Posts

ಶ್ರೀಮತಿ ಆಶಾರಾಣಿ ಎನ್ ಇವರಿಗೆ ವೃತ್ತಿಸೇವಾ ಗೌರವ ಪುರಸ್ಕಾರ.

Image
ಬೆಂಗಳೂರು ಗ್ರಾಮಾಂತರ: ದಿ. 31.01.2023  ಜಿಲ್ಲೆಯ ವಿಜಯಪುರ ಪಟ್ಟಣದ ರೋಟರಿ ಸಂಸ್ಥೆಯ ವತಿಯಿಂದ ವೃತ್ತಿಸೇವಾ ಪುರಸ್ಕಾರ ಪ್ರಧಾನ ಸಮಾರಂಭವು ನೆರವೇರಿತು. ಕಾರ್ಯಕ್ರಮದಲ್ಲಿ ಸುಗಟೂರು ಗ್ರಾಮದ ಶುಶ್ರೂಷಕಿ ಶ್ರೀಮತಿ ಆಶಾರಾಣಿ ಎನ್ ಇವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ರೋಟರಿ ಸಂಸ್ಥೆಯು ಇವರಿಗೆ ವೃತ್ತಿಸೇವಾ  ಪುರಸ್ಕಾರವನ್ನು ಕೊಟ್ಟು ಗೌರವಿಸಿದೆ.  ಶ್ರೀಮತಿ ಆಶಾರಾಣಿ ರವರು ಜಂಗಮಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಲವು ವರ್ಷಗಳಿಂದ ಶುಶ್ರೂಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಇವರ ಸೇವಾ ಮನೋಭಾವದಿಂದ ಸುತ್ತಮತ್ತಲ ಗ್ರಾಮಗಳಲ್ಲಿ ಮನೆಮಾತಾಗಿದ್ದಾರೆ.  ಇದೇ ಸಂದರ್ಭದಲ್ಲಿ ಡಾ ಮುರಳೀಧರ, ಶ್ರೀ ವಿ ಕೃಷ್ಣಪ್ಪ, ಶ್ರೀ ಡಿ ಮಹೇಶ್, ಶ್ರೀ ಎಂ ಮಂಜುನಾಥ್ ಮುಂತಾದವರಿಗೂ ಸಹ ವೃತ್ತಿಸೇವಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು.  ವಿಜಯಪುರ ರೋಟರಿ ಸಂಸ್ಥೆಯ ಅಧ್ಯಕ್ಷರಾದ ರೋ. ಹೆಚ್.ಎಸ್. ರುದ್ರೇಶಮೂರ್ತಿ, ಶ್ರೀಮತಿ ರೋ. ಡಾ ಎಲಿಜಬೆತ್ ಚೆರಿಯನ್ ಪರಮೇಶ್, ಶ್ರೀ ರೋ. ಎ ಎಂ ಲಕ್ಷ್ಮೀನಾರಾಯಣ್, ಶ್ರೀ ರೋ. ಎನ್ ಎನ್ ಮಂಜುನಾಥ್ ರೆಡ್ಡಿ ಮುಂತಾದ ಗಣ್ಯರು ಹಾಗೂ ವಿಜಯಪುರ  ಪಟ್ಟಣದ ನಾಗರೀಕರು ಉಪಸ್ಥಿತರಿದ್ದರು.

ಶ್ರೀ ಮೂಡಲಪ್ಪ ಆದೋನಿ ಕಂಪ್ಲಿ ರವರಿಗೆ ಶ್ರೀ ಸುಬುಧೇಂದ್ರ ತೀರ್ಥ ಶ್ರೇಷ್ಠ ಕೃಷಿ ಸೇವಾ ರತ್ನ ರಾಜ್ಯ ಮಟ್ಟದ ಪ್ರಶಸ್ತಿ

