Posts

Showing posts from May, 2023

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಧಾರವಾಡದಲ್ಲಿ "ಭಾವ ಸ್ಪಂಧನ" ಕವನ ಸಂಕಲನ ಪುಸ್ತಕ ಬಿಡುಗಡೆಯ ಕಾರ್ಯಕ್ರಮ.

Image
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಧಾರವಾಡದಲ್ಲಿ ಶ್ರೀಮತಿ ಸುಲೋಚನಾ ಅಪ್ಪಾಸಾಹೇಬ ಮಾಲಿಪಾಟೀಲ ಅವರ ಚೊಚ್ಚಲ ಕವನ ಸಂಕಲನ ಡಾ. ಶಶಿಕಾಂತ ಪಟ್ಟಣ ಸರ್ ಅವರ ಕೈಯಿಂದ ಪುಸ್ತಕ ಬಿಡುಗಡೆಯ ಕಾರ್ಯಕ್ರಮ ಜರುಗಿತು.  ಪಟ್ಟಣ ಸರ್ ಕನ್ನಡ ಸಾಹಿತ್ಯದಲ್ಲಿ ಜಾನಪದ ಸಾಹಿತ್ಯದ ಸೊಗಡು ಕಾವ್ಯದ ಮೂಲಕ ಮತ್ತು ಶರಣ ಸಾಹಿತ್ಯದಲ್ಲಿ ಶರಣರು ತಮ್ಮ ವಚನಗಳಲ್ಲಿ ಶರಣ ಸಂಬಂಧಗಳನ್ನು ಯಾವ ರೀತಿ ಬೆಸೆದುಕೊಂಡಿದ್ದರು ಎಂಬುದರ ಬಗ್ಗೆ ಬಹಳ ಸುಂದರವಾಗಿ ವಿವರಿಸಿದ್ದಾರೆ. ಗುಂಜಾಳ ಸರ್ ಕವನ ಸಂಕಲದಲ್ಲಿನ ಕೆಲವು ಕವನಗಳನ್ನು ತಮ್ಮ ನಿಜ ಜೀವನದ ಸಂದರ್ಭಗಳಿಗೆ ಸ್ಪಂದಿಸಿದ ಭಾವನೆಗಳನ್ನು ಬಿಚ್ಚಿಟ್ಟರು. ಇನ್ನು ಲಿಂಗರಾಜ ಅಂಗಡಿ ಸರ್ ಅವರು ಸಾಹಿತ್ಯದಲ್ಲಿ ಸಾಗುತ್ತಿರುವ ಎಲ್ಲ ಲೇಖಕ, ಕವಿ ಮನಸ್ಸುಗಳಿಗೆ ನಮ್ಮ ಕನ್ನಡ ಸಾಹಿತ್ಯ ಭವನದ ಬಾಗಿಲು ಸದಾ ತೆರೆದಿರುತ್ತದೆ. ಕನ್ನಡ ಸಾಹಿತ್ಯದ ವಿಷಯದಲ್ಲಿ ನಾನು ನನ್ನ ಕರ್ತವ್ಯವನ್ನು ಎಲ್ಲರ ಮನ ಮುಟ್ಟುವಂತೆ ಮಾಡುತ್ತಿರುವೆ ಎಂದು ತಿಳಿಸಿದರು. ಶರಣಮ್ಮ ಗೊರೆಬಾಳ್ ಮೇಡಂ ಅವರು ಕವನ ಸಂಕಲನದಲ್ಲಿನ ಕೆಲವು ಕವನಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಮೇಘಾ ಹುಕ್ಕೇರಿಯವರ ನಿರೂಪಣೆಯಲ್ಲಿ ಕಾರ್ಯಕ್ರಮ ಬಹಳ ಸುಂದರವಾಗಿ ಸಾಂಗಗೊಂಡಿತು.

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ (ರಿ)ಹಾಸನದ 12ನೇ ವಾರ್ಷಿಕೋತ್ಸವದ ಅಂಗವಾಗಿ ಉಚಿತ ನೇತ್ರ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿತ್ತು.

