'ಆತ್ಮಾನುಬಂಧದ ಸಖಿ' ಕೃತಿ ಲೋಕಾರ್ಪಣೆ

ಬೆಂಗಳೂರು : (26.09.2022)
ನಗರದ ಗಾಂಧಿ ಭವನದಲ್ಲಿಂದು ಉದಯೋನ್ಮುಖ  ಸಾಹಿತಿ ಕಲಾವಿದ 
ಶ್ರೀ ರಾಘವೇಂದ್ರ ಡಿ. ತಳವಾರ ಅವರ‌ 'ಆತ್ಮಾನುಬಂಧದ ಸಖಿ' ಕವನ ಸಂಕಲನ ಬಿಡುಗಡೆ ಸಮಾರಂಭವು ನೆರವೇರಿತು.

ಜ್ಞಾನಗಂಗ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗ ಬೆಂಗಳೂರು ಹಾಗೂ ಕರುನಾಡ ಹಣತೆ ಕವಿ ಬಳಗ ಇವರ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುಸ್ತಕ ಲೋಕಾರ್ಪಣೆ ಮಾಡಲಾಯಿತು. 
ಈ ಕವನ ಸಂಕಲನದ ಅಪ್ರಕಟಿತ ಕೃತಿಯು ಕಳೆದ ವರ್ಷ ತುಮಕೂರಿನ ಗುರುಕುಲ ಕಲಾ ಪ್ರತಿಷ್ಠಾನವು ನೀಡುವ ಗುರುಕುಲ ಸಾಹಿತ್ಯ ಕೇಸರಿ ಎಂಬ ರಾಜ್ಯ ಪ್ರಶಸ್ತಿಯನ್ನು ಪಡೆದಿದೆ. ಪ್ರಸ್ತುತ ಯುವ ಸಾಹಿತಿಗಳು ಬೆಂಗಳೂರಿನ ಜ್ಞಾನ ದರ್ಶನ ಸಂಸ್ಥೆಯ ಅಕ್ಷರ ದಾಸೋಹ ಮಾಸಪತ್ರಿಕೆ ಪ್ರಧಾನ ಸಂಪಾದಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. 

ಶ್ರೀ ಮಣ್ಣೇ ಮೋಹನ್,  ಕನಕ ಪ್ರೀತೀಶ, ಗಣಪತಿ ಗೋ. ಚಲವಾದಿ,  ಶ್ರೀ ರಾಕೇಶ್ ಎಮ್, ಗೌತಮ್ ಗೌಡ, ಶಿವಮೂರ್ತಿ ಟಿ ಕೋಡಿಹಳ್ಳಿ,  ಶ್ರೀಮತಿ ಸರಸ್ವತಿ ನಾಗರಾಜ್,  ಹಾಗೂ ಮುರುಡಿ ಗ್ರಾಮದ ಗುರು-ಹಿರಿಯರು, ಯುವ ಮಿತ್ರರು ಹಾಗೂ ಸಾಹಿತ್ಯ ಅಭಿಮಾನಿಗಳು ಹಾಜರಿದ್ದು ಕವಿಗಳಿಗೆ ಶುಭ ಹಾರೈಸಿದರು.
ಪ್ರತಿಗಳಿಗಾಗಿ ಸಂಪರ್ಕಿಸಿ : 8105242732 ರಾಘವೇಂದ್ರ ಡಿ. ತಳವಾರ.


Comments

Popular posts from this blog

ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಕರ್ನಾಟಕ ಸಾಂಸ್ಕೃತಿಕ ವೈಭವ ಕಾರ್ಯಕ್ರಮ.

ತುಮಕೂರಿನಲ್ಲಿ ಕವಿಗೋಷ್ಠಿ ಹಾಗೂ ಪುಸ್ತಕ ಓದು ಸಂವಾದ ಕಾರ್ಯಕ್ರಮ.

ಕಾವ್ಯದೀವಿಗೆ ಕೃತಿ ಲೋಕಾರ್ಪಣೆ