Image
ಶ್ರೀ ಮೂಡಲಪ್ಪ ಆದೋನಿ ಕಂಪ್ಲಿ ರವರಿಗೆ ಕೃಷಿ ಕ್ಷೇತ್ರದಲ್ಲಿನ ಅಮೋಘ ಸೇವೆ,ಸಾಹಿತ್ಯ ಸೇವೆ,ಕನ್ನಡ ನಾಡು-ನುಡಿಯ ಬಗ್ಗೆ ಇರುವ ವಿಶೇಷ ಕಾಳಜಿ ಗುರುತಿಸಿ ಹಾವೇರಿ ಜಿಲ್ಲೆಯ ಹೊಸರತ್ತಿಯ ಶ್ರೀ ಶ್ರೀ ಡಾ.ಸುಬುಧೇಂದ್ರ ತೀರ್ಥ ವಿದ್ಯಾ ಸಂಸ್ಥೆಯು ಶ್ರೀಯುತರನ್ನು ಶ್ರೀ ಸುಬುಧೇಂದ್ರ ತೀರ್ಥ ಶ್ರೇಷ್ಠ ಕೃಷಿ ಸೇವ ರತ್ನ ರಾಜ್ಯ ಮಟ್ಟದ ಪ್ರಶಸ್ತಿ ಗೆ ಆಯ್ಕೆಮಾಡಲಾಗಿದ್ದು, ದಿನಾಂಕ : 8-1-2023 ನೇ ಭಾನುವಾರ ಹೊಸರತ್ತಿಯ ಶ್ರೀ ಮೈಲಾರ ಮಹಾದೇವ ಸಭಾ ಭವನದಲ್ಲಿ ಶ್ರೀ ಶ್ರೀ 1008 ಡಾ.ಶ್ರೀ ಸುಬುಧೇಂದ್ರ ತೀರ್ಥ ಪಾದಂಗಳವರು ಮಂತ್ರಾಲಯ ಹಾಗೂ ಗುದ್ದಲಿಂಗೇಶ್ವರ ಮಠ ಹೊಸರಿತ್ತಿಯ ಶ್ರೀ ಶ್ರೀ ಮ.ನಿ.ಪ್ರ. ಗುದ್ದಲೀಶ್ವರ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ಶ್ರೀಯುತರಿಗೆ ರಾಷ್ಟ್ರಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ವಿಜಯ ನಗರ ಜಿಲ್ಲೆಯ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ವಿಜಯನಗರ ಜಿಲ್ಲಾ ಘಟಕ ಜಿಲ್ಲಾಧ್ಯಕ್ಷರಾದ ಶ್ರೀ ವೆಂಕಟೇಶ್ ಬಡಿಗೇರ್  ಡಾ.ಮಾಂತೇಶ್ ಅಣ್ಣಿಗೇರಿ. ಬೆಳಗಾವಿ ಸಾಹಿತಿಗಳು ಮತ್ತು ಸಂಸ್ಥಾಪನ ಅಧ್ಯಕ್ಷರಾದ ಶ್ರೀ ಸಿದ್ದಲಿಂಗೇಶ್ವರ ಅಂಕಲಕೋಟಿ ಪತ್ರಿಕ ವರದಿಯಲ್ಲಿ ತಿಳಿಸಿದ್ದಾರೆ. 💐💐 ಇವರಿಗೆ ವಿಚಾರ ಮಂಟಪ ಸಾಹಿತ್ಯ ಬಳಗದ ವತಿಯಿಂದ ತುಂಬು ಹೃದಯದ ಅಭಿನಂದನೆಗಳು 💐💐

ದ್ವಿತೀಯ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಯ ಮುಖ್ಯ ಅತಿಥಿಯಾಗಿ ಶ್ರೀ ವೆಂಕಟೇಶ್ ಬಡಿಗೇರ್ ಆಯ್ಕೆ

