ಡಾ. ಷಕೀಬ್ ಎಸ್ ಕಣದ್ಮನೆ ನವಿಲೇಹಾಳ್ ಅವರಿಗೆ ಬಸವ ಭಾರತಿ ಸಾಹಿತ್ಯ ಸಿರಿ ಕಾವ್ಯ ಪುರಸ್ಕಾರ.

ಬಸವ ಭಾರತಿ ಸಾಹಿತ್ಯ ಬಳಗ (ರಿ). ಕರಬುರಗಿ ಇವರಿಂದ ಕಳೆದ ವರ್ಷ 2022 ರ ನವೆಂಬರನಲ್ಲಿ "ಬಸವ ಭಾರತಿ ಸಾಹಿತ್ಯ ಸಿರಿ ಕಾವ್ಯ ಪುರಸ್ಕಾರ" ಕ್ಕೆ ಕಾವ್ಯದ ಹಸ್ತಪ್ರತಿಗಳನ್ನು ಅಹ್ವಾನಿಸಿದ್ದು ಒಟ್ಟು 48 ಹಸ್ತಪ್ರತಿಗಳು ಬಂದಿದ್ದವು. ಇವುಗಳಲ್ಲಿ 8 ಹಸ್ತಪ್ರತಿಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದವು ಅದರಲ್ಲಿ ಆಯ್ಕೆ ಸಮಿತಿಯ ನಿರ್ಣಯದಂತೆ ದಾವಣಗೆರೆ ಜಿಲ್ಲೆಯ ಡಾ. ಷಕೀಬ್ ಎಸ್ ಕಣದ್ಮನೆ ನವಿಲೇಹಾಳ್. ರವರ "ಮಲೆನಾಡ ಮಧುಬಾಲೆ" ಎಂಬ ಹಸ್ತಪ್ರತಿಗೆ ಪ್ರಶಸ್ತಿ ಲಭಿಸಿದೆ. 

ಪ್ರಶಸ್ತಿಯು 5000 ರೂಪಾಯಿಗಳ ನಗದು ಮತ್ತು ಪ್ರಶಸ್ತಿ ಫಲಕಗಳನ್ನು ಒಳಗೊಂಡಿದ್ದು. ಈ ಪ್ರಶಸ್ತಿ ಪ್ರಧಾನ ಸಮಾರಂಭವು 2023 ರ ಜೂನ್ ತಿಂಗಳಲ್ಲಿ ನಡೆಯುವ ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ ವಿತರಿಸಲಾಗುವುದು ಎಂದು ಸಂಸ್ಥೆಯ ರಾಜ್ಯ ಸಂಚಾಲಕರಾದ ಡಾ. ನಾನಾಸಾಹೇಬ ಹಚ್ಚಡದವರು ಪತ್ರಿಕಾ ವರದಿಯಲ್ಲಿ ತಿಳಿಸಿದ್ದಾರೆ.

Comments

Popular posts from this blog

ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಕರ್ನಾಟಕ ಸಾಂಸ್ಕೃತಿಕ ವೈಭವ ಕಾರ್ಯಕ್ರಮ.

ತುಮಕೂರಿನಲ್ಲಿ ಕವಿಗೋಷ್ಠಿ ಹಾಗೂ ಪುಸ್ತಕ ಓದು ಸಂವಾದ ಕಾರ್ಯಕ್ರಮ.

ಕಾವ್ಯದೀವಿಗೆ ಕೃತಿ ಲೋಕಾರ್ಪಣೆ