Posts

Showing posts from October, 2023

ವಿಶ್ವ ಕನ್ನಡ ಕಿರು ಸಾಹಿತ್ಯ ರತ್ನ ಪ್ರಶಸ್ತಿಗೆ ಶ್ರೀ ಗುರುಮೂರ್ತಿ ಟಿ ಆಯ್ಕೆ.

Image
ಕರ್ನಾಟಕದ ವಿಶ್ವ ಕನ್ನಡ ಕಿರು ಸಾಹಿತ್ಯ ರತ್ನ ರಾದ , ಮತ್ತು ಕೇರಳದಲ್ಲಿ ಕರ್ನಾಟಕವನ್ನು ಹೆಸರು ಮಾಡಿದ,   ಗುರುಮೂರ್ತಿ ಟಿ ಅವರು ನ್ಯಾಷನಲ್  ಐಕಾನ್ ಅವಾರ್ಡ್ ಗೆ ಆಯ್ಕೆ ಯಾಗಿದ್ದಾರೆ. ಜೊತೆಗೆ ವಿಶ್ವ ಕನ್ನಡ ಕಿರು ಸಾಹಿತ್ಯ ರತ್ನ ಬಿರುದು ಇವೆರಡರ ಜೊತೆಗೆ ಕರ್ನಾಟಕದ ಹಸಿರು ಕವಿಗಳು ಎಂದೂ ಗುರುತಿಸಿಕೊಂಡಿದ್ದಾರೆ.  ವಿಶ್ವ ಸಾಹಿತ್ಯ ರತ್ನರಾದ ಗುರುಮೂರ್ತಿಯವರು ಅನೇಕ ಕವನಗಳು, ಲೇಖನಗಳು, ಭಕ್ತಿ ಹಾಡುಗಳು, ದೇಶಭಕ್ತಿ ಗೀತೆಗಳು, ಚಲನಚಿತ್ರ ಹಾಡುಗಳನ್ನು ರಚಿಸಿದ್ದಾರೆ. ಕೇರಳದಲ್ಲಿ ಕವನ ವಚನ ಮಾಡುವಾಗ ಕೇರಳದ ಜನರೇ ಹೆಮ್ಮೆಯ ಪಟ್ಟ, ಕರ್ನಾಟಕದ ಕಲಾ ಚೈತನ್ಯ ಪ್ರಶಸ್ತಿ ಪ್ರದಾನ ಮಾಡಿದರು.  ಇದು ನಮ್ಮ ಕರ್ನಾಟಕಕ್ಕೆ ಹೆಮ್ಮೆಯ ಸಂಗಾತಿಯಾಗಿರುತ್ತೆ. ಜೊತೆಗೆ ಇವರ ಗ್ರಾಮದ ಓಬಯ್ಯನಹಟ್ಟಿ ಗೆ ಜಿಲ್ಲೆಯಾದ ಚಿತ್ರದುರ್ಗಕ್ಕೆ  ನಾಯಕನಹಟ್ಟಿ ಗೆ ಹೆಮ್ಮೆಯ ವಿಚಾರವಾಗಿರುತ್ತೆ.

ಬಹುಮುಖ ವ್ಯಕ್ತಿತ್ವದ ಸಾಹಿತಿ ಸಂಗಮೇಶ ಎನ್ ಜವಾದಿ.

Image
ಬಸವಕಲ್ಯಾಣ: ರೈತ ಕುಟುಂಬದ ಕುಡಿ, ಸೃಜನಶೀಲ ಬರಹಗಾರ, ವೈಜ್ಞಾನಿಕ ವಿಚಾರಗಳನ್ನು ನೇರವಾಗಿ ಪ್ರತಿಪಾದಿಸುವ ಎದೆಗಾರಿಕೆಯ ಅಂಕಣಕಾರ,  ಬಹುಮುಖ ವ್ಯಕ್ತಿತ್ವದ ಸಾಹಿತಿ ಸಂಗಮೇಶ ಎನ್ ಜವಾದಿ ಎಂದು ಹಿರಿಯ ಸಾಹಿತಿ ಡಾ. ಸೋಮನಾಥ ಯಾಳವಾರ ನುಡಿದರು. ನಗರದ ಅಂತಾರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಬಸವಕಲ್ಯಾಣ ರವರು ಹಮ್ಮಿಕೊಂಡ ಶರಣ ವಿಜಯೋತ್ಸವ ನಾಡಹಬ್ಬ, ಹುತಾತ್ಮ ದಿನಾಚರಣೆ  ಕಾರ್ಯಕ್ರಮದಲ್ಲಿ ಸಂಗಮೇಶ ಎನ್ ಜವಾದಿ ಯವರ ಮೂರನೇ ಕೃತಿ 'ನಾ ಕಂಡ ಸಂಸ್ಕೃತಿ ಚಿಂತಕರು' ಎನ್ನುವ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು ಸಂಸ್ಕೃತಿ, ಶಿಸ್ತು, ಸಭ್ಯತೆ, ದಯೆ, ಸಹೋದರತ್ವ, ಸಹಬಾಳ್ವೆ, ಸಮಾನತೆ,  ಅನುಕಂಪ, ಜೀವನ ನಿಷ್ಠೆ, ಮಾನವ ಸಂಬಂಧ, ನಾಡು - ನುಡಿ, ಭಾವೈಕ್ಯತೆ - ಸೌಹಾರ್ದತೆ, ದೇಶಾಭಿಮಾನ ಮೂಡಿಸುವ ಪರಿಮಳಯುಕ್ತ ಪುಷ್ಪಗಳಿಂದ ಪೋಣಿಸಿರುವ ಕೃತಿಯೇ 'ನಾ ಕಂಡ ಸಂಸ್ಕೃತಿ ಚಿಂತಕರು' ಕೃತಿಯಾಗಿದೆ. ಈ ಅದ್ಭುತ ಕೃತಿ 12 ನೇ ಶತಮಾನದ ಬಸವಾದಿ ಶರಣರಾದಿಯಾಗಿ ಇಂದಿನ ಧೀಮಂತ ವ್ಯಕ್ತಿತ್ವ ನಿಸ್ವಾರ್ಥ ಸೇವೆ, ಅನನ್ಯ ಸಾಧನೆ ಮಾಡಿರುವ ಸಾಧಕರನ್ನು ನಾಡಿಗೆ ಪರಿಚಯಿಸಿದ್ದಾರೆ. ಇಂತಹ ಅಮೂಲ್ಯವಾದ ಮಾಲೆ ಕನ್ನಡ ಕುವರರ ಶ್ರೀಕಂಠಕ್ಕೆ ತೊಡಗೆಯಾಗಿ ನೀಡಿದ ಸಂಗಮೇಶ ಎನ್ ಜವಾದಿ ಯವರ ಸಾಹಿತ್ಯ ಸೇವೆ ಕನ್ನಡ ಸಾಹಿತ್ಯ ಲೋಕಕ್ಕೆ ಹೊಸ ಮೈಲಿಗಲ್ಲು. ಇವರ ಸಾಹಿತ್ಯ ಸೇವೆ ಅಜರಾಮರವಾದದ್ದು, ಅಷ್ಟೇ ಜನಪರ ಶ್ರೇಷ್ಠ ಕೃತಿಯಾಗಿ ಮೂಡ...

