ಚಿತ್ರದುರ್ಗ ಜಿಲ್ಲೆಯ ಸಾಧಕರಿಗೆ ನಾಡ ಪ್ರಭು ಕೆಂಪೇಗೌಡ ಸೇವಾ ರತ್ನ ರಾಷ್ಟ್ರ ಪ್ರಶಸ್ತಿಗಳು
ದಿನಾಂಕ : 25/09/2022 ಭಾನುವಾರ ಆಯೋಜನೆಗೊಂಡ ಜ್ಞಾನ ಗಂಗಾ ಸಾಹಿತ್ಯ ಮತ್ತು ಸಂಸ್ಕೃತಿಕ ರಂಗ (ರಿ) ಬೆಂಗಳೂರು ಹಾಗೂ ಕರುನಾಡ ಹಣತೆ ಕವಿ ಬಳಗ ಮತ್ತು ಸಾಂಸ್ಕೃತಿಕ ಕಲಾತಂಡ (ರಿ) ಚಿತ್ರದುರ್ಗ ಇವರ ಸಹಯೋಗದೊಂದಿಗೆ 2022 ರ ಪ್ರಥಮ ರಾಜ್ಯ ಕರುನಾಡ ಕವಿ ಕಲಾವಿದರ ರಾಷ್ಟ್ರ ಸಮ್ಮೇಳನ ಆಯೋಜಿಸಲಾಗಿತ್ತು ಹಾಗೂ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ಸನ್ಮಾನ ಪ್ರಧಾನ ಕಾರ್ಯಕ್ರಮದಲ್ಲಿ ಚಿತ್ರದುರ್ಗ ಜಿಲ್ಲೆ,ಚಳ್ಳಕೆರೆ ತಾಲ್ಲೂಕಿನ ಶಿವಮೂರ್ತಿ.ಟಿ ಕೋಡಿಹಳ್ಳಿ ಇವರಿಗೆ ಜಾನಪದ ಶಿಕ್ಷಣ,ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ರಾಷ್ಟ್ರ ಮಟ್ಟದ " ನಾಡ ಪ್ರಭು ಕೆಂಪೇಗೌಡ ಸೇವಾ ರತ್ನ ರಾಷ್ಟ್ರ ಪ್ರಶಸ್ತಿ " ನೀಡಿ ಗೌರವಿಸಲಾಯಿತು..
ಹಾಗೂ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಶ್ರೀಮತಿ ಸರಸ್ವತಿ ಕೆ.ನಾಗರಾಜ್ ಕವಯತ್ರಿ, ಇವರಿಗೆ ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆ ಗುರುತಿಸಿ ಇವರಿಗೆ ರಾಷ್ಟ್ರ ಮಟ್ಟದ " ನಾಡ ಪ್ರಭು ಕೆಂಪೇಗೌಡ ಸೇವಾ ರತ್ನ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು..
ಈ ಕಾರ್ಯಕ್ರಮದ ಉದ್ಘಾಟನೆ ಯನ್ನು ಶ್ರೀಯುತ ಜಗದೀಶ್ ಚೌದರಿ ಸಮಾಜ ಸೇವಕರು,ನೆಲಮಂಗಲ ಹಾಗೂ ಸಮ್ಮೇಳನ ಅಧ್ಯಕ್ಷತೆಯನ್ನು ಶ್ರೀಯುತ ಮಣ್ಣೆ ಮೋಹನ್ ಲೇಖಕರು, ಮತ್ತು ಅಂಕಣ ಬರಹಗಾರರು ವಹಿಸಿದ್ದರು.ಇಲ್ಲಿ ವಿದ್ಯಾರ್ಥಿ ಗೋಷ್ಠಿ,ಮಹಿಳಾ ಗೋಷ್ಠಿ,ಮತ್ತು ಕವಿ ಗೋಷ್ಠಿ ಯಲ್ಲಿ ಸಮಾರು ನೂರಕ್ಕೂ ಹೆಚ್ಚು ಕವಿಗಳು ಮತ್ತು ಸಾಹಿತಿಗಳು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಇನ್ನೂರಕ್ಕೂ ಹೆಚ್ಚು ಕಲಾವಿದರು ಭಾಗವಿಸಿದ್ದರು.
Comments
Post a Comment