ದಸರಾ ಕವಿಗೋಷ್ಠಿಗೆ ಶ್ರೀ ರಾಜು ಸೂಲೇನಹಳ್ಳಿ ಆಯ್ಕೆ
ವಿಶ್ವ ವಿಖ್ಯಾತ ಮೈಸೂರು ದಸರಾ ಉತ್ಸವದ ಪ್ರಾದೇಶಿಕ ಕವಿಗೋಷ್ಠಿಗೆ ಚಿತ್ರದುರ್ಗ ಜಿಲ್ಲೆಯ ಗ್ರಾಮೀಣ ಪ್ರತಿಭೆ ಸಾಹಿತಿಗಳು ಕಾದಂಬರಿಕಾರರು ಆಗಿರುವ ಶ್ರೀ ಎಸ್. ರಾಜು ಸೂಲೇನಹಳ್ಳಿ ಇವರನ್ನು ಆಯ್ಕೆ ಮಾಡಲಾಗಿದ್ದು ದಿ :01/10/2022 ರ ಶನಿವಾರದಂದು ರಾಣಿ ಬಹದ್ದೂರ್ ಸಭಾಂಗಣದಲ್ಲಿ ಕವಿಗೋಷ್ಠಿ ನಡೆಯಲಿದೆ. ಶ್ರೀಯುತರು ತಮ್ಮ ತನುಶ್ರೀ ಪ್ರಕಾಶನ ಸಂಸ್ಥೆಯ ಮೂಲಕ ಹಲವು ಸಾಹಿತ್ಯಿಕ ಮತ್ತು ಸಮಾಜೋಪಕಾರಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು, ಕರುನಾಡು ಹಣತೆ ಕವಿ ಬಳಗ ಸೇರಿದಂತೆ ಹಲವು ಸಾಹಿತ್ಯ ಸಂಸ್ಥೆಗಳನ್ನು ಮುನ್ನಡೆಸುತ್ತಿದ್ದಾರೆ ಹಾಗೂ ಕವಿ ಲೇಖಕರಿಗೆ ಮಾರ್ಗದರ್ಶಕರಾಗಿ ಪ್ರತಿಭೆಗಳ ಬೆನ್ನುತಟ್ಟುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಈ ಸುಸಂದರ್ಭದಲ್ಲಿ ಶ್ರೀ ರಾಜು ಸೂಲೇನಹಳ್ಳಿ ರವರಿಗೆ ಇಂತಹಾ ಹಲವಾರು ಅವಕಾಶ, ಪ್ರೋತ್ಸಾಹ, ಪ್ರಶಸ್ತಿ ಸನ್ಮಾನಗಳು ಲಭಿಸಲಿ ಎಂದು ವಿಚಾರ ಮಂಟಪ ಸಾಹಿತ್ಯ ಬಳಗವು ಹೃದಯಪೂರ್ವಕವಾಗಿ ಹಾರೈಸಿ ಅಭಿನಂದಿಸುತ್ತದೆ.