ಯುನಿಸೇಪ್ ಹಾಗೂ ಯು ರೀಪೋರ್ಟ ಇಂಡಿಯಾ ಪ್ರಶಸ್ತಿಗೆ ಭಾಜನರಾಗುವ ಸಂಜಯಕುಮಾರ ಯ ಬಿರಾದಾರ.
ಕರ್ನಾಟಕ ರಾಜ್ಯದ, ಕರ್ನಾಟಕ ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಸ್ವಯಂ ಸೇವಕ ಸಂಜಯಕುಮಾರ ಯ ಬಿರಾದಾರ ಅವರಿಗೆ ಯುನಿಸೇಪ್ ಫಾರ್ ಎವರಿ ಚೈಲ್ಡ್ ಹಾಗೂ ಯು ರೀಪೋರ್ಟ ಇಂಡಿಯಾ ಇದರ 2 ಮಿಲಿಯನ್ ರೆಸನಲ್ಲಿ ಭಾಗವಹಿಸಿ ಇಡೀ ಭಾರತದಲ್ಲಿಯೇ ಅತಿ ಹೆಚ್ಚು ಯು ರೀಪೋರ್ಟರನ್ನು ಭಾಗಿ ಮಾಡಿರುವುದಕ್ಕಾಗಿ ದೇಶದಲ್ಲಿ ಮೂರನೇಯ ಸ್ಥಾನವನ್ನು ಪಡೆದುಕೊಳ್ಳುವುದರ ಮೂಲಕ, ಯುನಿಸೇಪ್ ಹಾಗೂ ಯು ರೀಪೋರ್ಟ ಇಂಡಿಯಾ ಇದರ ಪ್ರಶಸ್ತಿಗೆ ಭಾಜನರಾಗುವ ಮೂಲಕ ರಾಜ್ಯಕ್ಕೆ ಕೀರ್ತಿಯನ್ನು ತಂದಿದ್ದಾರೆ. ಪ್ರಶಸ್ತಿಯನ್ನು ಯು ರಿಪೋರ್ಟ್ ಇಂಡಿಯಾ ಕೇಂದ್ರ ಕಛೇರಿ ದೆಹಲಿಯಿಂದ ಕಳುಹಿಸಿದ್ದು, ಇದರಲ್ಲಿ ಯುನಿಸೇಪ್, ಭಾರತದ ಮಾಹಿತಿ ಸಂವಹನ ತಂತ್ರಜ್ಞಾನದ ಮುಖ್ಯಸ್ಥರಾದ, ಗಿಬ್ಸನ್ ಮೈಕಲ್ ರಿಯುಂಗು ಅವರಿಂದ ಸಹಿ ಹಾಕಿದ ಪ್ರಶಸ್ತಿ ಪತ್ರ, ಹಾಗೂ ಯು ರೀಪೋರ್ಟ ಇಂಡಿಯಾ ಇದರ ಭಾರತದ "ಅತ್ಯಂತ ಮೌಲ್ಯಯುತ ಯು-ರಿಪೋರ್ಟರ್" ಆಗಿದ್ದಕ್ಕಾಗಿ ಅಭಿನಂದನೆಗಳನ್ನು ತಿಳಿಸುವುದರ ಮೂಲಕ ಪ್ರಶಸ್ತಿ ಫಲಕವನ್ನು, ಪುಸ್ತಕ, ಪೆನ್ನು, ಬಾಟಲ್, ಬ್ಯಾಗ್, ಯು - ರಿಪೋರ್ಟ್ ಟಿಶರ್ಟ, ಪ್ಯಾಂಟ್ ಎಲ್ಲವನ್ನೂ ಈ ಪ್ರಶಸ್ತಿ ಒಳಗೊಂಡಿದೆ. ಈ ಪ್ರಶಸ್ತಿಯನ್ನು ಧಾರವಾಡ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀ ಗುರುದತ್ತ ಹೆಗಡೆ ಅವರಿಂದ ಈ ಪ್ರಶಸ್ತಿಯನ್ನು ಸ್ವಿಕರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಸಂಜಯಕುಮಾರ ಬಿರಾದಾರ ಅವರನ್ನು ಅಭಿನಂದಿಸಿದರು. ಅಷ್ಟೇ ಅಲ್ಲದೆ ಬಸವನಬಾಗೇವಾಡ ಶಾಸಕರಾದ ಶ್ರೀ ಶಿವಾನಂದ ಎಸ್ ಪಾಟೀಲ್, ಧಾರವಾಡ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾದ ಶ್ರೀ ಶಿವಾನಂದ ಭಜಂತ್ರಿ, ಕರ್ನಾಟಕ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ. ಕೆ.ಬಿ. ಗುಡಸಿ, ಆಡಳಿತಾಧಿಕಾರಿಗಳಾದ ಶ್ರೀ ಯಶಪಾಲ್ ಕ್ಷೀರಸಾಗರ, ಧಾರವಾಡ ಜಿಲ್ಲೆಯ ಮಾಜಿ ಮೆಯರ್ ಶ್ರೀ ದೀಪಕ್ ಚಿಂಚೋರೆ, ಕರ್ನಾಟಕ ಸರ್ಕಾರ ರೇಷ್ಮೆ ಇಲಾಖೆ ಮಾಜಿ ಅಧ್ಯಕ್ಷರಾದ ಶ್ರೀಮತಿ ಸವಿತಾ ಅಮರಶೇಟ್ಟಿ, ಎನ್.ಎಸ್.ಎಸ್ ಅಧಿಕಾರಿಗಳಾದ ಪ್ರೊ ಸಂಗಪ್ಪಾ ಚಲವಾದಿ ಅವರು, ಶಿಕ್ಷಕ ವೃಂದದವರು, ಕುಟುಂಬ ವರ್ಗದವರು, ಸ್ನೇಹಿತರು ತೆಲಗಿ ಗ್ರಾಮದ ಗುರು-ಹಿರಿಯರು ಅಭಿನಂದಿಸುವ ಮೂಲಕ ಶುಭ ಹಾರೈಸಿದ್ದಾರೆ.
Comments
Post a Comment