Image
ದಿನಾಂಕ- 23-5-2023ರಂದು ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ (ರಿ)ಹಾಸನದ 12ನೇ ವಾರ್ಷಿಕೋತ್ಸವದ ಅಂಗವಾಗಿ  ಶ್ರೀ ಹೆಚ್ ವಿ. ಮಧುಸೂದನರವರ ಸ್ಮರಣಾರ್ಥ  ಅಮ್ಮ ಕಣ್ಣಿನ ಆಸ್ಪತ್ರೆ , ಕೆ ಆರ್. ಪುರಂ ಹಾಸನ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿತ್ತು. ಈ ಶಿಬಿರದಲ್ಲಿ ಆರ್ಥಿಕವಾಗಿ ದುರ್ಬಲರಾದ ಫಲಾನುಭವಿಗಳಿಗೆ ಉಚಿತ ಕನ್ನಡಕವನ್ನು ವಿತರಿಸಲಾಯಿತು. ಈ ಕಾರ್ಯಕ್ರಮದ ಪ್ರಾಯೋಜಕರಾಗಿ ಹಾಸನಾಂಬ ಕೆನಾಲ್ ಶ್ರೀ ಹೆಚ್.ಎಮ್. ರಾಘವೇಂದ್ರ ಮಧುಸೂದನ್ ಹಾಸನ ಮತ್ತು ಮಾನಸ ರಘುಪ್ರಸಾದ್ ರವರು ಸಹಕರಿಸಿದರು. ಹಾಗೂ ನೇತ್ರ ತಜ್ಞರಾದ ಡಾ||  ಸಂದೀಪ್ ರವರು ಗ್ರಾಮೀಣ ಪ್ರದೇಶದ ಜನರಿಗೆ ಇದರ ಪ್ರಯೋಜನ ತಲಪುವಂತಾಗಲು ನಮ್ಮ ತಂಡ ಸದಾ ಸಿದ್ಧವಿರುತ್ತದೆ ಎಂದು ವಿಶ್ವಾಸದಿಂದ  ನುಡಿದರು. ಇಡೀ ದಿನ ಗಂಟೆಗಟ್ಟಲೇ ಮೂರು ನಾಲ್ಕು ಕಡೆ  ಸರಣಿಯಲ್ಲಿ ನಿಂತು ಕಷ್ಟಪಡುತ್ತಿದ್ದ ರೋಗಿಗಳ  ಪರಿಸ್ಥಿತಿಗೆ ಪರಿಹಾರ  ಈ ಯೋಜನೆಯ ಪುಟ್ಟ ಪ್ರಯತ್ನ. ಶ್ರಮವಿಲ್ಲದೇ ಒಂದೆಡೆ ತಪಾಸಣೆ ಚಿಕಿತ್ಸೆ ಒದಗಿಸುವ ಮೂಲಕ ರೋಗಿಗಳಿಗೆ  ಉಪಯೋಗವಾಗಲೆಂಬ ಉದ್ದೇಶ ಸಂಸ್ಥೆಯದ್ದಾಗಿರುತ್ತದೆ. ಎಂದು ಮಾತನಾಡಿದ ಸ್ಪಂದನ ಸಿರಿ ವೇದಿಕೆಯ ಅಧ್ಯಕ್ಷೆ ಕಲಾವತಿ ಮಧುಸೂದನರವರು ಆರ್ಥಿಕ ದುರ್ಬಲರಿಗೆ ಉಚಿತ ಕನ್ನಡಕವನ್ನು ವಿತರಿಸಿದರು. ಹಾಗೂ ಇನ್ನೂ ಹೆಚ್ಚು ...

ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆ ಯ ಅಮ್ಮನ ಪ್ರೀತಿ ಕವನ ಸ್ಪರ್ಧೆಯ ಫಲಿತಾಂಶ ಪ್ರಕಟ.

