ಆರ್ಟ್ ಆಫ್ ಗಿವಿಂಗ್ ಫೌಂಡೇಶನ್ ವತಿಯಿಂದ ಕವಿವಿ ಮಾನಸೊಲ್ಲಾಸ ಸಭಾಭವನದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಹತ್ತನೇ ನೀಡುವ ಕಲೆ ದಿನಾಚರಣೆ ಕಾರ್ಯಕ್ರಮವನ್ನು ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷೆ ಶ್ರೀಮತಿ ಸವಿತಾ ಅಮರಶೇಟ್ಟಿ ಉದ್ಘಾಟಿಸಿದರು.

 ಆರ್ಟ್ ಆಫ್ ಗಿವಿಂಗ್ ಕರ್ನಾಟಕ ರಾಜ್ಯದ ರಾಜ್ಯಾಧ್ಯಕ್ಷರಾದ ಶ್ರೀ ಸಂಜಯಕುಮಾರ ಬಿರಾದರ ಅವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ದಯೆ ತೋರಿಸುವವರಿಗೆ ಕೃತಜ್ಞತೆ ಸಲ್ಲಿಕೆ ಅವಶ್ಯ! ಹಾಗಾಗಿ ಸಮಾಜದಲ್ಲಿ ಪರಸ್ಪರ ಸಹಕಾರ ಅವಶ್ಯ. ಸೇವೆ ಮಾಡುವ ಪ್ರತಿಯೊಬ್ಬ ವ್ಯಕ್ತಿಯನ್ನು ಗೌರವದಿಂದ ಕಾಣಬೇಕು ಆ ನಿಟ್ಟಿನಲ್ಲಿ ಆರ್ಟ್ ಆಫ್ ಗಿವಿಂಗ್ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಅಚ್ಚುತ್ ಸಮಂತಾ ಅವರು ಮಾಡುತ್ತಿದ್ದಾರೆ. ಸಮಾಜ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಅವರು ಸಮಾಜದಲ್ಲಿ ದಯೆ ಮತ್ತು ಸಹಾನುಭೂತಿಯನ್ನು ಉತ್ತೇಜಿಸುವ ಮತ್ತು ನೀಡುವವರಿಗೆ ಕೃತಜ್ಞತೆ ವ್ಯಕ್ತಪಡಿಸುವುದೇ ಫೌಂಡೇಶನ್ ನ ಮುಖ್ಯ ಉದ್ದೇಶವಾಗಿದೆ ಎಂದಿದ್ದಾರೆ. ಈ ವೇಳೆ ಎಲ್.ಕೆ.ಜಿ ಯಿಂದ ಪಿ.ಜಿವರೆಗಿನ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ಪೆನ್ನು ನೋಟ್ ಬುಕ್  ನೀಡಲಾಗುತ್ತದೆ. ಸಫಾಯಿ ಕಾರ್ಮಿಕರು, ಸಿಪಾಯಿ ಸಿಬ್ಬಂದಿಗಳ ಸೇವೆಯನ್ನು ಗುರುತಿಸಿ, ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 200ಕ್ಕೂ ಹೆಚ್ಚು ಜನ ಸಾಧಕರಿಗೆ ವೇದಿಕೆಯಲ್ಲಿ ಸನ್ಮಾನ ಮಾಡುತ್ತಿದ್ದೇವೆ ಎಂದು ಫೌಂಡೇಶನ್ ನ ರಾಜ್ಯಾಧ್ಯಕ್ಷರು ಮಾತನಾಡಿದರು.