Image
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಚನ್ನರಾಯಪಟ್ಟಣ ಹಾಸನ ಜಿಲ್ಲೆ,  ಚನ್ನರಾಯಪಟ್ಟಣ ತಾಲೂಕಿನ ದ್ವಿತೀಯ ಮಕ್ಕಳ ಸಾಹಿತ್ಯ ಸಮ್ಮೇಳನ 2023 ದಿನಾಂಕ 9.1.2023 ಸೋಮವಾರ ಮತ್ತು 10.01.2023 ಮಂಗಳವಾರ ಎರಡು ದಿನಗಳ ಕಾಲ ಸರ್ಕಾರಿ ಮಾಧ್ಯಮಿಕ ಶಾಲಾ,  ಆವರಣ ಚನ್ನರಾಯಪಟ್ಟಣ ಇಲ್ಲಿ ನಡೆಯಲಿದ್ದು,  ದಿ. 9.01.2023 ರಂದು ಕವಿಗೋಷ್ಠಿ ಒಂದರಲ್ಲಿ ಮುಖ್ಯ ಅತಿಥಿ ಸ್ಥಾನದಲ್ಲಿ  ಶ್ರೀ ವೆಂಕಟೇಶ ಬಡಿಗೇರ್ ಜಿಲ್ಲಾಧ್ಯಕ್ಷರು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ವಿಜಯನಗರ ಜಿಲ್ಲಾ ಘಟಕ ಇವರು ಭಾಗವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಯುಗ ಯೋಗಿ ಜಗದ್ಗುರು ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳು, ಪೀಠಾಧ್ಯಕ್ಷರು ಆದಿಚುಂಚನಗಿರಿ ಮಹಾಸಂಸ್ಥಾನ ಮಠ. ಹಾಸನ ಜಿಲ್ಲೆ ಪರಮಪೂಜ್ಯ ಶ್ರೀ ಶಂಬುನಾಥ ಮಹಾಸ್ವಾಮಿಗಳು ಮಹಾ ಪೋಷಕರು ಮಕ್ಕಳ ಸಾಹಿತ್ಯ ಪರಿಷತ್, ಕಾರ್ಯದರ್ಶಿಗಳು ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಹಾಸನ ಜಿಲ್ಲೆ. ಇವರು ಭಾಗವಹಿಸಲಿದ್ದು  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಡಾ ಸಿ ಎನ್ ಬಾಲಕೃಷ್ಣ ಶಾಸಕರು, ಶ್ರವಣಬೆಳಗೊಳ ಕ್ಷೇತ್ರ ಇವರು ವಹಿಸಲಿದ್ದು, ಟಿ. ಎಸ್.ನಾಗಾಭರಣ ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ರಾಜ್ಯ ಅಧ್ಯಕ್ಷರಾದ ಶ್ರೀ ಸಿಎಂ ಅಶೋಕ್  ಮೊದಲಾದ ಗಣ್ಯ  ಮಾನ್ಯರು ಎರಡು ದಿನ...

ಭಾವೈಕ್ಯತೆಯನ್ನು ಮೆರೆದ ನಾಮಕರಣ ಕಾರ್ಯಕ್ರಮ.

Image
ಚಿಂತಾಮಣಿ: ನಗರದ 27ನೇ ವಾರ್ಡಿಗೆ ಸೇರಿದ ಶಾಂತಿನಗರದಲ್ಲಿ ವಿನೂತನ ರೀತಿಯಲ್ಲಿ ನಾಮಕರಣ ಕಾರ್ಯಕ್ರಮ ನಡೆಯಿತಲ್ಲದೆ, ಭಾವೈಕ್ಯತೆಯನ್ನು ತೆರೆದು ಸರ್ವರ ಮೆಚ್ಚುಗೆಗೆ ಪಾತ್ರವಾಯಿತು.  ಕರುನಾಡು ಸಾಹಿತ್ಯ ಪರಿಷತ್ತಿನ ರಾಜ್ಯ ಕಾರ್ಯದರ್ಶಿ ಹಾಗೂ ಯುವ ಸಾಹಿತಿ ಕೆ ಎನ್ ಅಕ್ರಂಪಾಷ  ರವರ ಅಣ್ಣನ ಮಗಳಾದ ಎನ್ ಎ ಅರ್ಷಿಯಾ ಬಾನು ಎಂಬ ಪುಟ್ಟ ಕಂದಮ್ಮಳ ನಾಮಕರಣ ಕಾರ್ಯಕ್ರಮ ಇದಾಗಿದ್ದು ,ಇದರಲ್ಲಿ ವಿವಿಧ ಧರ್ಮಗಳ ಧರ್ಮ ಗುರುಗಳು ಒಂದೇ ವೇದಿಕೆಯಲ್ಲಿ ಹಾಜರಾಗಿ ತಮ್ಮ ತಮ್ಮ ಧರ್ಮಗಳಿಗೆ ಸೇರಿದ ಧರ್ಮ ಗ್ರಂಥಗಳಲ್ಲಿನ ಪವಿತ್ರ ಸೂಕ್ತಿಗಳನ್ನು ಪಠಿಸುವುದರ ಮೂಲಕ ಪುಟ್ಟ ಮಗುವನ್ನು ಆಶೀರ್ವದಿಸಿ ಎಲ್ಲರ ಮೆಚ್ಚುಗೆ ಗೆ ಪಾತ್ರರಾದರು. ಮಸೀದಿಯ ಧರ್ಮಗುರು ಮೌಲಾನಾ ಇರ್ಷಾದ್ ಅಹಮದ್, ತನ್ವೀಕಾ ಫೌಂಡೇಶನ್ ನ ವಿನಯ್ ಜಿ ಗುರೂಜಿ ಹಾಗೂ ಚರ್ಚಿನ ಫಾದರ್, ರಾಬರ್ಟ್ ರವರುಗಳು ಪಾಲ್ಗೊಂಡು ಸರ್ವಧರ್ಮ ಸಮನ್ವಯತೆ ಹಾಗೂ ಧರ್ಮ ಸಹಿಷ್ಣತೆಯ ಸಂದೇಶವ ಸಾರಿದರು.  ಈ ಕಾರ್ಯಕ್ರಮದಲ್ಲಿ ಬಂಧು ಬಳಗದವರು, ಹಿತೈಷಿಗಳು ಸರ್ವಧರ್ಮೀಯರು, ಹಲವು ಗಣ್ಯ ಮಾನ್ಯರು ಉಪಸ್ಥಿತರಿದ್ದು ಮಗುವಿಗೆ ಶುಭ ಹಾರೈಸಿದರು.