Image
ಪ್ರಥಮ ಸ್ಥಾನ : ಶಂಕರಗೌಡ ಬ ಕುರಹಟ್ಟಿ, ಧಾರವಾಡ. ದ್ವಿತೀಯ ಸ್ಥಾನ : ರವಿಕುಮಾರ ಜಾಧವ್ (ಸೋನೆ), ಹಂಪಿ. ತೃತೀಯ ಸ್ಥಾನ : ರೂಪಾ ಭೀ ರಜಪೂತ, ವಿಜಯಪುರ. ಸಮಾಧಾನಕರ ಸ್ಥಾನ : ಗಿರೀಶ್ ರಾಮನಗರ (ರಾಗಿ). ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆ ಯ ಅಮ್ಮನ ಪ್ರೀತಿ ಕವನ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು, ಸ್ಪರ್ಧೆಯ ತೀರ್ಪುಗಾರರಾದ ಶ್ರೀ ವರುಣ್ ರಾಜ್ ಜಿ, ಅಧ್ಯಕ್ಷರು ವಿಚಾರ ಮಂಟಪ ಬಳಗ ಇವರು ಮಾತನಾಡುತ್ತಾ,  "ತನುಶ್ರೀ ಪ್ರಕಾಶನ ಸಂಸ್ಥೆ ಹಾಗೂ ತನುಶ್ರೀ ಸಾಹಿತ್ಯ ಸಾಂಸ್ಕೃತಿಕ ಕಲಾ ಬಳಗದ ಹೆಸರಿನಲ್ಲಿ ಶ್ರೀ ರಾಜು ಸೂಲೇನಹಳ್ಳಿಯವರು ಸಾಕಷ್ಟು ವೈವಿಧ್ಯಮಯ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಸಾಹಿತ್ಯ ವಲಯದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದ್ದಾರೆ. ಇವರ ಸೇವೆ ಅನನ್ಯ, ಸಾಧನೆಗಳು ಅನಂತ. ಇಂತಿವರ ಅಧ್ಯಕ್ಷತೆಯಲ್ಲಿ ನಡೆಸಲಾಗಿರುವ 'ಅಮ್ಮನ ಪ್ರೀತಿ' ಎಂಬ ವಿಷಯದ ಕುರಿತ ಕವನ ಸ್ಪರ್ಧೆಯು ಬಹಳ  ಯಶಸ್ವಿಯಾಗಿ ಮೂಡಿಬಂದಿದೆ. ನಾಡಿನ ಮೂಲೆಮೂಲೆಯ ಸುಮಾರು ೪೦ ಜನ ಹಿರಿಯ - ಕಿರಿಯ ಸಾಹಿತಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವುದು ವಿಶೇಷ.  ಅಮ್ಮನ ಪ್ರೀತಿಯನ್ನು ಪದಗಳಲ್ಲಿ ಕಟ್ಟುವುದು ನಿಜಕ್ಕೂ ಸಾಹಸವೇ. ಏಕೆಂದರೆ ಅಮ್ಮ ಪದಗಳಿಗೆ ನಿಲುಕದವಳು. ಅವಳ ಪ್ರೀತಿಯನ್ನು ವರ್ಣಿಸಲು ಆದಿಶೇಷನು ಅಶಕ್ಯ. ಇಂತಹಾ ಅದಮ್ಯ ಸಾಹಸವನ್ನು ಇಲ್ಲಿನ ಎಲ್ಲಾ ಕವಿ ಮಿತ್ರರೂ ಬಹಳ ಪ್ರಾಮಾಣಿಕತೆಯಿಂದ ಮಾಡಿರುವು...

ಆರ್ಟ್ ಆಫ್ ಗಿವಿಂಗ್ ಫೌಂಡೇಶನ್ ವತಿಯಿಂದ ಕವಿವಿ ಮಾನಸೊಲ್ಲಾಸ ಸಭಾಭವನದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಹತ್ತನೇ ನೀಡುವ ಕಲೆ ದಿನಾಚರಣೆ ಕಾರ್ಯಕ್ರಮವನ್ನು ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷೆ ಶ್ರೀಮತಿ ಸವಿತಾ ಅಮರಶೇಟ್ಟಿ ಉದ್ಘಾಟಿಸಿದರು.

