ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ (ರಿ)ಹಾಸನದ 12ನೇ ವಾರ್ಷಿಕೋತ್ಸವದ ಅಂಗವಾಗಿ ಉಚಿತ ನೇತ್ರ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿತ್ತು.
ದಿನಾಂಕ- 23-5-2023ರಂದು ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ (ರಿ)ಹಾಸನದ 12ನೇ ವಾರ್ಷಿಕೋತ್ಸವದ ಅಂಗವಾಗಿ
ಶ್ರೀ ಹೆಚ್ ವಿ. ಮಧುಸೂದನರವರ ಸ್ಮರಣಾರ್ಥ
ಅಮ್ಮ ಕಣ್ಣಿನ ಆಸ್ಪತ್ರೆ , ಕೆ ಆರ್. ಪುರಂ ಹಾಸನ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿತ್ತು.
ಈ ಶಿಬಿರದಲ್ಲಿ ಆರ್ಥಿಕವಾಗಿ ದುರ್ಬಲರಾದ ಫಲಾನುಭವಿಗಳಿಗೆ ಉಚಿತ ಕನ್ನಡಕವನ್ನು ವಿತರಿಸಲಾಯಿತು. ಈ ಕಾರ್ಯಕ್ರಮದ ಪ್ರಾಯೋಜಕರಾಗಿ ಹಾಸನಾಂಬ ಕೆನಾಲ್ ಶ್ರೀ ಹೆಚ್.ಎಮ್. ರಾಘವೇಂದ್ರ ಮಧುಸೂದನ್ ಹಾಸನ ಮತ್ತು ಮಾನಸ ರಘುಪ್ರಸಾದ್ ರವರು ಸಹಕರಿಸಿದರು.
ಹಾಗೂ ನೇತ್ರ ತಜ್ಞರಾದ ಡಾ|| ಸಂದೀಪ್ ರವರು ಗ್ರಾಮೀಣ ಪ್ರದೇಶದ ಜನರಿಗೆ ಇದರ ಪ್ರಯೋಜನ ತಲಪುವಂತಾಗಲು ನಮ್ಮ ತಂಡ ಸದಾ ಸಿದ್ಧವಿರುತ್ತದೆ ಎಂದು ವಿಶ್ವಾಸದಿಂದ ನುಡಿದರು.
ಇಡೀ ದಿನ ಗಂಟೆಗಟ್ಟಲೇ ಮೂರು ನಾಲ್ಕು ಕಡೆ ಸರಣಿಯಲ್ಲಿ ನಿಂತು ಕಷ್ಟಪಡುತ್ತಿದ್ದ ರೋಗಿಗಳ ಪರಿಸ್ಥಿತಿಗೆ ಪರಿಹಾರ ಈ ಯೋಜನೆಯ ಪುಟ್ಟ ಪ್ರಯತ್ನ. ಶ್ರಮವಿಲ್ಲದೇ ಒಂದೆಡೆ ತಪಾಸಣೆ ಚಿಕಿತ್ಸೆ ಒದಗಿಸುವ ಮೂಲಕ ರೋಗಿಗಳಿಗೆ ಉಪಯೋಗವಾಗಲೆಂಬ ಉದ್ದೇಶ ಸಂಸ್ಥೆಯದ್ದಾಗಿರುತ್ತದೆ. ಎಂದು ಮಾತನಾಡಿದ ಸ್ಪಂದನ ಸಿರಿ ವೇದಿಕೆಯ ಅಧ್ಯಕ್ಷೆ ಕಲಾವತಿ ಮಧುಸೂದನರವರು
ಆರ್ಥಿಕ ದುರ್ಬಲರಿಗೆ ಉಚಿತ ಕನ್ನಡಕವನ್ನು ವಿತರಿಸಿದರು. ಹಾಗೂ ಇನ್ನೂ ಹೆಚ್ಚು ಹೆಚ್ಚು ಇದರ ಪ್ರಯೋಜನ ಪಡೆಯುವ ಮೂಲಕ ಸೇವೆಗೆ ಸಹಕರಿಸಬೇಕೆಂಬ ಆಶಯವನ್ನು ವ್ಯಕ್ತಪಡಿಸಿದರಲ್ಲದೇ, ಮುಂದಿನ ದಿನಗಳಲ್ಲಿ ಈ ಸೇವೆಯನ್ನು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಲಾಗುವುದು ಎಂದರು.
ಈ ಶಿಬಿರದಲ್ಲಿ ವಿವಿದೆಡೆಯಿಂದ ಆಗಮಿಸಿದ ರೋಗಿಗಳು ಪ್ರಯೋಜನ ಪಡೆದರು. ಮತ್ತು ಇದೇ ಸಂದರ್ಭದಲ್ಲಿ ನೇತ್ರ ತಜ್ಞರಾದ ಡಾ|| ಸಂದೀಪ್ ರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಸ್ಮಿತಾ ಹೇಮೇಶ್, ನಗರ ಉಪಾಧ್ಯಕ್ಷೆ ಶೋಭಾಲೋಕೇಶ್ , ವಾಸು, ಹೇಮ, ದಾಕ್ಷಾಯಿಣಿ, ಮುಂತಾದವರು ಉಪಸ್ತಿತರಿದ್ದರು. ಮತ್ತು
ಅಮ್ಮ ಕಣ್ಣಿನ ಆಸ್ಪತ್ರೆಯ ಸಿಬ್ಬಂದಿಗಳಾದ ಪವನ್ ಮತ್ತು ತಂಡದವರು ಸಹಕರಿಸಿದರು.
Comments
Post a Comment