ದ್ವಿತೀಯ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಯ ಮುಖ್ಯ ಅತಿಥಿಯಾಗಿ ಶ್ರೀ ವೆಂಕಟೇಶ್ ಬಡಿಗೇರ್ ಆಯ್ಕೆ
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಚನ್ನರಾಯಪಟ್ಟಣ ಹಾಸನ ಜಿಲ್ಲೆ,
ಚನ್ನರಾಯಪಟ್ಟಣ ತಾಲೂಕಿನ ದ್ವಿತೀಯ ಮಕ್ಕಳ ಸಾಹಿತ್ಯ ಸಮ್ಮೇಳನ 2023
ದಿನಾಂಕ 9.1.2023 ಸೋಮವಾರ ಮತ್ತು 10.01.2023 ಮಂಗಳವಾರ ಎರಡು ದಿನಗಳ ಕಾಲ ಸರ್ಕಾರಿ ಮಾಧ್ಯಮಿಕ ಶಾಲಾ, ಆವರಣ ಚನ್ನರಾಯಪಟ್ಟಣ ಇಲ್ಲಿ ನಡೆಯಲಿದ್ದು,
ದಿ. 9.01.2023 ರಂದು ಕವಿಗೋಷ್ಠಿ ಒಂದರಲ್ಲಿ ಮುಖ್ಯ ಅತಿಥಿ ಸ್ಥಾನದಲ್ಲಿ
ಶ್ರೀ ವೆಂಕಟೇಶ ಬಡಿಗೇರ್ ಜಿಲ್ಲಾಧ್ಯಕ್ಷರು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ವಿಜಯನಗರ ಜಿಲ್ಲಾ ಘಟಕ ಇವರು ಭಾಗವಹಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಯುಗ ಯೋಗಿ ಜಗದ್ಗುರು ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳು, ಪೀಠಾಧ್ಯಕ್ಷರು ಆದಿಚುಂಚನಗಿರಿ ಮಹಾಸಂಸ್ಥಾನ ಮಠ. ಹಾಸನ ಜಿಲ್ಲೆ ಪರಮಪೂಜ್ಯ ಶ್ರೀ ಶಂಬುನಾಥ ಮಹಾಸ್ವಾಮಿಗಳು ಮಹಾ ಪೋಷಕರು ಮಕ್ಕಳ ಸಾಹಿತ್ಯ ಪರಿಷತ್, ಕಾರ್ಯದರ್ಶಿಗಳು ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಹಾಸನ ಜಿಲ್ಲೆ. ಇವರು ಭಾಗವಹಿಸಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಡಾ ಸಿ ಎನ್ ಬಾಲಕೃಷ್ಣ ಶಾಸಕರು, ಶ್ರವಣಬೆಳಗೊಳ ಕ್ಷೇತ್ರ ಇವರು ವಹಿಸಲಿದ್ದು, ಟಿ. ಎಸ್.ನಾಗಾಭರಣ ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ರಾಜ್ಯ ಅಧ್ಯಕ್ಷರಾದ ಶ್ರೀ ಸಿಎಂ ಅಶೋಕ್ ಮೊದಲಾದ ಗಣ್ಯ ಮಾನ್ಯರು ಎರಡು ದಿನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
💐💐ವಿಚಾರ ಮಂಟಪ ಸಾಹಿತ್ಯ ಬಳಗದ ವತಿಯದ ಕಾರ್ಯಕ್ರಮಕ್ಕೆ ಶುಭ ಹಾರೈಕೆಗಳು 💐💐
Comments
Post a Comment