Image
 ಆರ್ಟ್ ಆಫ್ ಗಿವಿಂಗ್ ಕರ್ನಾಟಕ ರಾಜ್ಯದ ರಾಜ್ಯಾಧ್ಯಕ್ಷರಾದ ಶ್ರೀ ಸಂಜಯಕುಮಾರ ಬಿರಾದರ ಅವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ದಯೆ ತೋರಿಸುವವರಿಗೆ ಕೃತಜ್ಞತೆ ಸಲ್ಲಿಕೆ ಅವಶ್ಯ! ಹಾಗಾಗಿ ಸಮಾಜದಲ್ಲಿ ಪರಸ್ಪರ ಸಹಕಾರ ಅವಶ್ಯ. ಸೇವೆ ಮಾಡುವ ಪ್ರತಿಯೊಬ್ಬ ವ್ಯಕ್ತಿಯನ್ನು ಗೌರವದಿಂದ ಕಾಣಬೇಕು ಆ ನಿಟ್ಟಿನಲ್ಲಿ ಆರ್ಟ್ ಆಫ್ ಗಿವಿಂಗ್ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಅಚ್ಚುತ್ ಸಮಂತಾ ಅವರು ಮಾಡುತ್ತಿದ್ದಾರೆ. ಸಮಾಜ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಅವರು ಸಮಾಜದಲ್ಲಿ ದಯೆ ಮತ್ತು ಸಹಾನುಭೂತಿಯನ್ನು ಉತ್ತೇಜಿಸುವ ಮತ್ತು ನೀಡುವವರಿಗೆ ಕೃತಜ್ಞತೆ ವ್ಯಕ್ತಪಡಿಸುವುದೇ ಫೌಂಡೇಶನ್ ನ ಮುಖ್ಯ ಉದ್ದೇಶವಾಗಿದೆ ಎಂದಿದ್ದಾರೆ. ಈ ವೇಳೆ ಎಲ್.ಕೆ.ಜಿ ಯಿಂದ ಪಿ.ಜಿವರೆಗಿನ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ಪೆನ್ನು ನೋಟ್ ಬುಕ್  ನೀಡಲಾಗುತ್ತದೆ. ಸಫಾಯಿ ಕಾರ್ಮಿಕರು, ಸಿಪಾಯಿ ಸಿಬ್ಬಂದಿಗಳ ಸೇವೆಯನ್ನು ಗುರುತಿಸಿ, ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 200ಕ್ಕೂ ಹೆಚ್ಚು ಜನ ಸಾಧಕರಿಗೆ ವೇದಿಕೆಯಲ್ಲಿ ಸನ್ಮಾನ ಮಾಡುತ್ತಿದ್ದೇವೆ ಎಂದು ಫೌಂಡೇಶನ್ ನ ರಾಜ್ಯಾಧ್ಯಕ್ಷರು ಮಾತನಾಡಿದರು. ನಂತರದಲ್ಲಿ ತಮ್ಮ ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಶ್ರೀಮತಿ ಸವಿತಾ ಅಮರಶೆಟ್ಟಿ ಅವರು ಕಾರ್ಯಕ್ರಮದಲ್ಲಿ ಅಚ್ಚುತ ಸಮಂತಾರವರ ಕೆಲಸ ಕಾರ್ಯವನ್ನು ಪ್ರಶಂಶಿಸಿದರು. ಅವರು ದೀನದಲಿತರಿಗೆ, ...