ನಂತರದಲ್ಲಿ ತಮ್ಮ ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಶ್ರೀಮತಿ ಸವಿತಾ ಅಮರಶೆಟ್ಟಿ ಅವರು ಕಾರ್ಯಕ್ರಮದಲ್ಲಿ ಅಚ್ಚುತ ಸಮಂತಾರವರ ಕೆಲಸ ಕಾರ್ಯವನ್ನು ಪ್ರಶಂಶಿಸಿದರು. ಅವರು ದೀನದಲಿತರಿಗೆ, ಆದಿವಾಸಿಗಳಿಗೆ, ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವುದನ್ನು ಕಂಡು ನಮಗೆ ಅವರು ಮಾದರಿ ಆಗಿದ್ದಾರೆ. ಅವರಂತೆ ನಾವು ಜೀವನದಲ್ಲಿ ಅಸಹಾಯಕರಿಗೆ ಸಹಾಯ ಮಾಡಲು ಪ್ರೇರಣೆ ನೀಡತ್ತಿರುವರೆಂದು ಮೆಚ್ಚುಗೆ ವ್ಯಕ್ತಪಡಿಸಿದರು. ಆರ್ಟ್ ಆಫ್ ಗಿವಿಂಗ್ ಫೌಂಡೇಶನ್ ಮೂಲಕ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಕಡುಬಡವರಿಗೆ, ಬಡ ವಿದ್ಯಾರ್ಥಿಗಳಿಗೆ ಹಾಗೂ ಕೆಳಹಂತದಿಂದ ಮೇಲ್ ಹಂತದವರೆಗೂ ಸಾಧನೆಗೈದ ಮಹನೀರನ್ನು ಸನ್ಮಾನಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಈ ಮೂಲಕ ಸಂಜಯಕುಮಾರ ಬಿರಾದಾರ ಅವರು ಅಚ್ಚುತ್ ಸಮಂತ ರವರ ಕನಸನ್ನು ಸಾಕಾರಗೊಳಿಸುತ್ತಿದ್ದಾರೆ. ಸಂಜಯಕುಮಾರ ಬಿರಾದರವರು ಕೇವಲ ಧಾರವಾಡ ಅಷ್ಟೇ ಅಲ್ಲದೆ, ಏಕಕಾಲಕ್ಕೆ ಬೆಂಗಳೂರು ಮೈಸೂರು ಹೀಗೆ 25 ಜಿಲ್ಲೆಗಳಲ್ಲಿ, ಏಳು ರಾಜ್ಯಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸಿ ಒಟ್ಟು ಏಳು ಸಾವಿರ ಪುಸ್ತಕಗಳನ್ನು ಹಾಗೂ ಏಳು ಸಾವಿರ ಪೆನ್ನುಗಳನ್ನು, ಏಳು ಸಾವಿರ ಸ್ವಾಮಿ ವಿವೇಕಾನಂದರ ಆಧ್ಯಾತ್ಮಿಕ ಪುಸ್ತಕಗಳನ್ನು ನೀಡುತ್ತಿರುವುದು ಅವರ ಅಪ್ರತಿಮ ಕ್ರಿಯಾಶೀಲತೆ ಮತ್ತು ಪ್ರಾಮಾಣಿಕತೆಗೆ ಕೈಗನ್ನಡಿ ಎಂದರು. ಅಷ್ಟೇ ಅಲ್ಲದೆ ಈ ಕಾರ್ಯಕ್ರಮದಲ್ಲಿ ನಮ್ಮನ್ನು ರಕ್ಷಣೆ ಮಾಡುವ ಸಿಪಾಯಿ ಸಿಬ್ಬಂದಿ ಸಹೋದರರನ್ನು ಸನ್ಮಾನಿಸುತ್ತಿರುವುದು ಅತ್ಯಂತ ಸಂತಸದ ವಿಚಾರ ಎಂದು ನುಡಿದರು.

ನಂತರದಲ್ಲಿ ಮಾತನಾಡಿದ ಕೆಸಿಡಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಬಿ.ಎಸ್.ಭಜಂತ್ರಿ ಅವರು ಮಾತನಾಡಿ ಸಂಜಯಕುಮಾರ ನಮ್ಮ ಮಹಾವಿದ್ಯಾಲಯದ ಹೆಮ್ಮೆಯ ವಿದ್ಯಾರ್ಥಿಯಾಗಿದ್ದು, ಮೊದಲಿನಿಂದಲೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾನೆ. ಆತನ ಸೇವೆಗೆ ಕರ್ನಾಟಕ ಸರ್ಕಾರದ ಎನ್.ಎಸ್.ಎಸ್ ರಾಜ್ಯ ಪ್ರಶಸ್ತಿ, ವಿಶ್ವವಿದ್ಯಾಲಯ ಪ್ರಶಸ್ತಿ ಸಹಿತ ಬಂದಿದೆ ಎಂದರು. ಈ ಚಿಕ್ಕ ವಯಸ್ಸಿನಲ್ಲಿಯೇ ಇಂತಹ ಆರ್ಟ್ ಆಫ್ ಗಿವಿಂಗ್ ಸಮಾರಂಭವನ್ನು ಇಷ್ಟೂ ದೊಡ್ಡ ಮಟ್ಟದಲ್ಲಿ ಆಯೋಜಿಸಿ ಮಕ್ಕಳಿಗೆಲ್ಲ ಉಚಿತವಾಗಿ ಪುಸ್ತಕ ಪೆನ್ನುಗಳನ್ನು ನೀಡಿದ್ದಲ್ಲದೆ ಸಿಪಾಯಿ ಸಿಬ್ಬಂದಿಗಳನ್ನು ಸನ್ಮಾನಿಸಿ ನಮ್ಮ ಮಹಾವಿದ್ಯಾಲಯದ ಕೀರ್ತಿ ಇನ್ನಷ್ಟು ಎತ್ತರಕ್ಕೆ ಏರಿಸಿದ್ದಾನೆ ಎಂದು ಶ್ಲಾಘಿಸಿದರು.

