ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆ ಯ ಅಮ್ಮನ ಪ್ರೀತಿ ಕವನ ಸ್ಪರ್ಧೆಯ ಫಲಿತಾಂಶ ಪ್ರಕಟ.

ಪ್ರಥಮ ಸ್ಥಾನ : ಶಂಕರಗೌಡ ಬ ಕುರಹಟ್ಟಿ, ಧಾರವಾಡ.

ದ್ವಿತೀಯ ಸ್ಥಾನ : ರವಿಕುಮಾರ ಜಾಧವ್ (ಸೋನೆ), ಹಂಪಿ.

ತೃತೀಯ ಸ್ಥಾನ : ರೂಪಾ ಭೀ ರಜಪೂತ, ವಿಜಯಪುರ.

ಸಮಾಧಾನಕರ ಸ್ಥಾನ : ಗಿರೀಶ್ ರಾಮನಗರ (ರಾಗಿ).

ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆ ಯ ಅಮ್ಮನ ಪ್ರೀತಿ ಕವನ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು, ಸ್ಪರ್ಧೆಯ ತೀರ್ಪುಗಾರರಾದ ಶ್ರೀ ವರುಣ್ ರಾಜ್ ಜಿ, ಅಧ್ಯಕ್ಷರು ವಿಚಾರ ಮಂಟಪ ಬಳಗ ಇವರು ಮಾತನಾಡುತ್ತಾ, 
"ತನುಶ್ರೀ ಪ್ರಕಾಶನ ಸಂಸ್ಥೆ ಹಾಗೂ ತನುಶ್ರೀ ಸಾಹಿತ್ಯ ಸಾಂಸ್ಕೃತಿಕ ಕಲಾ ಬಳಗದ ಹೆಸರಿನಲ್ಲಿ ಶ್ರೀ ರಾಜು ಸೂಲೇನಹಳ್ಳಿಯವರು ಸಾಕಷ್ಟು ವೈವಿಧ್ಯಮಯ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಸಾಹಿತ್ಯ ವಲಯದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದ್ದಾರೆ. ಇವರ ಸೇವೆ ಅನನ್ಯ, ಸಾಧನೆಗಳು ಅನಂತ. ಇಂತಿವರ ಅಧ್ಯಕ್ಷತೆಯಲ್ಲಿ ನಡೆಸಲಾಗಿರುವ 'ಅಮ್ಮನ ಪ್ರೀತಿ' ಎಂಬ ವಿಷಯದ ಕುರಿತ ಕವನ ಸ್ಪರ್ಧೆಯು ಬಹಳ  ಯಶಸ್ವಿಯಾಗಿ ಮೂಡಿಬಂದಿದೆ. ನಾಡಿನ ಮೂಲೆಮೂಲೆಯ ಸುಮಾರು ೪೦ ಜನ ಹಿರಿಯ - ಕಿರಿಯ ಸಾಹಿತಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವುದು ವಿಶೇಷ. 
ಅಮ್ಮನ ಪ್ರೀತಿಯನ್ನು ಪದಗಳಲ್ಲಿ ಕಟ್ಟುವುದು ನಿಜಕ್ಕೂ ಸಾಹಸವೇ. ಏಕೆಂದರೆ ಅಮ್ಮ ಪದಗಳಿಗೆ ನಿಲುಕದವಳು. ಅವಳ ಪ್ರೀತಿಯನ್ನು ವರ್ಣಿಸಲು ಆದಿಶೇಷನು ಅಶಕ್ಯ. ಇಂತಹಾ ಅದಮ್ಯ ಸಾಹಸವನ್ನು ಇಲ್ಲಿನ ಎಲ್ಲಾ ಕವಿ ಮಿತ್ರರೂ ಬಹಳ ಪ್ರಾಮಾಣಿಕತೆಯಿಂದ ಮಾಡಿರುವುದು ಬಹಳ ಸಂತೋಷದ ಮತ್ತು ಹೆಮ್ಮೆಯ ಸಂಗತಿ.
ತಾಯಿಯ ಪ್ರೀತಿಯನ್ನು ವರ್ಣಿಸುವ ಕವಿತೆಗಳನ್ನು ಮನಃಪೂರ್ವಕವಾಗಿ ಓದಿ, ಮಾತೃಪ್ರೇಮದ  ಅನಂತ ಆಯಾಮಗಳನ್ನು  ಅರ್ಥೈಸಿಕೊಂಡು, ಆನಂದಿಸುವ ಸೌಭಾಗ್ಯ ಈ ತೀರ್ಪುಗಾರನದ್ದು. 