ಬೌದ್ಧ ತಾತ್ವಿಕತೆ ಆಚರಣೆಯಲ್ಲ ಅದೊಂದು ಬದುಕಿನ ಮಾರ್ಗ ; ಡಾ. ನಟರಾಜ ಬೂದಾಳ್ ಅಭಿಮತ

Image
ತುಮಕೂರು: ಬೌದ್ಧ ತಾತ್ವಿಕತೆ ಕೇವಲ ಜ್ಞಾನ ಮಾರ್ಗವಲ್ಲ, ಅದು ಅನುಸಂಧಾನದ ಮಾರ್ಗ. ಅದು ಪಾಂಥಿಕತೆ, ಆಚರಣೆಗಳು, ವಿಧಿ-ನಿಷೇಧಗಳಲ್ಲಿ ಇಲ್ಲ. ಸದಾ ಎಚ್ಚರದಿಂದ ಬದುಕುವುದರಲ್ಲಿದೆ ಎಂದು ಲೇಖಕ ಡಾ ನಟರಾಜ್ ಬೂದಾಳ್ ಅಭಿಪ್ರಾಯಪಟ್ಟರು. ನಗರದ ಓಶೋ ಧ್ಯಾನ ಕೇಂದ್ರದಲ್ಲಿ ಶುಕ್ರವಾರ ಕರ್ನಾಟಕ ಲೇಖಕಿಯರ ಸಂಘ ತುಮಕೂರು, ಓದು ಲೇಖಕಿ ಬಳಗ, ವಿಚಾರ ಮಂಟಪ ಬಳಗ ಹಾಗೂ ಸಾಕ್ಷಿ ಪ್ರಕಾಶನ ಇವರ ಸಹಯೋಗದಲ್ಲಿ ಬುದ್ಧ ಪೂರ್ಣಿಮೆಯ ಪ್ರಯುಕ್ತ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬುದ್ಧನ ತಾತ್ವಿಕತೆ ನಮ್ಮೊಳಗೆ ಇದೆ. ಅದು ಹೊರಗಿಂದ ಕೇಳಿ ದಕ್ಕಿಸಿಕೊಳ್ಳಬೇಕಾದ ಸಂಗತಿ ಅಲ್ಲ. ಬುದ್ಧನ ಕಡೆಯ ಮಾತು ‘ನಿನಗೆ ನೀನೇ ಬೆಳಕು’ ಎಂಬುದು. ಇದೇ ಬೌದ್ಧ ತಾತ್ವಿಕತೆಯ ಬಹುದೊಡ್ಡ ಅಂಶ. ಹುಟ್ಟಿನಿಂದ ಎಲ್ಲರೂ ಬುದ್ಧರೆ. ಬೌದ್ಧ ದರ್ಶನವನ್ನು ಬಾಳುವುದೆಂದರೆ ತಪ್ಪಾಗಿ ಬಾಳದೇ ಇರುವುದು ಅಷ್ಟೇ ಎಂದರು. ಕರ್ನಾಟಕ ಲೇಖಕಿಯರ ಸಂಘದ ಅಧ್ಯೆಕ್ಷೆ ಮಲ್ಲಿಕಾ ಬಸವರಾಜು ಮಾತನಾಡಿ ಬುದ್ದನ ಚಿಂತನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು ಹೇಗೆ ಎಂಬುದು ನಮ್ಮ ಮುಂದಿರುವ ಪ್ರಶ್ನೆ. ನಮ್ಮ ನಡುವೆ, ನಮ್ಮೊಳಗೇ ಇರುವ ಬುದ್ಧನನ್ನು ಅರಿಯುವುದು ಇಂದಿನ ತುರ್ತು ಎಂದರು. ಕಾರ್ಯಕ್ರಮದಲ್ಲಿ ಕಥೆೆಗಾರ ಮಿರ್ಜಾ ಬಷೀರ್, ಕಾರ್ಯಕ್ರಮದ ಸಂಚಾಲಕಿ ಡಾ ಆಶಾರಾಣಿ ಬಗ್ಗನಡು, ಡಾ. ನಾಗಭೂಷಣ ಬಗ್ಗನಡು, ಡಾ. ಗೀತಾ ವಸಂತ, ಡಾ ಪ್ರಿಯಾಂಕ ಎಂ. ಜಿ...

ಡಾ. ಷಕೀಬ್ ಎಸ್ ಕಣದ್ಮನೆ ನವಿಲೇಹಾಳ್ ಅವರಿಗೆ ಬಸವ ಭಾರತಿ ಸಾಹಿತ್ಯ ಸಿರಿ ಕಾವ್ಯ ಪುರಸ್ಕಾರ.

Image
ಬಸವ ಭಾರತಿ ಸಾಹಿತ್ಯ ಬಳಗ (ರಿ). ಕರಬುರಗಿ ಇವರಿಂದ ಕಳೆದ ವರ್ಷ 2022 ರ ನವೆಂಬರನಲ್ಲಿ "ಬಸವ ಭಾರತಿ ಸಾಹಿತ್ಯ ಸಿರಿ ಕಾವ್ಯ ಪುರಸ್ಕಾರ" ಕ್ಕೆ ಕಾವ್ಯದ ಹಸ್ತಪ್ರತಿಗಳನ್ನು ಅಹ್ವಾನಿಸಿದ್ದು ಒಟ್ಟು 48 ಹಸ್ತಪ್ರತಿಗಳು ಬಂದಿದ್ದವು. ಇವುಗಳಲ್ಲಿ 8 ಹಸ್ತಪ್ರತಿಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದವು ಅದರಲ್ಲಿ ಆಯ್ಕೆ ಸಮಿತಿಯ ನಿರ್ಣಯದಂತೆ ದಾವಣಗೆರೆ ಜಿಲ್ಲೆಯ ಡಾ. ಷಕೀಬ್ ಎಸ್ ಕಣದ್ಮನೆ ನವಿಲೇಹಾಳ್. ರವರ "ಮಲೆನಾಡ ಮಧುಬಾಲೆ" ಎಂಬ ಹಸ್ತಪ್ರತಿಗೆ ಪ್ರಶಸ್ತಿ ಲಭಿಸಿದೆ.  ಪ್ರಶಸ್ತಿಯು 5000 ರೂಪಾಯಿಗಳ ನಗದು ಮತ್ತು ಪ್ರಶಸ್ತಿ ಫಲಕಗಳನ್ನು ಒಳಗೊಂಡಿದ್ದು. ಈ ಪ್ರಶಸ್ತಿ ಪ್ರಧಾನ ಸಮಾರಂಭವು 2023 ರ ಜೂನ್ ತಿಂಗಳಲ್ಲಿ ನಡೆಯುವ ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ ವಿತರಿಸಲಾಗುವುದು ಎಂದು ಸಂಸ್ಥೆಯ ರಾಜ್ಯ ಸಂಚಾಲಕರಾದ ಡಾ. ನಾನಾಸಾಹೇಬ ಹಚ್ಚಡದವರು ಪತ್ರಿಕಾ ವರದಿಯಲ್ಲಿ ತಿಳಿಸಿದ್ದಾರೆ.

