ಲೋಕಾರ್ಪಣೆಗೊಳ್ಳಲಿರುವ ಶ್ರೀ ರಾಘವೇಂದ್ರ ಡಿ. ತಳವಾರ ಅವರ 'ಆತ್ಮಾನುಬಂಧದ ಸಖಿ'.
ಜ್ಞಾನಗಂಗ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗ, ಬೆಂಗಳೂರು ಹಾಗೂ ಕರುನಾಡ ಹಣತೆ ಕವಿ ಬಳಗ & ಸಾಂಸ್ಕೃತಿಕ ತಂಡ, ಚಿತ್ರದುರ್ಗ - ಇವರ ಸಹಯೋಗದಲ್ಲಿ ರಾಜ್ಯ ಮಟ್ಟದ ಕವಿ ಕಲಾವಿದರ ಸಮ್ಮೇಳನ - 2022 ನ್ನು ಬೆಂಗಳೂರಿನ ಗಾಂಧಿ ಭವನದಲ್ಲಿ 25-09-2022 ನೇ ಭಾನುವಾರದಂದು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಭಾಗವಾಗಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂವಾದ, ಸಾಧಕರಿಗೆ ಸನ್ಮಾನ ಮತ್ತು ಪ್ರಶಸ್ತಿ ವಿತರಣೆ, ಹಾಗೂ ಪುಸ್ತಕಗಳ ಲೋಕಾರ್ಪಣೆಯನ್ನು ಹಮ್ಮಿಕೊಳ್ಳಲಾಗಿದೆ.
ತನುಶ್ರೀ ಪ್ರಕಾಶನ ಸಂಸ್ಥೆ ಸೂಲೇನಹಳ್ಳಿ ಇವರ ಹೆಮ್ಮೆಯ ೧೦ ನೇ ಪ್ರಕಟಣೆಯಾಗಿ ಹೊರಬರುತ್ತಿರುವ
ಈ ಕವನ ಸಂಕಲನವು ತನ್ನ ಹೆಸರೇ ಸೂಚಿಸುವಂತೆ ಆತ್ಮದ ಆತ್ಮೀಯತೆಯನ್ನು ತನ್ನ ಕವನಗಳ ಮೂಲಕ ಓದುಗರ ಮನಸ್ಸನ್ನು ತಟ್ಟುತ್ತದೆ. ತಂದೆ - ತಾಯಿ, ಹಿರಿಯರು, ಬದುಕಿನ ವಿಘ್ನಗಳು, ವಿಪರ್ಯಾಸಗಳು, ಮನಸ್ಸಿಗೆ ಸುಪ್ತ ಭಾವನೆಗಳ ಅನಾವರಣ, ಭರವಸೆಯ ಬೆಳಕು, ಅನುರಾಗದ ಅಂಕುರ, ಭಾವಾದರ್ಶಗಳು, ಸಮಾಜದ ಬಗೆಗಿನ ಸುವಿಚಾರಗಳಂತಹ ಹಲವಾರು ಭಾವ ಬರಹಗಳನ್ನು ಆತ್ಮಾನುಬಂಧದ ಸಖಿ ಪುಸ್ತಕವು ಒಳಗೊಂಡಿದೆ.
ಕಾರ್ಯಕ್ರಮವು ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯಲಿದೆ ಹಾಗೂ ಅದರ ಅಧ್ಯಕ್ಷತೆಯನ್ನು ಸಾಹಿತಿಗಳು ಮತ್ತು ಅಂಕಣಕಾರರಾದ ಮಣ್ಣೇ ಮೋಹನ್ ರವರು ವಹಿಸಿಕೊಳ್ಳಲಿದ್ದಾರೆ. ತನುಶ್ರೀ ಪ್ರಕಾಶನದ ಹಾಗೂ ಕರುನಾಡ ಹಣತೆ ಕವಿ ಬಳಗದ ರಾಜ್ಯಾಧ್ಯಕ್ಷರಾದ ಶ್ರೀ ರಾಜು ಎಸ್ ಸೂಲೇನಹಳ್ಳಿ, ಶ್ರೀ ಕನಕ ಪ್ರೀತೀಶ್ ರವರು ಸೇರಿದಂತೆ ನಾಡಿನ ಹಲವು ಪ್ರಖ್ಯಾತ ಕವಿ ಸಾಹಿತಿ - ಸಹೃದಯರು ಉಪಸ್ಥಿತರಿರಲಿದ್ದಾರೆ.
Comments
Post a Comment