ಆನಂತರ, ಬೆಂಗಳೂರಿನಿಂದ ಆಗಮಿಸಿದ ಕರ್ನಾಟಕ ಸರ್ಕಾರದ ಮಾಜಿ ಎನ್.ಎಸ್.ಎಸ್ ಅನುಷ್ಠಾನ ಅಧಿಕಾರಿಗಳಾದ ಡಾ. ಪೂರ್ಣಿಮಾ ಜೋಗಿ ಅವರು ಮಾತನಾಡಿ ಯಾರಾದರೂ ಒಂದು ಒಳ್ಳೆಯ ಕೆಲಸ ಮಾಡಬೇಕೆಂದು ಮುಂದುವರೆದಾಗ ಕಾಲು ಎಳೆಯುವ ಜನರೇ ಹೆಚ್ಚು ಆದರೂ ಯುವಕರು ಇಂತಹ ಅಡ್ಡಿ ಆತಂಕಗಳಿಗೆ ಲಕ್ಷಗೋಡದೆ ತಾವು ಮಾಡುವ ಒಳ್ಳೆಯ ಕೆಲಸವನ್ನು ಛಲ ಬಿಡದೆ ಮುನ್ನುಗ್ಗಿ ಮಾಡಿ ಮುಗಿಸಬೇಕು. ಏಕೆಂದರೆ ಸದೃಢ ಯುವಕರಿಂದಲೇ ಸದೃಢ ಭಾರತದ ನಿರ್ಮಾಣ ಸಾಧ್ಯ ಎಂದು ನೆರೆದ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ತದನಂತರದಲ್ಲಿ  ವಿಭಾಗದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರೊ. ಜೆ.ಎಂ.ಚಂದುನವರ್ ಮಾತನಾಡಿ ನಮ್ಮ ವಿಶ್ವವಿದ್ಯಾಲಯದ ಆವರಣದಲ್ಲಿ ಶ್ರೀ ಅಚ್ಚುತ ಸಾಮಂತರವರ ಆರ್ಟ್ ಆಫ್ ಗಿವಿಂಗ್ ಕಾರ್ಯಕ್ರಮವನ್ನು ಆಯೋಜಿಸಿ, ಯಾರು ಗುರಿತಿಸದ ಸಿಪಾಯಿ ಕರ್ಮಚಾರಿಗಳನ್ನು , ಮಹಿಳೆಯರನ್ನು, ಸಿಪಾಯಿ ಸಿಬ್ಬಂದಿಗಳ ಮತ್ತು ಸಫಾಯಿ ಕಾರ್ಮಿಕರ ಸೇವೆಯನ್ನು ಗುರುತಿಸಿ ಅವರನ್ನು ಸನ್ಮಾನಿಸಿ ಗೌರವಿಸಿದ್ದು ಅತ್ಯಂತ ವಿಶೇಷವಾಗಿದೆ. ಇಂತಹ ಕಾರ್ಯಕ್ರಮಗಳನ್ನು ಇನ್ನು ಹೆಚ್ಚು ಹೆಚ್ಚಾಗಿ ಆಯೋಜಿಸಬೇಕೆಂದು ಸಂಜಯಕುಮಾರ ಅವರಲ್ಲಿ ಕೇಳಿಕೊಳ್ಳುತ್ತೇನೆ ಎಂದರು.