ಹನ್ನೊಂದನೇ ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ.

Image
ಭಾಲ್ಕಿ: ಕಚುಸಾಪ ಹುಬ್ಬಳ್ಳಿ ದಶಮಾನೋತ್ಸವ ಸಂಭ್ರಮ, ರಾಜ್ಯಮಟ್ಟದ ೧೦ ಸಮ್ಮೇಳನ ಪೂರೈಸಿ ಇದೀಗ ೧೧ ರತ್ತ ದಾಪುಗಾಲು, ಮೇ ೨೫ಕ್ಕೆ ಭಾಲ್ಕಿ ಹಿರೇಮಠದ ಸಂಸ್ಥಾನದ ಅಡಿಯಲ್ಲಿ ಸಮ್ಮೇಳನ ಜರುಗಲಿದೆ. ಕನ್ನಡ ನಾಡಿನ ವೈಚಾರಿಕ ಚಿಂತಕರು, ಸಾಹಿತಿಗಳಾದ ಪರಮ ಪೂಜ್ಯ  ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರನ್ನು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕಚುಸಾಪ ಪದಾಧಿಕಾರಿಗಳು ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ ಎಂದು  ಪರಮ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೆವರು ತಿಳಿಸಿದರು. ಹಿರೇಮಠ ಸಂಸ್ಥಾನದ ಆವರಣದಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಬೀದರ ಜಿಲ್ಲಾ ಹಾಗೂ ತಾಲೂಕು ಘಟಕಗಳ ವತಿಯಿಂದ  ಆಯೋಜಿಸಿದ್ದ ಸಭೆಯ ಸಾನ್ನಿಧ್ಯ, ನೇತೃತ್ವವನ್ನು ವಹಿಸಿ ಮಾತನಾಡಿದ ಶ್ರೀಗಳು ಶಿವ ಸಂಚಾರ ತಂಡದ ಮೂಲಕ ವಿಶ್ವಮಟ್ಟದಲ್ಲಿ ಛಾಪು ಮೂಡಿಸಿದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರ ಆಯ್ಕೆ ಬಹಳ ಸಂತೋಷ ತಂದಿದೆ. ವಚನ ಚುಟುಕು ಸಾಹಿತ್ಯದಲ್ಲಿ ಮಹತ್ತರ ಸೇವೆ ಸಲ್ಲಿಸಿದ್ದಾರೆ. ತರಳಬಾಳು ಖ್ಯಾತಿ ಶಾಖಾಮಠದ ಜವಾಬ್ದಾರಿ ಹೊತ್ತುಕೊಂಡು ಜನಪರ ನಿಸ್ವಾರ್ಥ ಸೇವಾ ಕೈಂಕರ್ಯಗಳು ಮಾಡುತ್ತಿದ್ದಾರೆ. ಬಸವತತ್ವ ಅನುಷ್ಟಾನಕ್ಕೆ ಅವಿರತವಾಗಿ ಶ್ರಮಿಸುತ್ತಿರುವ ಪೂಜ್ಯರು ಉತ್ತಮ ವಾಗ್ಮಿಗಳಾಗಿದ್ದಾರೆ.ಈ ಸಮ್ಮೇಳನ ಭಾಲ್ಕಿ ಹಿರೇಮಠ ಸಂಸ್ಥಾನದ ಅಡಿಯಲ್ಲಿ ಆಗುತ್ತಿರುವುದು ಹೆಮ್ಮೆಯ ಸಂಗತಿ, ಇದಕ್ಕಾಗಿ ಎಲ್ಲರೂ ಶ್ರಮಿಸಬೇಕು. ಈ ಮೂಲಕ ಮಾದ...

