ಯಶಸ್ವಿಯಾದ ಸ್ಪಂದನ ಸಿರಿ ವೇದಿಕೆಯ ಶತಸಾಪ್ತಾಹಿಕೋತ್ಸವ ಸಮಾವೇಷ.

ಬೆಂಗಳೂರು : 18.09.2022 
ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ(ರಿ), ವಿಚಾರ ಮಂಟಪ ಸಾಹಿತ್ಯ ಬಳಗ, ಸುಮಂಗಲಿ ಸೇವಾಶ್ರಮ ಮತ್ತು ಮುಕ್ತಕ ಕವಿ ಪರಿಷತ್ತು, ಮೈಸೂರು. ಇವರ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ಬದುಕು ಬರಹ ಮಾಲಿಕೆಯ ರಾಜ್ಯ ಮಟ್ಟದ ಶತಸಪ್ತಾಹಿಕೋತ್ಸವ ಸಂಸ್ಕೃತಿ ಸಮಾವೇಶವನ್ನು ನಗರದ ಹೆಬ್ಬಾಳದ ಸುಮಂಗಲಿ‌ ಸೇವಾಶ್ರಮದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಮಾವೇಷದ ಸರ್ವಾಧ್ಯಕ್ಷರ ಸ್ಥಾನವನ್ನು ನಾಡಶ್ರೀ ಡಾ. ಬಾ. ನಂ. ಲೋಕೇಶ್ ಇವರು ವಹಿಸಿದ್ದರು. ಮುಕ್ತಕ ಕವಿ ಗೋಷ್ಠಿ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕವಿಗೋಷ್ಠಿ ಮತ್ತು 'ಬಾಲ್ಯ ವಿವಾಹ ತಡೆಗಟ್ಟುವಲ್ಲಿ ಯುವಜನತೆಯ ಪಾತ್ರ' ಎಂಬ ವಿಷಯದ ಮೇಲೆ ಸಂವಾದ ಗೋಷ್ಠಿ ಹಾಗೂ ಪುಸ್ತಕಗಳ ಲೋಕಾರ್ಪಣಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. 

ಕಾರ್ಯಕ್ರಮದ ಉದ್ಘಾಟನೆಯನ್ನು ಸುಮಂಗಲಿ ಸೇವಾಶ್ರಮದ ಶ್ರೀಮತಿ ಸುಶೀಲಮ್ಮನವರು ನೆರವೇರಿಸಿ ತಮ್ಮ ಉದ್ಘಾಟನಾ ಭಾಷಣದಲ್ಲಿ ಸಾಹಿತ್ಯ ಸಂಸ್ಕೃತಿಯ ಮಹತ್ವ ಮತ್ತು ಸಾಹಿತಿಗಳ ಜವಾಬ್ದಾರಿಯನ್ನು ವಿವರಿಸುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕವಿಗಳು ಮುಕ್ತಕಗಳನ್ನು ಹಾಗೂ ಕವಿತೆಗಳನ್ನು ವಾಚನ ಮಾಡಿದರು. 

ಸಂವಾದ ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಹಾಸನದ ಮಹಿಳಾ ಮತ್ತು ಮಕ್ಕಳ ರಕ್ಷಣಾ ಅಧಿಕಾರಿಗಳಾದ ಶ್ರೀ ಕಾಂತರಾಜು ಇವರು ಮಾತನಾಡುತ್ತಾ ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಇರುವ ಕಾಯ್ದೆ ಕಾನೂನುಗಳು, ಬಾಲ್ಯವಿವಾಹದಿಂದ ಮಕ್ಕಳ ಮಾನಸಿಕ ಹಾಗೂ ದೈಹಿಕ ಸ್ಥಿತಿಗಳ ಮೇಲೆ ಉಂಟಾಗುವ ಪರಿಣಾಮಗಳು ಹಾಗೂ ಬಾಲ್ಯ ವಿವಾಹ ತಡೆಗೆ ಕೈಗೊಳ್ಳಬಹುದಾದ ಕ್ರಮಗಳನ್ನು ಸವಿಸ್ತಾರವಾಗಿ ಚರ್ಚಿಸಿದರು.

ರಾಜ್ಯದ ವಿವಿಧ ಮೂಲೆಗಳ  ಎಲೆಮರೆಯ ಕಾಯಿಗಳಂತಹ ಸಾಧಕರಾದ ಶ್ರೀಮತಿ ಶಾಂತಾ ಜಯಾನಂದ, ಶ್ರೀ ರಾಕೇಶ್ ಎಂ, ಶ್ರೀಮತಿ ಲಕ್ಷ್ಮೀ ಮೂರ್ತಿ, ಡಾ. ಎಸ್ ಹರೀಶ್, ಶ್ರೀ ಗಂಗಾಧರ್ ಅವರ ಸಾಧನೆಗಳನ್ನು ಗುರುತಿಸಿ ವಿವಿಧ ಪ್ರಶಸ್ತಿ ಹಾಗೂ ಸನ್ಮಾನಗಳನ್ನು ನೀಡಿ ಗೌರವಿಸಲಾಯಿತು. 

