೊಂದಿಗೆ ಸದಾ ಬೆಂಬಲವಾಗಿ ಇರುತ್ತೇವೆಂಬ ಭರವಸೆಯ ಮಾತುಗಳನ್ನಾಡಿದರು.

ಪೃಕೃತಿ ಫೌಂಡೇಶನ್ ಮುಖ್ಯಸ್ಥರಾದ ನಾಗವೇದಿ ರಂಗಪ್ಪ  ಇಂತಹ ಸಂದರ್ಭದಲ್ಲಿ ಅರಕ್ಷಕ ಇಲಾಖೆ ಹಾಗೂ ಮಕ್ಕಳ ಸಹಾಯವಾಣಿಯ ನಿರಂತರ ಸಂಪರ್ಕವಿರುವುದು ಇಂತಹ ಅವಗಢಗಳಿಗೆ ಕಡಿವಾಣ ಹಾಕಲು ಸಹಕಾರಿಯಾಗುತ್ತದೆ.ಮತ್ತು ನಿರಾಶ್ರಿತ ಮಕ್ಕಳಿಗೆ ಉಚಿತ ವಸತಿಯನ್ನೂ ಆರಂಭಿಸಿದ್ದು, ಅದಕ್ಕೆ ಸಹಕರಿಸುವ ಆಸಕ್ತರು 12ಎ,80ಜಿ ಅಡಿಯಲ್ಲಿ ತೆರಿಗೆ ವಿನಾಯಿತಿಯ ಬಳಕೆಯೊಂದಿಗೆ ಸೇವೆಯಲ್ಲಿ ಸಹಕರಿಸಬಹುದೆಂದು ತಿಳಿಸಿದರು. 

ಪ್ರಚೋದನ ಸಂಸ್ಥೆಯ ಮಕ್ಕಳ ರಕ್ಷಣಾ ಸಮಿತಿಯ ಪ್ರಮೋದ್ ರವರು ಇಂತಹಾ ಮಕ್ಕಳ ಸಮಸ್ಯೆಗಳಿದ್ದರು 24 ಗಂಟೆಯೂ ಕಾರ್ಯಪ್ರವೃತ್ತವಾಗಿರುವ ಚೈಲ್ಡ ಲೈನ್ ಗೆ ಕೂಡಲೆ ಮಾಹಿತಿ ನೀಡಿದರೇ ಮಕ್ಕಳ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಸಹಕಾರಿಯಾಗುತ್ತದೆ.ಎಂದು ಸವಿವರವಾದ ಮಾಹಿತಿ ನೀಡಿದರು. 

ಹೊಳೆನರಸಿಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಸೋಮಲಿಂಗೇಗೌಡರು ಅಧ್ಯಕ್ಷೀಯ ನುಡಿಯಾಡಿದರು.

ಬಿ ಆರ್ ಸಿ ಭಾಗ್ಯಮ್ಮ, ಅಧ್ಯಕ್ಷರುಗಳಾದ ಶ್ರೀ ಕಾಳೇಗೌಡರು,ಶ್ರೀ ಯತೀಶ್ ಮತ್ತು ಹೊ.ನ.ಪುರ ತಾಲ್ಲೂಕಿನ ಮುಖ್ಯ ಶಿಕ್ಷಕರೆಲ್ಲರೂ ಸಂವಾದದಲ್ಲಿ ಪಾಲ್ಗೊಂಡರು. 

ಇದೇ ರೀತಿಯಾಗಿ ಅರಕಲಗೂಡಿನ ಶಿಕ್ಷಣಾಧಿಕಾರಿಗಳ  ಕಛೇರಿಯಲ್ಲಿ ಶಿಕ್ಷಣಾಧಿಕಾರಿ ಶ್ರೀ ದೇವರಾಜು ರವರು ಮತ್ತು ಆ ತಾಲ್ಲೂಕಿನ ಶಿಕ್ಷಕರು ಸಂವಾದದಲ್ಲಿ ಪಾಲ್ಗೊಂಡರು.


Comments

Popular posts from this blog

ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಕರ್ನಾಟಕ ಸಾಂಸ್ಕೃತಿಕ ವೈಭವ ಕಾರ್ಯಕ್ರಮ.

ತುಮಕೂರಿನಲ್ಲಿ ಕವಿಗೋಷ್ಠಿ ಹಾಗೂ ಪುಸ್ತಕ ಓದು ಸಂವಾದ ಕಾರ್ಯಕ್ರಮ.

ಕಾವ್ಯದೀವಿಗೆ ಕೃತಿ ಲೋಕಾರ್ಪಣೆ