ಇಂದಿನ ಮಕ್ಕಳಿಗೆ ಶಾಲೆಯ ಕಲಿಕೆಯ ಒತ್ತಡಗಳಿಂದ ಸಂಸ್ಕಾರ ಸಂಸ್ಕೃತಿ ಮತ್ತು ಅವರಲ್ಲಿನ ಕಲಾಪ್ರತಿಭೆ ಹವ್ಯಾಸಗಳ ಕಲಿಕೆಗೆ ಅವಕಾಶ ಬೇಸಿಗೆ ಶಿಬಿರಗಳು ವರಗಳಾಗಿವೆ‌ - ಕಲಾವತಿ ಮಧುಸೂದನ.

Image
ಇಂದಿನ ಮಕ್ಕಳಿಗೆ ಶಾಲೆಯ ಕಲಿಕೆಯ ಒತ್ತಡಗಳಿಂದ ಸಂಸ್ಕಾರ ಸಂಸ್ಕೃತಿ ಮತ್ತು ಅವರಲ್ಲಿನ ಕಲಾಪ್ರತಿಭೆ ಹವ್ಯಾಸಗಳ ಕಲಿಕೆಗೆ ಅವಕಾಶ ಬೇಸಿಗೆ ಶಿಬಿರಗಳು ವರಗಳಾಗಿವೆ‌  ಈ ನಿಟ್ಟಿನಲ್ಲಿ ಅಳಿಲು ಸೇವೆ ಸಲ್ಲಿಸುವುದು ಸಂಘದ ಉದ್ದೇಶವಾಗಿದ್ದು. ಇದರಲ್ಲಿ ಪೋಷಕರ ಪಾತ್ರ ಮುಖ್ಯವಾದುದು ಎಂದು ಹಾಸನ ಜಿಲ್ಲಾ ಶತ್ತಾದ ಶ್ರೀ ವೈಷ್ಣವ ಸಂಘ(ರಿ) ಹಾಸನ ವತಿಯಿಂದ ಪಿ.ಡಬ್ಲ್ಯೂ ಡಿ.ಶ್ರೀ ರಾಮಮಂದಿರದಲ್ಲಿ ಆಯೋಜಿಸಲಾಗಿದ್ದ ಬೇಸಿಗೆ ಶಿಬಿರದ ಸಮಾರೋಪದ ಸಮಾರಂಭದಲ್ಲಿ ಸಂಘದ ನಿರ್ದೇಶಕಿ ಕಲಾವತಿ ಮಧುಸೂದನ ಪ್ರಾಸ್ತಾವಿಕ ನುಡಿದು ಅಭಿನಂದಿಸಿದರು. 5 ದಿನಗಳ ಕಾಲ ಸಂಪನ್ಮೂಲ ವ್ಯಕ್ತಿಗಳಾಗಿ ಮಕ್ಕಳಿಗೆ ಶ್ಲೋಕಗಳ ಕಲಿಕೆ, ಕಥೆ, ಹಾಡುಗಾರಿಕೆ,ಚಿತ್ರಕಲೆ, ಯೋಗನೃತ್ಯ, ಕೋಲಾಟ, ದೇಶಭಕ್ತಿಗೀತೆ, ಕರಾಟೆ, ಆಟೋಟಗಳ ಕಲಿಕೆಯೊಂದಿಗೆಮಕ್ಕಳಲ್ಲಿ ಉತ್ಸಾಹವನ್ನು ತುಂಬಿ ಯಶಸ್ವಿಗೊಳಿಸಿದ ಸಂಘದ ಸದಸ್ಯರಾದ ರಾಣಿ ಚರಾ ಶ್ರೀ, ಸ್ಕೌಟ್ಸ್ ಗೈಡ್ಸ್ ಕಾಂಚನ ಮಾಲ, ಯೋಗ ಶಿಕ್ಷಕಿ ರುಕ್ಮಿಣಿ ಮುಂತಾದವರನ್ನು ಅಭಿನಂದಿಸಲಾಯಿತು. ಶಿಬಿರದಲ್ಲಿ ಪೋಷಕರು ಮತ್ತು ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಕಾರ್ಯದರ್ಶಿ ನವೀನ್ ಆತ್ಮಸ್ಥೈರ್ಯವನ್ನು ತುಂಬುವ ಕಾರ್ಯಕ್ಕೆ ಸಹಕರಿಸಿದ ಎಲ್ಲರನ್ನು ಆತ್ಮೀಯವಾಗಿ ಸ್ವಾಗತ ಕೋರಿದರು. ಅಧ್ಯಕ್ಷರಾದ ಹರೀಶ್ ಮಕ್ಕಳಿಗೆ ಪ್ರಮಾಣ ಪತ್ರ ಮತ್ತು ಸ್ಮರಣಿಕೆಯನ್ನು ವಿತರಿಸಿದರು. ಅತಿಥಿಗಳಾಗಿ ಹರಿಹರಪ...