ಮುಂದುವರೆದು, ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ ಪ್ರಾಧ್ಯಾಪಕಿಯಾದ ಡಾ. ವಿ.ಬಿ. ಸಾವಿರಮಠ ಇವರು ನೀಡುವ ಕಲೆ ಎನ್ನುವುದು ನಮ್ಮ ಭಾರತೀಯ ಸಂಸ್ಕೃತಿಗೆ ಹೊಸದೇನಲ್ಲ, ಇದು ಪುರಾತನ ಕಾಲದಿಂದಲೂ ವೇದಗಳು, ಪುರಾಣಗಳು, ಅಲ್ಲದೆ ದಾಸರು ಶರಣರು, ಗುರುಹಿರಿಯರೆಲ್ಲ ದಾನ ಧರ್ಮದ ಮಹತ್ವವನ್ನು ಸಾರಿದ್ದಾರೆ. “ಸಿರಿ ಬಂದ ಕಾಲಕ್ಕೆ ಕರೆದು ದಾನ ಮಾಡುವ” ಎಂದು ದಾಸರು ಹಾಡಿದರೆ, “ಮಾಡುವ ನೀಡುವ ನಿಜಗುಣವುಳ್ಳದೆ ಕೂಡಿಕೊಂಬ ನಮ್ಮ ಕೂಡಲಸಂಗಮದೇವ” ಎಂದ ಬಸವಣ್ಣ ದಾನ ಧರ್ಮದಿಂದ ದೇವರ ಮೆಚ್ಚುಗೆ ಪಾತ್ರವಾಗಬಹುದು ಎಂದು ಭಗವಂತನ ಕೃಪೆಗೆ ಪಾತ್ರರಾಗಲು ಮಾರ್ಗವೇ ದಾನ 
ಧರ್ಮ ಮತ್ತು ದೀನದಲಿತರಿಗೆ ಸಹಾಯ ಮಾಡುವುದು ಎಂದು ಸಾರಿದ್ದಾರೆ. ಹಾಗಾದರೆ ಈ “ನೀಡುವ ಕಲೆಯ” ವಿಶೇಷತೆ ಏನು ಎಂದು ವಿಚಾರಿಸಿದರೆ ನಮ್ಮ ಯುವ ಜನಾಂಗಕ್ಕೆ ಸ್ಪೂರ್ತಿ ತುಂಬಲು, ದಾನ ಧರ್ಮದ ಕುರಿತು ಆಸಕ್ತಿ ಹುಟ್ಟಿಸಲು, ಆಕರ್ಷಕ ಶಬ್ದಗಳಲ್ಲಿ ನಮ್ಮ ದಾನ ಧರ್ಮಗಳಿಗೆ ಕಾರ್ಯವನ್ನು “ನೀಡುವ ಕಲೆ” ಎಂದು ಹೊಸ ಶಬ್ದಗಳಲ್ಲಿ ಕಾರ್ಯರೂಪಕ್ಕೆ ತರಲಾಗಿದೆ. ಅಚ್ಯುತ್ ಸಮಂತ ಅವರ ಉನ್ನತ ಮೌಲ್ಯದ ಕನಸನ್ನು ನನಸು ಮಾಡಲು ನಾವು ನೀವೆಲ್ಲರೂ ಈ ನೀಡುವ ಕಲೆಯ ಅಭಿಯಾನದಲ್ಲಿ ಭಾಗವಹಿಸಿ ನಮ್ಮ ಕೈಲಾದಷ್ಟು ಅಸಹಾಯಕರಿಗೆ ಸಹಾಯ ಮಾಡಬೇಕು. ಧಾರಾಳವಾಗಿ ದಾನ ಮಾಡುವ ಸಾಮರ್ಥ್ಯ ಪಡೆಯುವಂತಹ ಉನ್ನತ ಸಾಧನೆ ನೀವೆಲ್ಲ ಮಾಡುವಂತಾಗಲಿ, ನಿಮ್ಮೆಲ್ಲರ ಭವಿಷ್ಯ ಉಜ್ವಲವಾಗಲಿ, ಎಂದು ಸಾವಿರಮಠ ಅವರು ಅಲ್ಲಿ ಸೇರಿದ ಮಕ್ಕಳನ್ನು ಹಾರೈಸಿದರು.

ತದನಂತರದಲ್ಲಿ ಮಾತನಾಡಿದ ಸಹ್ಯಾದ್ರಿ ಪತ್ರಿಕೆಯ ಸಂಪಾದಕರಾದ ಶ್ರೀ ಚಿದಾನಂದ ಪಡೆದಾಳೆ ಅವರು ಇವತ್ತು ಕಾರ್ಯಕ್ರಮದಲ್ಲಿ ಉಚಿತವಾಗಿ ನೀಡಿರುವ ವಸ್ತುಗಳಲ್ಲಿ ನೋಟ್ ಬುಕ್, ಪೆನ್ನುಗಳು, ಅಷ್ಟೇ ಅಲ್ಲದೆ ವಿವೇಕಾನಂದರ ಏಕಾಗ್ರತೆ ಮತ್ತು ಕ್ರಿಯಾಶೀಲತೆ ಈ ಎರಡು ಪುಸ್ತಕಗಳನ್ನು ನೀಡಿರುವ ಮುಖ್ಯ ಉದ್ದೇಶವೇನೆಂದರೆ, ನೀವೆಲ್ಲ ಈ ಎರಡು ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉನ್ನತ ಸಾಧನೆಯನ್ನು ಮಾಡಬಹುದು ಮತ್ತು ಇತರರಿಗೆ ಮಾದರಿಯಾಗುವಂತೆ ಸಮಾಜ ಸೇವೆಯನ್ನು ಮಾಡಬಹುದು ಎಂದು ತಿಳಿಸಿದರು.

