ಭಾವೈಕ್ಯತೆಯನ್ನು ಮೆರೆದ ನಾಮಕರಣ ಕಾರ್ಯಕ್ರಮ.

ಚಿಂತಾಮಣಿ: ನಗರದ 27ನೇ ವಾರ್ಡಿಗೆ ಸೇರಿದ ಶಾಂತಿನಗರದಲ್ಲಿ ವಿನೂತನ ರೀತಿಯಲ್ಲಿ ನಾಮಕರಣ ಕಾರ್ಯಕ್ರಮ ನಡೆಯಿತಲ್ಲದೆ, ಭಾವೈಕ್ಯತೆಯನ್ನು ತೆರೆದು ಸರ್ವರ ಮೆಚ್ಚುಗೆಗೆ ಪಾತ್ರವಾಯಿತು. 

ಕರುನಾಡು ಸಾಹಿತ್ಯ ಪರಿಷತ್ತಿನ ರಾಜ್ಯ ಕಾರ್ಯದರ್ಶಿ ಹಾಗೂ ಯುವ ಸಾಹಿತಿ ಕೆ ಎನ್ ಅಕ್ರಂಪಾಷ  ರವರ ಅಣ್ಣನ ಮಗಳಾದ ಎನ್ ಎ ಅರ್ಷಿಯಾ ಬಾನು ಎಂಬ ಪುಟ್ಟ ಕಂದಮ್ಮಳ ನಾಮಕರಣ ಕಾರ್ಯಕ್ರಮ ಇದಾಗಿದ್ದು ,ಇದರಲ್ಲಿ ವಿವಿಧ ಧರ್ಮಗಳ ಧರ್ಮ ಗುರುಗಳು ಒಂದೇ ವೇದಿಕೆಯಲ್ಲಿ ಹಾಜರಾಗಿ ತಮ್ಮ ತಮ್ಮ ಧರ್ಮಗಳಿಗೆ ಸೇರಿದ ಧರ್ಮ ಗ್ರಂಥಗಳಲ್ಲಿನ ಪವಿತ್ರ ಸೂಕ್ತಿಗಳನ್ನು ಪಠಿಸುವುದರ ಮೂಲಕ ಪುಟ್ಟ ಮಗುವನ್ನು ಆಶೀರ್ವದಿಸಿ ಎಲ್ಲರ ಮೆಚ್ಚುಗೆ ಗೆ ಪಾತ್ರರಾದರು.

ಮಸೀದಿಯ ಧರ್ಮಗುರು ಮೌಲಾನಾ ಇರ್ಷಾದ್ ಅಹಮದ್, ತನ್ವೀಕಾ ಫೌಂಡೇಶನ್ ನ ವಿನಯ್ ಜಿ ಗುರೂಜಿ ಹಾಗೂ ಚರ್ಚಿನ ಫಾದರ್, ರಾಬರ್ಟ್ ರವರುಗಳು ಪಾಲ್ಗೊಂಡು ಸರ್ವಧರ್ಮ ಸಮನ್ವಯತೆ ಹಾಗೂ ಧರ್ಮ ಸಹಿಷ್ಣತೆಯ ಸಂದೇಶವ ಸಾರಿದರು.

 ಈ ಕಾರ್ಯಕ್ರಮದಲ್ಲಿ ಬಂಧು ಬಳಗದವರು, ಹಿತೈಷಿಗಳು ಸರ್ವಧರ್ಮೀಯರು, ಹಲವು ಗಣ್ಯ ಮಾನ್ಯರು ಉಪಸ್ಥಿತರಿದ್ದು ಮಗುವಿಗೆ ಶುಭ ಹಾರೈಸಿದರು.

Comments

Popular posts from this blog

ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಕರ್ನಾಟಕ ಸಾಂಸ್ಕೃತಿಕ ವೈಭವ ಕಾರ್ಯಕ್ರಮ.

ತುಮಕೂರಿನಲ್ಲಿ ಕವಿಗೋಷ್ಠಿ ಹಾಗೂ ಪುಸ್ತಕ ಓದು ಸಂವಾದ ಕಾರ್ಯಕ್ರಮ.

ಕಾವ್ಯದೀವಿಗೆ ಕೃತಿ ಲೋಕಾರ್ಪಣೆ