ಕನ್ನಡದ ಕುವರ ಕು. ಸಂಜಯಕುಮಾರ ಬಿರಾದಾರ ಅವರಿಗೆ ನಿಕಟ ಪೂರ್ವ ಮುಖ್ಯಮಂತ್ರಿ ಶ್ರೀ ಗುಲಾಂ ನಬಿ ಆಜಾದ್ ಅವರಿಂದ ನ್ಯಾಷನಲ್ ಯೂತ್ ಎಕ್ಸಲೇನ್ಸ್ ರಾಷ್ಟ್ರ ಪ್ರಶಸ್ತಿಯಿಂದ ಜಮ್ಮುವಿನಲ್ಲಿ ಸನ್ಮಾನ.

Image
ಕರ್ನಾಟಕದ ಯುವ ಪ್ರತಿಭೆ ಶ್ರೀ ಸಂಜಯಕುಮಾರ ಯ. ಬಿರಾದಾರ ಅವರಿಗೆ ಜಮ್ಮು ಕಾಶ್ಮೀರದಲ್ಲಿ ಅವರ ಎನ್.ಎಸ್.ಎಸ್ ನಲ್ಲಿಯ ಕಾರ್ಯ ವೈಖರಿ ಹಾಗೂ ಸಮಾಜ ಸೇವೆಯನ್ನು ಗುರುತಿಸಿ ಜಮ್ಮುವಿನ ಗಾಂಧಿನಗರ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ  'ಲಿವ್ ಫಾರ್ ಅದರ್ಸ್ - ಬಿಯಿಂಗ್ ಹೆಲ್ಪ್  ಪುಲ್ ಪೌಂಡೇಶನ್' ವತಿಯಿಂದ  ಆಯೋಜಿಸಿದ್ದ 'ನ್ಯಾಷನಲ್ ಯೂತ್ ಎಕ್ಸ್ಚೇಂಜ್' ಕಾರ್ಯಕ್ರಮದಲ್ಲಿ “ನ್ಯಾಷನಲ್ ಯೂತ್ ಎಕ್ಸಲೇನ್ಸ್ ಪ್ರಶಸ್ತಿ"ಯನ್ನು ಜಮ್ಮು & ಕಾಶ್ಮಿರದ ನಿಕಟ ಪೂರ್ವ ಮುಖ್ಯಮಂತ್ರಿಗಳು, ರಾಜ್ಯಸಭಾ ವಿರೋಧ ಪಕ್ಷದ ನಾಯಕರು ಹಾಗೂ ಪದ್ಮಭೂಷಣ ಸನ್ಮಾನ್ಯ ಶ್ರೀ ಗುಲಾಮ್ ನಬಿ ಆಜಾದ್ ಅವರು ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಪದ್ಮಶ್ರೀ ಪಡೆದ ಶ್ರೀ ಮೋಹನ್ ಸಿಂಗ್ ಅವರು ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಫೌಂಡೆಶನ್ ನ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ವಿವೇಕ ಪರಿಹಾರ ಅವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪ್ರಶಸ್ತಿಯನ್ನು ಪಡೆದ ಸಂಜಯಕುಮಾರ ಯ. ಬಿರಾದಾರ ಅವರಿಗೆ ಶಾಸಕರಾದ ಶ್ರೀ ಶಿವಾನಂದ ಎಸ್ ಪಾಟೀಲ್. ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಕೆ. ಬಿ ಗುಡಸಿ, ಐಎಎಸ್ ಅಧಿಕಾರಿ ಶ್ರೀ ಯಶಪಾಲ್ ಕ್ಷೀರಸಾಗರ, ಸಮಾಜ ಸೇವಕರಾದ ಶ್ರೀ ಕೃಷ್ಣಾ ಡಿ ಕೊಳ್ಳಾನಟ್ಟಿ, ರೇಷ್ಮೆ ಇಲಾಖೆ ಮಾಜಿ ಅಧ್ಯಕ್ಷರಾದ ಶ್ರೀಮತಿ ಸವಿತಾ ಅಮರಶೇಟ್ಟಿ ಹಾಗೂ ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿ ಪ್ರೊ. ಸಂಗಪ್ಪ ಚ...