ನಮ್ಮ ಕರ್ನಾಟಕದ ಯುವ ಪ್ರತಿಭೆ ಸಂಜಯಕುಮಾರ ಬಿರಾದಾರ ಅವರು ಬಿಹಾರ ರಾಜ್ಯದ 2022ನೇ ಸಾಲಿನ “ಮಿಥಿಲಾ ಗ್ಲೋಬಲ್ ಐಕಾನಿಕ್ ಅವಾರ್ಡಗೆ” ಆಯ್ಕೆ.

ಬಿಹಾರ ರಾಜ್ಯದ ದರ್ಭಾಂಗಾ ಜಿಲ್ಲೆಯ ಅಯಾಚಿ ನಗರದ 'ಯುವ ಸಂಘಟನೆಯು' ರಾಷ್ಟ್ರೀಯ ಕಾರ್ಯಕ್ರಮವೊಂದರಲ್ಲಿ ಬಿಹಾರ ಸರಿಸಾಬ ಪಾಹಿ, ಮಧುಬಾನಿಯಲ್ಲಿ ಯುವ ಸಮಾಜ ಸೇವೆಯನ್ನು ಗುರುತಿಸಿ ಇಪ್ಪತ್ತೈದು ರಾಜ್ಯಗಳ ಯುವ ಸಮಾಜ ಸೇವಕರಿಗೆ 2022 ನೇ ಸಾಲಿನ ಪ್ರತಿಷ್ಠಿತ 'ಮಿಥಿಲಾ ಗ್ಲೋಬಲ್ ಐಕಾನಿಕ್ ಅವಾರ್ಡ್' ನ್ನು ನೀಡುತ್ತಿದ್ದಾರೆ. ನಮ್ಮ ಕರ್ನಾಟಕದಿಂದ ಸಂಜಯಕುಮಾರ ಯ ಬಿರಾದಾರ ಅವರ ಸಮಾಜ ಸೇವೆಯನ್ನು ಗುರುತಿಸಿ ಆಯ್ಕೆ ಮಾಡಲಾಗಿದೆ‌, ಹಾಗೂ ಇದೆ ತಿಂಗಳು 18 ರಂದು ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತಿದೆ. ಎಂದು ಎ.ಎನ್.ವಾಯ್.ಎಸ್ ನ ಸಂಸ್ಥಾಪಕರಾದ ಶ್ರೀ ವಿಕ್ಕಿಕುಮಾರ ಮಂಡಲ ಅವರು ತಿಳಿಸಿದ್ದಾರೆ. ಸಂಜಯ ಒಬ್ಬ ಎನ್.ಎಸ್.ಎಸ್ ಸ್ವಯಂಸೇವಕರಾಗಿ, ಸಮಾಜ ಸೇವಕರಾಗಿ, ಪರಿಸರ ಸ್ನೇಹಿ, ರಂಗೋಲಿ ವಿನ್ಯಾಸಕರಾಗಿ, ನಿರೂಪಕರಾಗಿ, ಯುವ ಸಂಘಟಕರಾಗಿ, ಕಲಾವಿದರಾಗಿ, ಕಾರ್ಯಕ್ರಮ ಸಂಯೋಜಕರಾಗಿ, ರಾಷ್ಟ್ರಮಟ್ಟದಲ್ಲಿ ಹಿರಿಯ ಸ್ವಯಂಸೇವಕರಾಗಿ ವಿವಿಧ ರಾಜ್ಯಗಳ ರಾಷ್ಟ್ರೀಯ ಫೋರಂಗಳ ಸಲಹಾ ಸಮಿತಿಯ ಸದಸ್ಯರಾಗಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. 
ಹೀಗೆ ಹಲವಾರು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸಂಯೋಜಕರಾಗಿ, ಸದಸ್ಯರಾಗಿ ತೊಡಗಿಕೊಂಡಿದ್ದಾರೆ. ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಂಡಿದ್ದು ಶಾಲಾ ಮಕ್ಕಳಿಗೆ ಪುಸ್ತಕ, ಪೆನ್ನು, ಕ್ಯಾಪ್ ಗಳನ್ನು, ದವಸ-ಧಾನ್ಯಗಳನ್ನು ನೀಡಿದ್ದಾರೆ. ಅಂಗವಿಕಲರ ಉದ್ಯೋಗ ಮೇಳದಲ್ಲಿ ಸಹಾಯ-ಸಹಕಾರಕ್ಕೆ ಮುಂದಾಗಿ ನೂರಾರು ಸ್ವಯಂ ಸೇವಕರನ್ನು ಕರೆದೊಯ್ದು ಸೇವೆಯನ್ನು ಸಲ್ಲಿಸಿದ್ದಾರೆ. ಇವರ ಕೆಲಸ ಕಾರ್ಯಗಳಿಗೆ ಕರ್ನಾಟಕ ಸರ್ಕಾರ ರಾಜ್ಯ ಎನ್.ಎಸ್.ಎಸ್ ಪ್ರಶಸ್ತಿ, ರಾಷ್ಟ್ರ ಮಟ್ಟದ ಯುವ ಐಕಾನ್ ರಾಷ್ಟ್ರ ಪ್ರಶಸ್ತಿ, ಹಾಗೂ ಅದೆಷ್ಟೋ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ಕರ್ನಾಟಕದ ಯುವ ಪ್ರತಿಭೆ ಸಂಜಯಕುಮಾರ ಬಿರಾದಾರ ಅವರನ್ನು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಶಾಸಕರಾದ ಶ್ರೀ ಶಿವಾನಂದ ಎಸ್ ಪಾಟೀಲ್, ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಕೆ.ಬಿ.ಗುಡಸಿ ಸರ್ಕಾರದ ಎನ್.ಎಸ್.ಎಸ್ ಅನುಷ್ಠಾನ ಅಧಿಕಾರಿಗಳಾದ ಡಾ. ಪೂರ್ಣಿಮಾ ಜೋಗಿ, ಬೆಂಗಳೂರು ಜಿಲ್ಲೆಯ ಸಿವೊಡಿ ವಿಭಾಗದ ಐಪಿಎಸ್ ಅಧಿಕಾರಿಗಳಾದ ಡಾ. ಸವಿತಾ ಶ್ರೀನಿವಾಸನ್, ಉತ್ತರ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಡಾ. ರಾಜೇಶ್ವರಿ ಮಹೇಶ್ವರಯ್ಯ ಹಾಗೂ  ಶಿಕ್ಷಕರು, ಬಂದು-ಬಳಗದವರು, ಸ್ನೇಹಿತರು ಹಿತೈಷಿಗಳು ಅಭಿನಂದಿಸಿದ್ದಾರೆ.

Comments

Popular posts from this blog

ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಕರ್ನಾಟಕ ಸಾಂಸ್ಕೃತಿಕ ವೈಭವ ಕಾರ್ಯಕ್ರಮ.

ತುಮಕೂರಿನಲ್ಲಿ ಕವಿಗೋಷ್ಠಿ ಹಾಗೂ ಪುಸ್ತಕ ಓದು ಸಂವಾದ ಕಾರ್ಯಕ್ರಮ.

ಕಾವ್ಯದೀವಿಗೆ ಕೃತಿ ಲೋಕಾರ್ಪಣೆ