ಇಂದಿನ ಮಕ್ಕಳಿಗೆ ಶಾಲೆಯ ಕಲಿಕೆಯ ಒತ್ತಡಗಳಿಂದ ಸಂಸ್ಕಾರ ಸಂಸ್ಕೃತಿ ಮತ್ತು ಅವರಲ್ಲಿನ ಕಲಾಪ್ರತಿಭೆ ಹವ್ಯಾಸಗಳ ಕಲಿಕೆಗೆ ಅವಕಾಶ ಬೇಸಿಗೆ ಶಿಬಿರಗಳು ವರಗಳಾಗಿವೆ‌ - ಕಲಾವತಿ ಮಧುಸೂದನ.

ಇಂದಿನ ಮಕ್ಕಳಿಗೆ ಶಾಲೆಯ ಕಲಿಕೆಯ ಒತ್ತಡಗಳಿಂದ ಸಂಸ್ಕಾರ ಸಂಸ್ಕೃತಿ ಮತ್ತು ಅವರಲ್ಲಿನ ಕಲಾಪ್ರತಿಭೆ ಹವ್ಯಾಸಗಳ ಕಲಿಕೆಗೆ ಅವಕಾಶ ಬೇಸಿಗೆ ಶಿಬಿರಗಳು ವರಗಳಾಗಿವೆ‌  ಈ ನಿಟ್ಟಿನಲ್ಲಿ ಅಳಿಲು ಸೇವೆ ಸಲ್ಲಿಸುವುದು ಸಂಘದ ಉದ್ದೇಶವಾಗಿದ್ದು.
ಇದರಲ್ಲಿ ಪೋಷಕರ ಪಾತ್ರ ಮುಖ್ಯವಾದುದು ಎಂದು ಹಾಸನ ಜಿಲ್ಲಾ ಶತ್ತಾದ ಶ್ರೀ ವೈಷ್ಣವ ಸಂಘ(ರಿ) ಹಾಸನ ವತಿಯಿಂದ ಪಿ.ಡಬ್ಲ್ಯೂ ಡಿ.ಶ್ರೀ
ರಾಮಮಂದಿರದಲ್ಲಿ ಆಯೋಜಿಸಲಾಗಿದ್ದ ಬೇಸಿಗೆ ಶಿಬಿರದ ಸಮಾರೋಪದ ಸಮಾರಂಭದಲ್ಲಿ ಸಂಘದ ನಿರ್ದೇಶಕಿ ಕಲಾವತಿ ಮಧುಸೂದನ ಪ್ರಾಸ್ತಾವಿಕ ನುಡಿದು
ಅಭಿನಂದಿಸಿದರು.
5 ದಿನಗಳ ಕಾಲ ಸಂಪನ್ಮೂಲ ವ್ಯಕ್ತಿಗಳಾಗಿ ಮಕ್ಕಳಿಗೆ ಶ್ಲೋಕಗಳ ಕಲಿಕೆ, ಕಥೆ, ಹಾಡುಗಾರಿಕೆ,ಚಿತ್ರಕಲೆ, ಯೋಗನೃತ್ಯ, ಕೋಲಾಟ, ದೇಶಭಕ್ತಿಗೀತೆ, ಕರಾಟೆ, ಆಟೋಟಗಳ ಕಲಿಕೆಯೊಂದಿಗೆಮಕ್ಕಳಲ್ಲಿ ಉತ್ಸಾಹವನ್ನು ತುಂಬಿ ಯಶಸ್ವಿಗೊಳಿಸಿದ ಸಂಘದ ಸದಸ್ಯರಾದ ರಾಣಿ ಚರಾ ಶ್ರೀ, ಸ್ಕೌಟ್ಸ್ ಗೈಡ್ಸ್ ಕಾಂಚನ ಮಾಲ, ಯೋಗ ಶಿಕ್ಷಕಿ ರುಕ್ಮಿಣಿ ಮುಂತಾದವರನ್ನು ಅಭಿನಂದಿಸಲಾಯಿತು.

ಶಿಬಿರದಲ್ಲಿ ಪೋಷಕರು ಮತ್ತು ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

ಕಾರ್ಯದರ್ಶಿ ನವೀನ್ ಆತ್ಮಸ್ಥೈರ್ಯವನ್ನು ತುಂಬುವ ಕಾರ್ಯಕ್ಕೆ ಸಹಕರಿಸಿದ ಎಲ್ಲರನ್ನು ಆತ್ಮೀಯವಾಗಿ ಸ್ವಾಗತ ಕೋರಿದರು. ಅಧ್ಯಕ್ಷರಾದ ಹರೀಶ್ ಮಕ್ಕಳಿಗೆ ಪ್ರಮಾಣ ಪತ್ರ ಮತ್ತು ಸ್ಮರಣಿಕೆಯನ್ನು ವಿತರಿಸಿದರು. ಅತಿಥಿಗಳಾಗಿ ಹರಿಹರಪುರ ಶ್ರೀಧರ್,  ದೇವರಾಜ್, ವಕೀಲರಾದ ರಾಘವೇಂದ್ರ, ಹಿತನುಡಿಗಳನ್ನಾಡಿದರು.
ದರ್ಶನ್, ನರಸಿಂಹ ಮೂರ್ತಿ, ಜ್ಯೋತಿ,ಶೃತಿ, ಕಲಾ, ಸತ್ಯವತಿ, ಪದ್ಮಾವತಿ ವೆಂಕಟೇಶ್, ಸಮಾಜ ಸೇವಕರಾದ ಗಿರೀಶ್ ಮುಂತಾದವರು ಉಪಸ್ಥಿತರಿದ್ದರು.
ಕವಿತ, ಪ್ರತಿಮ ವಂದಿಸಿದರು. 
ಮಾತೃ ಪೂಜನ,ಮಾತೃ ಭೋಜನ ದೊಂದಿಗೆ ಸಮಾರೋಪ ಸುಸಂಪನ್ನವಾಯಿತು.
ವರದಿ: ಕಲಾವತಿಮಧುಸೂದನ, ಹಾಸನ.



Comments

Popular posts from this blog

ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಕರ್ನಾಟಕ ಸಾಂಸ್ಕೃತಿಕ ವೈಭವ ಕಾರ್ಯಕ್ರಮ.

ತುಮಕೂರಿನಲ್ಲಿ ಕವಿಗೋಷ್ಠಿ ಹಾಗೂ ಪುಸ್ತಕ ಓದು ಸಂವಾದ ಕಾರ್ಯಕ್ರಮ.

ಕಾವ್ಯದೀವಿಗೆ ಕೃತಿ ಲೋಕಾರ್ಪಣೆ