ವಿಶ್ವಮಾನವ ದಿನಾಚರಣೆಯ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮ.

Image
ತುಮಕೂರು, ದಿನಾಂಕ: 29.12.2022 ವಿಚಾರ ಮಂಟಪ ಸಾಹಿತ್ಯ ಬಳಗ ಮತ್ತು ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಇವರ ಜಂಟಿ ಸಹಯೋಗದಲ್ಲಿ ವಿಶ್ವಮಾನವ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ "ಕುವೆಂಪು ಸಾಹಿತ್ಯದ ಸಮಕಾಲೀನತೆ" ಎಂಬ ವಿಷಯದ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ತುಮಕೂರು ವಿಶ್ವವಿದ್ಯಾನಿಲಯದ ಸಂಶೋಧನಾರ್ಥಿಯಾದ  ಧನುಷ್ ಎಚ್. ಶೇಖರ್ ರವರು "ಯಾವುದೇ ಒಂದು ಸಾಹಿತ್ಯದ ಬಹುಮುಖತ್ವದ ಸತ್ವದಿಂದಾಗಿ, ಅದರ ಅಭಿವ್ಯಕ್ತಿಯ ಗ್ರಹಿಕೆ ಪ್ರತಿಯೊಬ್ಬರಿಗೂ ಭಿನ್ನ ಭಿನ್ನವಾಗಿರುತ್ತದೆ. ಸದಾ ಬದಲಾಗುವುದು ಕಾಲ-ದೇಶಗಳ ಅಭಿರುಚಿಗಳೇ ಹೊರತು ಪಠ್ಯವಲ್ಲ. ಆದ್ದರಿಂದ ಯಾವುದೇ ಪಠ್ಯವನ್ನು ಸಮಕಾಲೀನಗೊಳಿಸುವುದು ಆ ಹೊತ್ತಿನ ಓದುಗನಷ್ಟೇ. ಈ ಮಾತಿಗೆ ಕುವೆಂಪು ಅವರ ಸಾಹಿತ್ಯವೂ ಹೊರತಲ್ಲ. ಕುವೆಂಪು ಅವರ ಸಾಹಿತ್ಯವನ್ನು ಎರಡು ಮುಖ್ಯ ನೆಲೆಗಳಿಂದ ಪ್ರಸ್ತುತ ಸನ್ನಿವೇಷಕ್ಕೆ ಅನುಸಂಧಾನಿಸಲು ಪ್ರಯತ್ನಿಸುವೆ. ಮೊದಲನೆಯದು, ಅವರ ಸ್ವಾತಂತ್ರ್ಯದ ಪರಿಕಲ್ಪನೆ. ಎರಡನೆಯದು, ಅವರ   ಆಧ್ಯಾತ್ಮದ ಪರಿಕಲ್ಪನೆ. ಸ್ವಾತಂತ್ರ್ಯವೆಂಬುದು ಕೇವಲ ದೇಶಕ್ಕೆ ಯಾವುದೋ ಒಂದು ಸಮುದಾಯಕ್ಕೆ ಸಂಬಂಧಿಸಿದಲ್ಲ. ಅದು ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವದ ವಿಕಸನಕ್ಕೆ ಸಂಬಂದಿಸಿದ್ದು ಎಂಬುದು ಕವಿಯ ನಿಲುವು. ಹುಟ್ಟುತ್ತಾ ವಿಶ್ವಮಾನವರಾದ ನಾವು ಬೆಳೆಯುತ್ತಾ ಅಲ್ಪಮಾನವರಾಗುವ ಪ್ರಕ್ರಿಯೆಯನ್ನು ವಿವರಿಸುತ್ತಾ, ಈ ಪ್...

