ಶ್ರೀ ಎನ್ ಪರಮೇಶ್ ಸರ್ ಅವರಿಗೆ ವಿದ್ಯಾರ್ಥಿಗಳಿಂದ ಗೌರವ ಸನ್ಮಾನ

ತುಮಕೂರು : (೧೭.೦೯.೨೦೨೨) ತುಮಕೂರು ಜಿಲ್ಲಾ ಬಲಿಜ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು ನಿಲಯದ ವಾರ್ಡನ್ (ಮ್ಯಾನೇಜರ್) ಶ್ರೀ ಎನ್ ಪರಮೇಶ್ ರವರಿಗೆ ಗೌರವ ಸನ್ಮಾನವನ್ನು ನೆರವೇರಿಸಿದರು.

ವಿದ್ಯಾರ್ಥಿನಿಲಯದ ವಿದ್ಯಾರ್ಥಿ ಶ್ರೀ ರಾಜಶೇಖರ್ ಇವರು ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿ ಮುಂದಿನ ಅಧ್ಯಯನಕ್ಕಾಗಿ ತೆರಳುತಿರುವ ಹಿನ್ನೆಲೆಯಲ್ಲಿ ಇಲ್ಲಿವರೆಗೆ ತಮ್ಮ ಅಧ್ಯಾಯನಕ್ಕೆ ಸಹಕಾರ ಹಾಗೂ ಮಾರ್ಗದರ್ಶನವನ್ನು ನೀಡಿದ ಶ್ರೀ ಪರಮೇಶ್ ಸರ್ ಅವರಿಗೆ ವಿದ್ಯಾರ್ಥಿಗಳೆಲ್ಲರ ಸಮ್ಮುಖದಲ್ಲಿ ಗೌರವ ಸನ್ಮಾನವನ್ನು ನೆರವೇರಿಸಿದರು.


ಗೌರವ ಸ್ವೀಕರಿಸಿದ ಪರಮೇಶ್ ರವರು ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಧನ್ಯವಾದಗಳನ್ನು ತಿಳಸಿ ಶುಭ ಹಾರೈಸಿದರು. 

ಈ ಸಂಧರ್ಭದಲ್ಲಿ ಶ್ರೀ ವೆಂಕಟೇಶ್ ಮೂರ್ತಿ (ವೆಂಕಿ), ರಾಘವೇಂದ್ರ, ರಾಜಶೇಖರ್, ನಾಗರಾಜ್,  ಲಿಖಿತ್ ಕುಮಾರ್, ವರುಣ್ ರಾಜ್ ಜಿ, ಹೇಮಂತ್, ಅಭಿ, ತೇಜ, ಪುರುಷೋತ್ತಮ, ಸಾಯಿ, ವಂಶಿ ಮುಂತಾದವರು ಹಾಜರಿದ್ದರು. 

-ವರದಿ : ವರುಣ್ ರಾಜ್ ಜಿ.

Comments

Popular posts from this blog

ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಕರ್ನಾಟಕ ಸಾಂಸ್ಕೃತಿಕ ವೈಭವ ಕಾರ್ಯಕ್ರಮ.

ತುಮಕೂರಿನಲ್ಲಿ ಕವಿಗೋಷ್ಠಿ ಹಾಗೂ ಪುಸ್ತಕ ಓದು ಸಂವಾದ ಕಾರ್ಯಕ್ರಮ.

ಕಾವ್ಯದೀವಿಗೆ ಕೃತಿ ಲೋಕಾರ್ಪಣೆ