ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ, ಹಾಸನ ಇವರ ಅಂತರ್ಜಾಲತಾಣದ ೧೦೪ ನೇ ಮಾಲಿಕೆಯ ಕಾರ್ಯಕ್ರಮ.
ದಿನಾಂಕ-೨೬-೩-೨೦೨೩ ರ ಭಾನುವಾರ ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ, ಹಾಸನ ವತಿಯಿಂದ ಬದುಕು-ಬರಹದ ೧೦೪ ನೇ ಮಾಲಿಕೆಯ "ಅಂತರ್ಜಾಲತಾಣ ಕಾರ್ಯಕ್ರಮದಲ್ಲಿ ಪೂಜ್ಯರಾದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಜಿಯವರಿಗೆ ಗೀತನಮನವನ್ನು ಸಲ್ಲಿಸುವುದರೊಂದಿಗೆ ಪ್ರಥಮ ವಚನಕಾರರಾದ ಜೇಡರ ದಾಸಿಮಯ್ಯನ ಜಯಂತಿಯನ್ನು ಆಚರಿಸಲಾಯಿತು.
ಬೆಂಗಳೂರು ಜಿಲ್ಲಾ ಸಂಯೋಜಕರಾದ ಶ್ರೀಮತಿ ರಮಾಪ್ರಸನ್ನ ರವರು ಆಧ್ಯಪ್ರವರ್ತಕರು ಮತ್ತು ಪ್ರಥಮ ವಚನಕಾರರಾದ ಜೇಡರ ದಾಸಿಮಯ್ಯ ಕಾಯಕವೇ ಕೈಲಾಸವೆಂದು ಬಾಳಿ ವೈಚಾರಿಕ ಚಿಂತನೆಯ ಮಾರ್ಗದರ್ಶಕರಾಗಿದ್ದವರು ಎಂದು ಪ್ರಾಸ್ತಾವಿಕ ನುಡಿದರು.
ಸುನಂದ ಸುಭಾಷ್ ಪ್ರಾರ್ಥನೆಯಿಂದ ಆರಂಭಿಸಿ,
ರಾಜ್ಯಾಧ್ಯಕ್ಷರಾದ ಕಲಾವತಿಮಧುಸೂದನ ಜೇಡರ ದಾಸಿಮಯ್ಯನ ವಚನ ಗಾಯನದೊಂದಿಗೆ
ಕಗ್ಗದ ವಾಚನ ಮಾಡಿದರು. ವ್ಯಾಖ್ಯಾನದಲ್ಲಿ ಅಳಿವಿಲ್ಲದ ಪ್ರಕೃತಿಯ ವಿಶೇಷತೆಯಲ್ಲಿ ರಾಗದ್ವೇಷಗಳೆಂಬ ತೊಡಕು ಕೊನೆಯಿರದ ಬಲೆ ಇದ್ದಂತೆ. ಆ ಬಲೆಯೊಳಗಿದ್ದೇ ಇಲ್ಲದಂತೆ ಸನ್ಮಾರ್ಗದಿಂದ ಶಾಂತಿ ನೆಮ್ಮದಿಯನ್ನು ಕಂಡುಕೊಳ್ಳುವ ಮೂಲಕ ಉತ್ತಮ ಜೀವನವನ್ನು ರೂಪಿಸಿಕೊಳ್ಳುವ ಮಾರ್ಗವನ್ನು ಡಿವಿಜಿಯವರು ಕಗ್ಗದಲ್ಲಿ ಸೂಚಿಸಿದ್ದಾರೆ ಎಂದರು.
ತದನಂತರ ಹಿರಿಯರಾದ ಶ್ರೀಮತಿ ರಾಜಮ್ಮ ಶ್ರೀನಿವಾಸ್, ದಾಕ್ಷಾಯಿಣಿ ಮುರುಗನ್, ಇಂದುಮತಿ,ಪರಿಣಿತ,ಸ್ಮಿತಾ ಹೇಮೇಶ್, ಭಾಗ್ಯಮ್ಮ,ಜಯಮಂಗಲ ಜವಳಿ,ಸಾವಿತ್ರಮ್ಮ, ಇಂದಿರಾ ಲೋಕೇಶ್ ಮುಂತಾದವರು ಕವನ ವಾಚನ,ಭಕ್ತಿ ಗೀತೆ,ಭಾವಗೀತೆ ಜನಪದಗೀತೆಗಳೊಂದಿಗೆ ರಂಜಿಸಿದರು. ಜಿಲ್ಲಾಧ್ಯಕ್ಷರಾದ ಜಯರಾಮ್ ಬೆಟ್ಟದಯ್ಯನವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಸುಸಂಪನ್ನವಾಯಿತು.
Comments
Post a Comment