ನಮ್ಮ ಕರ್ನಾಟಕದ ಯುವ ಪ್ರತಿಭೆ ಸಂಜಯಕುಮಾರ ಬಿರಾದಾರ ಅವರು ಬಿಹಾರ ರಾಜ್ಯದ 2022ನೇ ಸಾಲಿನ “ಮಿಥಿಲಾ ಗ್ಲೋಬಲ್ ಐಕಾನಿಕ್ ಅವಾರ್ಡಗೆ” ಆಯ್ಕೆ.

Image
ಬಿಹಾರ ರಾಜ್ಯದ ದರ್ಭಾಂಗಾ ಜಿಲ್ಲೆಯ ಅಯಾಚಿ ನಗರದ 'ಯುವ ಸಂಘಟನೆಯು' ರಾಷ್ಟ್ರೀಯ ಕಾರ್ಯಕ್ರಮವೊಂದರಲ್ಲಿ ಬಿಹಾರ ಸರಿಸಾಬ ಪಾಹಿ, ಮಧುಬಾನಿಯಲ್ಲಿ ಯುವ ಸಮಾಜ ಸೇವೆಯನ್ನು ಗುರುತಿಸಿ ಇಪ್ಪತ್ತೈದು ರಾಜ್ಯಗಳ ಯುವ ಸಮಾಜ ಸೇವಕರಿಗೆ 2022 ನೇ ಸಾಲಿನ ಪ್ರತಿಷ್ಠಿತ 'ಮಿಥಿಲಾ ಗ್ಲೋಬಲ್ ಐಕಾನಿಕ್ ಅವಾರ್ಡ್' ನ್ನು ನೀಡುತ್ತಿದ್ದಾರೆ. ನಮ್ಮ ಕರ್ನಾಟಕದಿಂದ ಸಂಜಯಕುಮಾರ ಯ ಬಿರಾದಾರ ಅವರ ಸಮಾಜ ಸೇವೆಯನ್ನು ಗುರುತಿಸಿ ಆಯ್ಕೆ ಮಾಡಲಾಗಿದೆ‌, ಹಾಗೂ ಇದೆ ತಿಂಗಳು 18 ರಂದು ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತಿದೆ. ಎಂದು ಎ.ಎನ್.ವಾಯ್.ಎಸ್ ನ ಸಂಸ್ಥಾಪಕರಾದ ಶ್ರೀ ವಿಕ್ಕಿಕುಮಾರ ಮಂಡಲ ಅವರು ತಿಳಿಸಿದ್ದಾರೆ. ಸಂಜಯ ಒಬ್ಬ ಎನ್.ಎಸ್.ಎಸ್ ಸ್ವಯಂಸೇವಕರಾಗಿ, ಸಮಾಜ ಸೇವಕರಾಗಿ, ಪರಿಸರ ಸ್ನೇಹಿ, ರಂಗೋಲಿ ವಿನ್ಯಾಸಕರಾಗಿ, ನಿರೂಪಕರಾಗಿ, ಯುವ ಸಂಘಟಕರಾಗಿ, ಕಲಾವಿದರಾಗಿ, ಕಾರ್ಯಕ್ರಮ ಸಂಯೋಜಕರಾಗಿ, ರಾಷ್ಟ್ರಮಟ್ಟದಲ್ಲಿ ಹಿರಿಯ ಸ್ವಯಂಸೇವಕರಾಗಿ ವಿವಿಧ ರಾಜ್ಯಗಳ ರಾಷ್ಟ್ರೀಯ ಫೋರಂಗಳ ಸಲಹಾ ಸಮಿತಿಯ ಸದಸ್ಯರಾಗಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.  ಹೀಗೆ ಹಲವಾರು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸಂಯೋಜಕರಾಗಿ, ಸದಸ್ಯರಾಗಿ ತೊಡಗಿಕೊಂಡಿದ್ದಾರೆ. ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಂಡಿದ್ದು ಶಾಲಾ ಮಕ್ಕಳಿಗೆ ಪುಸ್ತಕ, ಪೆನ್ನು, ಕ್ಯಾಪ್ ಗಳನ್ನು, ದವಸ-ಧಾನ್ಯಗಳನ್ನು ನೀಡಿದ್ದಾರೆ. ಅಂಗವಿಕಲರ ಉದ್ಯೋಗ ಮೇಳದಲ್...

