ಮನೆ ಮನೆ ಕವಿಗೋಷ್ಠಿ ನೂತನ ಸಂಚಾಲಕರಾಗಿ ಶ್ರೀ ಗೊರೂರು ಅನಂತರಾಜು ಆಯ್ಕೆ.

ಇಂದು ನಡೆದ 303ನೇ ಮನೆ ಮನೆ ಕವಿಗೋಷ್ಠಿಯಲ್ಲಿ ನೂತನ ಸಂಚಾಲಕರಾಗಿ 

       ಶ್ರೀ ಗೊರೂರು ಅನಂತರಾಜು 
ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. 
ಸಾಲಗಾಮೆ ರಸ್ತೆಯ ಸೆಂಟ್ರಲ್ ಕಾಮರ್ಸ್ ಕಾಲೇಜಿನಲ್ಲಿ ನಡೆದ 303ನೇ ಮನೆ ಮನೆ ಕವಿಗೋಷ್ಠಿ ತುಂಬಾ ಅರ್ಥಪೂರ್ಣವಾಗಿ ಜರುಗಿತು.ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಹಿರಿಯ ಕವಯತ್ರಿ ಶ್ರೀಮತಿ ಸುಶೀಲಾ ಸೋಮಶೇಖರ್ ರವರು ವಹಿಸಿಕೊಂಡಿದ್ದರು. ಅಂತರಾಷ್ಟ್ರೀಯ ಚಿತ್ರಕಲಾವಿದರಾದ ಕೆ.ಟಿ ಶಿವಪ್ರಸಾದ್ ರವರು ತಮ್ಮ ಕಲಾಕೃತಿಗಳ ಅನುಭವ ಕುರಿತು ಮಾತನಾಡಿದರು. ಆನಂತರ ನಡೆದ ಕವಿಗೋಷ್ಠಿಯಲ್ಲಿ ಅಪ್ಪಾಜಿಗೌಡ ಟಿ.ಹೆಚ್, ಎನ್.ಎಲ್ ಚನ್ನೇಗೌಡ, ನಾಗೇಂದ್ರಪ್ರಸಾದ್ ಕೆ.ವಿ, ಪ್ರಜ್ವಲ್ ಕೆ.ಎಂ,ಸರೋಜ ಟಿ.ಎಂ, ಲಕ್ಷ್ಮಿದೇವಿ ದಾಸಪ್ಪ, ಸಿ.ಸುವರ್ಣ ಕೆ.ಟಿ ಶಿವಪ್ರಸಾದ್, ಹೆಚ್.ಎಸ್ ಪ್ರತಿಮಾ ಹಾಸನ್, ಸಾವಿತ್ರಿ ಬಿ ಗೌಡ, ಸೌಮ್ಯಪ್ರಸಾದ್,ವಸುಮತಿ ಜೈನ್, ಛಲಗಾತಿ ಪ್ರಣತಿ ಪಿ ಹರಿತ್ಸಾ, ಪ್ರೇಮ ಪ್ರಶಾಂತ್, ಜಯಂತಿ ಚಂದ್ರಶೇಖರ್,ಯಮುನಾವತಿ.ಹೆಚ್.ಕೆ,ಲಲಿತ ಎಸ್, ಹೆಚ್.ಬಿ ಚೂಡಾಮಣಿ, ನೀಲಾವತಿ ಸಿ.ಎನ್ ಕವನ ವಾಚಿಸಿದರು. ಚಂದ್ರಕಾಂತ ಪಡೆಸೂರು, ಸುಶೀಲಾ ಸೋಮಶೇಖರ್, ಜಯದೇವಪ್ಪನವರು ಕವನಗಳನ್ನು ವಿಶ್ಲೇಷಿಸಿದರು. ಸಮುದ್ರವಳ್ಳಿ ವಾಸು, ರುದ್ರಾಣಿ.ಕೆ.ಎಸ್,ಸುಮಾರಮೇಶ, ಗೊರೂರು ಶಿವೇಶ್,ಸ.ವೆಂ.ಪೂರ್ಣಿಮಾ, .ಬಿ.ಎಂ.ಭಾರತಿ ಹಾದಿಗೆ,ಅಗ್ರಹಾರ ಪ್ರಶಾಂತ್,ವಾಣಿ ಮಹೇಶ್, ರೇಖಾ ಪ್ರಕಾಶ್,ವೇದಶ್ರೀ ರಾಜ್, ಹೆಚ್.ಎಸ್ ಬಸವರಾಜು,ವನಜಾ ಸುರೇಶ್, ನಾಗಮ್ಮ,ರತ್ನ ಹಾಗು ಇನ್ನಿತರರು ಉಪಸ್ಥಿತರಿದ್ದರು.

Comments

Popular posts from this blog

ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಕರ್ನಾಟಕ ಸಾಂಸ್ಕೃತಿಕ ವೈಭವ ಕಾರ್ಯಕ್ರಮ.

ತುಮಕೂರಿನಲ್ಲಿ ಕವಿಗೋಷ್ಠಿ ಹಾಗೂ ಪುಸ್ತಕ ಓದು ಸಂವಾದ ಕಾರ್ಯಕ್ರಮ.

ಕಾವ್ಯದೀವಿಗೆ ಕೃತಿ ಲೋಕಾರ್ಪಣೆ