ಶ್ರೀಮತಿ ಆಶಾರಾಣಿ ಎನ್ ಇವರಿಗೆ ವೃತ್ತಿಸೇವಾ ಗೌರವ ಪುರಸ್ಕಾರ.

ಬೆಂಗಳೂರು ಗ್ರಾಮಾಂತರ: ದಿ. 31.01.2023 
ಜಿಲ್ಲೆಯ ವಿಜಯಪುರ ಪಟ್ಟಣದ ರೋಟರಿ ಸಂಸ್ಥೆಯ ವತಿಯಿಂದ ವೃತ್ತಿಸೇವಾ ಪುರಸ್ಕಾರ ಪ್ರಧಾನ ಸಮಾರಂಭವು ನೆರವೇರಿತು. ಕಾರ್ಯಕ್ರಮದಲ್ಲಿ ಸುಗಟೂರು ಗ್ರಾಮದ ಶುಶ್ರೂಷಕಿ ಶ್ರೀಮತಿ ಆಶಾರಾಣಿ ಎನ್ ಇವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ರೋಟರಿ ಸಂಸ್ಥೆಯು ಇವರಿಗೆ ವೃತ್ತಿಸೇವಾ  ಪುರಸ್ಕಾರವನ್ನು ಕೊಟ್ಟು ಗೌರವಿಸಿದೆ. 
ಶ್ರೀಮತಿ ಆಶಾರಾಣಿ ರವರು ಜಂಗಮಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಲವು ವರ್ಷಗಳಿಂದ ಶುಶ್ರೂಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಇವರ ಸೇವಾ ಮನೋಭಾವದಿಂದ ಸುತ್ತಮತ್ತಲ ಗ್ರಾಮಗಳಲ್ಲಿ ಮನೆಮಾತಾಗಿದ್ದಾರೆ. 
ಇದೇ ಸಂದರ್ಭದಲ್ಲಿ ಡಾ ಮುರಳೀಧರ, ಶ್ರೀ ವಿ ಕೃಷ್ಣಪ್ಪ, ಶ್ರೀ ಡಿ ಮಹೇಶ್, ಶ್ರೀ ಎಂ ಮಂಜುನಾಥ್ ಮುಂತಾದವರಿಗೂ ಸಹ ವೃತ್ತಿಸೇವಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು. 
ವಿಜಯಪುರ ರೋಟರಿ ಸಂಸ್ಥೆಯ ಅಧ್ಯಕ್ಷರಾದ ರೋ. ಹೆಚ್.ಎಸ್. ರುದ್ರೇಶಮೂರ್ತಿ, ಶ್ರೀಮತಿ ರೋ. ಡಾ ಎಲಿಜಬೆತ್ ಚೆರಿಯನ್ ಪರಮೇಶ್, ಶ್ರೀ ರೋ. ಎ ಎಂ ಲಕ್ಷ್ಮೀನಾರಾಯಣ್, ಶ್ರೀ ರೋ. ಎನ್ ಎನ್ ಮಂಜುನಾಥ್ ರೆಡ್ಡಿ ಮುಂತಾದ ಗಣ್ಯರು ಹಾಗೂ ವಿಜಯಪುರ  ಪಟ್ಟಣದ ನಾಗರೀಕರು ಉಪಸ್ಥಿತರಿದ್ದರು.

Comments

Popular posts from this blog

ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಕರ್ನಾಟಕ ಸಾಂಸ್ಕೃತಿಕ ವೈಭವ ಕಾರ್ಯಕ್ರಮ.

ತುಮಕೂರಿನಲ್ಲಿ ಕವಿಗೋಷ್ಠಿ ಹಾಗೂ ಪುಸ್ತಕ ಓದು ಸಂವಾದ ಕಾರ್ಯಕ್ರಮ.

ಕಾವ್ಯದೀವಿಗೆ ಕೃತಿ ಲೋಕಾರ್ಪಣೆ