ಸ್ಪರ್ಧೆ ಎಂದ ಮೇಲೆ ಕೆಲವು ಅತ್ಯುತ್ತಮ ಕವಿತೆಗಳನ್ನು ಆರಿಸಲೇಬೇಕು. ಇದು ಎಷ್ಟು ಕಷ್ಟದ , ಸವಾಲಿನ ಕೆಲಸ ಎಂಬುದನ್ನು ಬಲ್ಲವರೇ ಬಲ್ಲರು. ಆದರೂ, ಶ್ರೀ ರಾಜು ಅವರು ನಮ್ಮ‌ ಮೇಲಿರಿಸಿರುವ ವಿಶ್ವಾಸಕ್ಕೆ ಮತ್ತು ನಮ್ಮ ನೈತಿಕ ಪ್ರಜ್ಞೆಗೆ ಭಂಗ ಬರದ ಹಾಗೆ ಪದ ಬಳಕೆ, ರೂಪಕ- ಉಪಮೆಗಳು, ಹೊಸತನ, ಹೊಸ ನೋಟ, ಹಾಗೂ ಹೊಸ ಚರ್ಚೆಗೆ ದಾರಿ ಮಾಡಬಹುದಾದ ವಿಚಾರಗಳನ್ನು ಮಾನದಂಡಗಳಾಗಿಸಿಕೊಂಡು  ಸ್ಪರ್ಧೆಯಲ್ಲಿ ಭಾಗವಹಿಸಿರುವ ಎಲ್ಲರ ಕವನಗಳನ್ನು ಓದಿ, ಮತ್ತೆ ಮತ್ತೆ ಓದಿ ಪುನಃ ಸೂಕ್ಷ್ಮವಾಗಿ ಗಮನಿಸಿ, ಪರಿಶೀಲಿಸಿ, ನನ್ನ ಅಭಿಪ್ರಾಯವನ್ನು ತಿಳಿಸಿರುವೆ. ನನ್ನ ಅಭಿಪ್ರಾಯವನ್ನು ಎಲ್ಲಾ ಕವಿ ಮಿತ್ರರು ಸಹೃದಯರು ಸ್ವೀಕರಿಸುವರೆಂದು ನಂಬಿರುವೆ. ಎಲ್ಲಾ ವಿಜೇತರಿಗೆ ಹಾಗೂ ಎಲ್ಲಾ ಸ್ಪರ್ಧಾರ್ಥಿಗಳಿಗೂ ಪ್ರೀತಿಯ ಅಭಿನಂದನೆಗಳು. ಈ ಎಲ್ಲಾ ಕವನಗಳನ್ನು ಸಂಪಾದಿಸಿ ಮತ್ತಷ್ಟು ಉತ್ತಮಗೊಳಿಸಿ ಕೃತಿಯ ರೂಪದಲ್ಲಿ ಪ್ರಕಟಿಸಿ ಸಹೃದಯರಿಗೆ ಅರ್ಪಿಸಬೇಕೆಂದ ಸ್ಪರ್ಧೆಯ ಆಯೋಜಕರಲ್ಲಿ ಪ್ರೀತಿಪೂರ್ವಕವಾಗಿ ಒತ್ತಾಯಿಸುವೆ" ಎಂದರು.
ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆ ಯ ಸಂಸ್ಥಾಪಕ‌ ಅಧ್ಯಕ್ಷರು ಸಾಹಿತಿಗಳೂ ಆದ ಶ್ರೀ ಎಸ್. ರಾಜು ಸೂಲೇನಹಳ್ಳಿಯವರು ಮಾತನಾಡುತ್ತಾ, "ನಮ್ಮ ಸಂಸ್ಥೆಯು ಇಂತಹ ಹಲವು ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಾಹಿತಿಗಳನ್ನು ಪ್ರೋತ್ಸಾಹಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ. ಇದಕ್ಕಾಗಿ ಸಹಕರಿಸುತ್ತಿರುವ ಎಲ್ಲರಿಗೂ ಧನ್ಯವಾದಗಳು ಹಾಗೂ ಈ ಸ್ಪರ್ಧೆಯ ಎಲ್ಲಾ ವಿಜೇತರಿಗೂ ಹಾಗೂ ಇದರಲ್ಲಿ ಭಾಗವಹಿಸಿ ಎಲ್ಲಾ ೪೦ ಕವಿಗಳಿಗೂ ಪ್ರೀತಿಯ ಅಭಿನಂದನೆಗಳು" ಎಂದರು.


Comments

Popular posts from this blog

ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಕರ್ನಾಟಕ ಸಾಂಸ್ಕೃತಿಕ ವೈಭವ ಕಾರ್ಯಕ್ರಮ.

ತುಮಕೂರಿನಲ್ಲಿ ಕವಿಗೋಷ್ಠಿ ಹಾಗೂ ಪುಸ್ತಕ ಓದು ಸಂವಾದ ಕಾರ್ಯಕ್ರಮ.

ಕಾವ್ಯದೀವಿಗೆ ಕೃತಿ ಲೋಕಾರ್ಪಣೆ