ನಂತರದಲ್ಲಿ ಮಾತನಾಡಿದ  ಶಿವಚಿದಂಬರ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಚಿದಂಬರ ನಿಂಬರಿಗಿಯವರು ಮಾತನಾಡಿ ನಿಸ್ವಾರ್ಥ ಮನೋಭಾವನೆಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಿರುವುದು ನಿಜಕ್ಕೂ ವಿಶೇಷವಾಗಿದ್ದು, ನಾವು ನಮ್ಮ ಸಂಸ್ಥೆಯೊಂದಿಗೆ ಇದಕ್ಕೆ ಕೈಜೋಡಿಸುತ್ತೇನೆ ಎಂದು ಹೇಳಲು ಬಹಳ ಸಂತೋಷವೆನಿಸುತ್ತದೆ ಎಂದರು.

ನಂತರದಲ್ಲಿ ಎ.ಪಿ.ಎಂ.ಸಿ, ಮಾರುಕಟ್ಟೆಯ ಮಾಜಿ ಅಧ್ಯಕ್ಷರು ಹಾಗೂ ಸಮಾಜಸೇವಕರು ಶ್ರೀ ಕೃಷ್ಣಾ ಡಿ.ಕೊಳ್ಳಾನಟ್ಟಿಯವರು ಅಧ್ಯಕ್ಷೀಯ ನುಡಿಗಳನ್ನಾಡಿದ ಅವರು ಇಂತಹ ಕೆಲಸವನ್ನು ಸಹೋದರ ಸಂಜಯಕುಮಾರ ಅವರು ಮಾಡುತ್ತಿರುವುದು ನಮಗೆಲ್ಲ ಅತ್ಯಂತ ಮಹತ್ವದ ವಿಚಾರ ಅವರ ಈ ಚಟುವಟಿಕೆಗಳಲ್ಲಿ ಯಾವತ್ತಿಗೂ ನಾವು ಅವರ ಜೊತೆಗೆ ಇರುತ್ತೇವೆ ಮತ್ತು ಅವರಿಗೆ ತನು,ಮನ,ಧನದಿಂದ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ನುಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪಿ.ಜಿ ಘಟಕದ ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಪ್ರೊ. ಸಂಗಪ್ಪ ಜಿ ಚಲವಾದಿ, ಗೋಕಾಕ್ ತಾಲೂಕಿನ ಸಮಾಜಸೇವಕರಾದ ಕುಮಾರಿ. ಅಶ್ವಿನಿ ರಾವ್ ಸಾಹೇಬ್ ಪಾಟೀಲ್, ಚಿತ್ರದುರ್ಗ ಜಿಲ್ಲೆಯ ಕಾಲೇಜಿನ ಪ್ರಾಧ್ಯಾಪಕರಾದ ತಿಮ್ಮಣ್ಣ ಕೆ, ಪರಶುರಾಮ ದೊಡವಾಡ ಸೆಕ್ಯೂರಿಟಿ ಆಫೀಸರ್, ಶ್ರೀ ವಿ. ಕೆ. ಬಡಿಗೇರ್, ಮ್ಯಾನೇಜರ್ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು, ಸ್ವಚ್ಛತಾ ಕರ್ಮಚಾರಿಗಳು, ಮಹಿಳಾ ಸಾಧಕೀಯರು, ಯುವಸಾಧಕರು,  ಸಿಪಾಯಿ ಸಿಬ್ಬಂದಿಗಳು, ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ನವೀನ್ ಶಾಸ್ತ್ರಿ ಅವರು ನಿರೂಪಿಸಿದರು, ವಿನೋದ್ ಅವರು ವಂದಿಸಿದರು.

Comments

Popular posts from this blog

ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಕರ್ನಾಟಕ ಸಾಂಸ್ಕೃತಿಕ ವೈಭವ ಕಾರ್ಯಕ್ರಮ.

ತುಮಕೂರಿನಲ್ಲಿ ಕವಿಗೋಷ್ಠಿ ಹಾಗೂ ಪುಸ್ತಕ ಓದು ಸಂವಾದ ಕಾರ್ಯಕ್ರಮ.

ಕಾವ್ಯದೀವಿಗೆ ಕೃತಿ ಲೋಕಾರ್ಪಣೆ