ಇದೇ ಸಂದರ್ಭದಲ್ಲಿ ಮಹಿಳಾ ಟ್ರಕ್ ಡ್ರೈವರ್ ಆಗಿ ವಿ.ಆರ್.ಎಲ್. ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಾಧಕಿ ಹುಬ್ಬಳ್ಳಿಯ
 ಕು.ಶೋಭಾ, ರವರನ್ನು ಸನ್ಮಾನಿಸಿ ಗೌರವಿಸಿದ್ದು ವಿಶೇಷವಾಗಿತ್ತು.
ಶ್ರೀ ನಾಡಶ್ರೀ ಡಾ. ಬಾ. ನಂ. ಲೋಕೇಶ್ ಅವರು  ತಮ್ಮ ಸರ್ವಾಧ್ಯಕ್ಷರ ಭಾಷಣದಲ್ಲಿ ಕನ್ನಡ ನಾಡಿನ ಇತಿಹಾಸ, ಕನ್ನಡ ಭಾಷಾ ಇತಿಹಾಸ ಮತ್ತು ಪ್ರಾಮುಖ್ಯತೆ, ಕರ್ನಾಟಕದ ಇತಿಹಾಸ ಮತ್ತು ಪರಂಪರೆ, ಕನ್ನಡ ಸಾಹಿತ್ಯ ಪರಂಪರೆ, ಮತ್ತು ಕರ್ನಾಟಕದ ಸಂತ ಪರಂಪರೆಯನ್ನು ಅದರ ಮಹತ್ವ ಮತ್ತು ಕೊಡುಗೆಗಳನ್ನು ಎಳೆ ಎಳೆಯಾಗಿ ವಿವರಿಸುತ್ತಾ ಕೇಳುಗರ ಗಮನ ಸೆಳೆದರು.

ಕಾರ್ಯಕ್ರಮದ ಕೇಂದ್ರ ರೂವಾರಿಗಳಾದ ಶ್ರೀಮತಿ ಕಲಾವತಿ ಮಧೂಸೂಧನರವರನ್ನೊಳಗೊಂಡಂತೆ, ಶ್ರೀಮತಿ ಸುಶೀಲಮ್ಮನವರು, ಶ್ರೀ ರಾಕೇಶ್ ಎಂ. ರವರು, ಶ್ರೀಮತಿ ಶೈಲಜ ಎನ್. ರಾಜೇಶ್ವರಿ ಹುಲ್ಲೇನ ಹಳ್ಳಿ, ಪತ್ರಕರ್ತೆ ಶ್ರೀಮತಿ ಲೀಲಾವತಿ,
ಗಿರಿಜಾ ನಿರ್ವಾಣಿ, ಸವಿತಾ ಶಿವಮೊಗ್ಗ, ಭಾನುಮತಿರವರು, ಶ್ರೀ ಆಂಜನೇಯ ರೆಡ್ಡಿಯವರು, ಹರೀಶ್, ವಿಚಾರ ಮಂಟಪ ಬಳಗದ ಶ್ರೀ ವರುಣ್ ರಾಜ್ ಜಿ. ರವರು, ಮಾನಸ, ರಘುಪ್ರಸಾದ್, ಶ್ರೀಮತಿ ಶುಭಮಂಗಳಾ ಸತೀಶ್ ರವರು, ಶ್ರೀ ಜಯರಾಮ್ ಕೆ. ಬೆಟ್ಟದಯ್ಯನವರು, ಶ್ರೀಮತಿ ಶಿಲ್ಪ ಸುಮುಖರವರು, ಮುತ್ತುಸ್ವಾಮಿ, ಅನುರಾಧ, ಶ್ರೀಮತಿ ಶಫಿತಾ ಬೇಗಮ್, ಶ್ರೀಮತಿ ಅಶಾಕಿರಣ, ಸೇರಿದಂತೆ ಹಲವರು ಕವಿ ಸಾಹಿತಿ ಸಹೃದಯರು ಕಾರ್ಯಕ್ರಮದಲ್ಲಿ ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಶ್ರೀ ಶಿವರಾಜ್ ಎಂ. ನಾಯಕ್ ರವರ ಸುಂದರ ನಿರೂಪಣೆಯಲ್ಲಿ ಕಾರ್ಯಕ್ರಮವು ಅಚ್ಚುಕಟ್ಟಾಗಿ ನೆರವೇರಿತು.


ವರದಿ : ಹರೀಶ ಪಿ.ಎ. ಪಾಳ್ಯಕೆರೆ.

Comments

Popular posts from this blog

ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಕರ್ನಾಟಕ ಸಾಂಸ್ಕೃತಿಕ ವೈಭವ ಕಾರ್ಯಕ್ರಮ.

ತುಮಕೂರಿನಲ್ಲಿ ಕವಿಗೋಷ್ಠಿ ಹಾಗೂ ಪುಸ್ತಕ ಓದು ಸಂವಾದ ಕಾರ್ಯಕ್ರಮ.

ಕಾವ್ಯದೀವಿಗೆ ಕೃತಿ ಲೋಕಾರ್ಪಣೆ