ಮೌಲ್ಯ ಶಿಕ್ಷಣ ಕಮ್ಮಟಗಳು ಅಗತ್ಯ - ಶ್ರೀ ವೆಂಕಟೇಶ್ ಬಡಿಗೇರ್.

Image
ವಿಜಯನಗರ:- ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠ ಹೊಸಪೇಟೆಯಲ್ಲಿ ಆಯೋಜಿಸಿದ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ವಿಜಯನಗರ ಜಿಲ್ಲಾ ಘಟಕ ಉದ್ಘಾಟನೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಪುಸ್ತಕ ಲೋಕಾರ್ಪಣ ಸಮಾರಂಭ ದಲ್ಲಿ ದಿವ್ಯ ಸಾನಿಧ್ಯ ಶ್ರೀ ಮ. ನಿ. ಪ್ರ. ಜಗದ್ಗುರು ಶ್ರೀ ಬಸುಲಿಂಗ ಮಹಾಸ್ವಾಮಿಗಳು ಶ್ರೀ ವೆಂಕಟೇಶ ಬಡಿಗೇರ್ ಜಿಲ್ಲಾಧ್ಯಕ್ಷರು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ವಿಜಯನಗರ ಜಿಲ್ಲಾ ಘಟಕ ಕಾರ್ಯಕ್ರಮ ಉದ್ದೇಶಿಸಿ ಹಿಂದಿನ ಮಕ್ಕಳು ಮೌಲ್ಯ ಶಿಕ್ಷಣ ಕಮ್ಮಟಗಳು ಮಾಡುವುದು ಅಗತ್ಯವಿದೆ ಮಕ್ಕಳು ನೀತಿ ಬೋಧೆಯಿಂದ ಸುಂದರ ಸಮಾಜ ನಿರ್ಮಾಣವಾಗಲು ಸಾಧ್ಯ ಮಕ್ಕಳು ಮಕ್ಕಳಾಗಿ ಪ್ರತಿಭೆಯಿಂದ ಹೊರಹೊಮ್ಮ ಬೇಕಾಗಿದೆ ಮಕ್ಕಳು ಬಾಲ್ಯತನವನ್ನು ಸಂಭ್ರಮಿಸಿ ನಾಡಿನ ಉತ್ತಮ ಪೌರವರಾಗಿ ದೇಶಾಭಿಮಾನಿಗಳಾಗಿ ಉತ್ತಮ ಪ್ರಜೆಗಳಾಗಿ ನಾಡು ನುಡಿ ಸಂಸ್ಕೃತಿ ಕರೆ ನೀಡಿದರು.  ಶ್ರೀ ಪ್ರಹ್ಲಾದ್ ರಾವ್ ರಚಿತ ಕವನ ಸಂಕಲನ ಏನ ಬರೀಲಿ ಬಿಡುಗಡೆಗೊಳಿಸಿ ದಯಾನಂದ ಕಿನ್ನಾಳ ಉಪನ್ಯಾಸಕರು ಸಾಹಿತ್ಯ ಗಟ್ಟಿಗೊಳ್ಳುವುದರ ಬಗ್ಗೆ ಕೆಲವು ಕಿವಿಮಾತು ಮಾತನಾಡಿದರು ಮುಖ್ಯ ಅತಿಥಿಗಳು ಹಾಗೂ ಗೌರವ್ಯಾಧ್ಯಕ್ಷರು ಶ್ರೀ ಧರ್ಮನ ಗೌಡ ಮಾತನಾಡಿ ಬಾಲ್ಯದಲ್ಲಿ ಮೌಲ್ಯ ಶಿಕ್ಷಣ ಅಗತ್ಯ ಎಂದು ಹೇಳಿದರು ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಮತಿ ವಿಜಯಲಕ್ಷ್ಮಿ ಮೈದೂರ್ ಮಕ್ಕಳ ಕಲ್ಯಾಣ ಸಮಿತಿ ವಿಜ...