ಕರುನಾಡ ಹಣತೆ ಕವಿ ಬಳಗ ತುಮಕೂರು ಜಿಲ್ಲೆ ಕಲ್ಪತರೋತ್ಸವ-2023ರ ಸಾಹಿತ್ಯ ಸಮ್ಮೇಳನದ ಶ್ರೀ ಸಿದ್ದಗಂಗಾ ಶ್ರೀ ಪ್ರಶಸ್ತಿಯನ್ನು ವಿದ್ಯಾರ್ಥಿ ರಹಿಮಾನ್ ನದಾಫ್ ಇವರಿಗೆ ಪ್ರಧಾನ ಮಾಡಲಾಯಿತು.
ಮಾರ್ಚ್26 ಭಾನುವಾರದಂದು ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣದಲ್ಲಿ ನಡೆದ ಕರುನಾಡ ಹಣತೆ ಕವಿ ಬಳಗ ತುಮಕೂರು ಜಿಲ್ಲೆ ಕಲ್ಪತರೋತ್ಸವ-2023ರ ಸಾಹಿತ್ಯ ಸಮ್ಮೇಳನವು ಜರುಗಿತು.
ವಿದ್ಯಾರ್ಥಿ, ಸಾಹಿತಿ, ಬಾಗಲಕೋಟ್ ಜಿಲ್ಲೆ ಇಲಕಲ್ ತಾಲೂಕಿನ ಚಟ್ನಿಹಾಳ್ ಗ್ರಾಮದ ಕು.ರಹಿಮಾನಸಾಬ್. ಖಾ.ನದಾಫ್ ಇವರು ವಿದ್ಯಾರ್ಥಿಯಾಗಿದ್ದು, ಇವರು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿ
ಕೊಂಡಿದ್ದಾರೆ. ಹಲವಾರು ಕವಿಗೋಷ್ಠಿಗಳಲ್ಲಿ ಇವರು ಕವನವಾಚನ ಮಾಡಿದ್ದು, ಹೊನ್ನಕುಸುಮು ಸಾಹಿತ್ಯ ವೇದಿಕೆ, ಹಂಪಿ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಬರಹಗಾರರ ಸಂಘ ಹೂವಿನ ಹಡಗಲಿ, ಸಾವಿರ ಕವಿಗೋಷ್ಠಿಯಲ್ಲಿ ಹೊರತರಲಾದ ಹುಡುಕಾಟ ಸಂಕಲನದಲ್ಲಿ ಶ್ರೀಯುತರ ಕವನ 'ಬನ್ನಿ ಕನ್ನಡವನ್ನು ಕಟ್ಟೋಣ' ಸೇರ್ಪಡೆಯಾಗಿದೆ.
ಕರುನಾಡ ಹಣತೆ ಕವಿ ಬಳಗ ಚಿತ್ರದುರ್ಗ ವತಿಯಿಂದ ಬಾಗಲಕೋಟ ಜಿಲ್ಲೆಯ ಯುವ ಸಂಘಟನ ಕಾರ್ಯದರ್ಶಿಯಾಗಿಯೂ ಆಯ್ಕೆಯಾಗಿದ್ದು, ಇತ್ತೀಚಿಗೆ ದಲಿತ ವಿದ್ಯಾರ್ಥಿ ಪರಿಷತನ್ ತಾಲೂಕಿನ ಪ್ರಧಾನ್ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಈ ಎಲ್ಲಾ ವಿಭಾಗದಲ್ಲಿ ಉದಯೋನ್ಮುಖಿವಾಗಿ ಬೆಳೆಯುತ್ತಿರುವ
ರಹಿಮಾನಸಾಬ್ ನದಾಫ್ ರವರ ಪ್ರತಿಭೆ ಹಾಗೂ ಸಾಹಿತ್ಯ ಸೇವೆಯನ್ನು ಗುರುತಿಸಿ. ರಾಜ್ಯ ಕರುನಾಡ ಹಣತೆ ಕವಿ ಬಳಗ & ಸಂಸ್ಕೃತಿಕ ಕಲಾ ತಂಡ ಚಿತ್ರದುರ್ಗ ಜಿಲ್ಲೆ ಕರುನಾಡ ಹಣತೆ ಕವಿ ಬಳಗ ತುಮಕೂರ ಕನ್ನಡ ಕಲ್ಪತರೋತ್ಸವ ಸಮ್ಮೇಳನ ಹೋಬಳಿ ಘಟ ಭೂಕ್ಕಪಟ್ಟಣ ಇವರ ಸಂಯೋಗದಲ್ಲಿ 5ನೇ ವಾರ್ಷಿಕೋತ್ಸವ ಸಮ್ಮೇಳನದಲ್ಲಿ ವಿದ್ಯಾರ್ಥಿ ರಹಿಮಾನ್ ನದಾಫ್ ಅವರ ಸಾಹಿತ್ಯ ಸೇವೆಯನ್ನು ಗುರುತಿಸಿ "ಶ್ರೀ ಸಿದ್ದಗಂಗಾ ಶ್ರೀ" ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಂಜುನಾಥ್ ಬಿ. ಟಿ., ಕನಕ ಪ್ರಿತೀಶ, ಕರುನಾಡ ಹಣತೆ ಕವಿ ಬಳಗದ ರಾಜ್ಯಧ್ಯಕ್ಷರು ರಾಜು ಸೂಲೆನಹಳ್ಳಿ ಮುಂತಾದವರು ಉಪಸ್ಥಿತರಿದ್ದರು.
Comments
Post a Comment