ಡಾ. ಮಮತ ಹೆಚ್.ಎ. ಇವರಿಂದ ವಿಶ್ವ ವಿಖ್ಯಾತ ಮೈಸೂರು ದಸರಾ ಕವಿಗೋಷ್ಠಿ ೨೦೨೩ ರಲ್ಲಿ ಕವನ ವಾಚನ.

Image
ಕೋಲಾರ ತಾಲ್ಲೂಕಿನ ವೇಮಗಲ್ ಗ್ರಾಮದ ಕವಿಯತ್ರಿ, ಸಾಹಿತಿ, ಅಧ್ಯಾಪಕಿ, ರಾಜ್ಯ, ರಾಷ್ಟ್ರಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಡಾ. ಮಮತ ಹೆಚ್.ಎ ರವರು ವಿಶ್ವ ವಿಖ್ಯಾತ ಮಹಿಳಾ ಕವಿಗೋಷ್ಠಿಗೆ  ಆಯ್ಕೆಯಾಗಿದ್ದು, ಅಕ್ಟೋಬರ್ 18ರಂದು ಮೈಸೂರಿನ ಮಾನಸ ಗಂಗೋತ್ರಿಯ ಶ್ರೀ ರಾಣಿ ಬಹದ್ದೂರ್  ಸಭಾಂಗಣದಲ್ಲಿ ಖ್ಯಾತ ಕವಿಯತ್ರಿಗಳಾದ  ಶ್ರೀಮತಿ ಸವಿತ ನಾಗಭೂಷಣ ರವರ ಅಧ್ಯಕ್ಷತೆಯಲ್ಲಿ ಹೆಣ್ಣಿನ ಶೋಷಣೆ ಕವನ ವಾಚಿಸಿದರು.

ಹುಟ್ಟು ಹಬ್ಬದ ಸಂಭ್ರಮ - ಶ್ರೀ ರಾಜು ಸೂಲೇನಹಳ್ಳಿ.

Image
ಕಾದಂಬರಿಕಾರ ಶ್ರೀ ರಾಜು ಕವಿ ಸೂಲೇನಹಳ್ಳಿಯವರಿಗೆ ವಿಚಾರ ಮಂಟಪ ಬಳಗದ ಸಮಸ್ತ ಸದಸ್ಯರ ಪರವಾಗಿ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಕವಿ, ಕಾದಂಬರಿಕಾರರು, ಸಾಹಿತ್ಯ ಪರಿಚಾರಕರೂ ಸಾಹಿತ್ಯ ಪೋಷಕರೂ ಆದ ಶ್ರೀ  ಎಸ್. ರಾಜು ಸೂಲೇನಹಳ್ಳಿ ಅವರು ದಿನಾಂಕ ೨೫.೧೦.೧೯೮೮ ರಂದು ಜನಿಸಿದ್ದು, ಪ್ರಸ್ತುತ ಎಸ್. ಜೆ. ಎಂ. ವಿಧ್ಯಾ ಸಂಸ್ಥೆ ಅಡಿಯಲ್ಲಿರುವ ಎಸ್. ಜೆ. ಎಂ. ಹಿರಿಯ ಪ್ರಾಥಮಿಕ ಶಾಲೆ ನಾಗೊಂಡನಹಳ್ಳಿ ಮುಖ್ಯೋಪಾಧ್ಯಾಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶ್ರೀಯುತರು ಎಂ. ಎ. ಬಿ. ಈಡಿ. ಡಿ. ಈಡಿ. ಎಂ.ಫಿಲ್ ವಿಧ್ಯಾರ್ಹತೆಯನ್ನು ಹೊಂದಿದ್ದು, ಸಾಹಿತ್ಯ ಮತ್ತು ಸಂಘಟನೆ ಕಥೆ, ಕಾದಂಬರಿ, ಲೇಖನ, ಕವನ ಬರೆಯುವುದು ಸಂಶೋಧನಾ ಲೇಖನಗಳನ್ನು ಬರೆಯುವುದು ಮುಂತಾದ ಹವ್ಯಾಸಗಳನ್ನು ಹೊಂದಿದ್ದಾರೆ.   ಒಲವೇ - ೨೦೧೨ (ಕವನ ಸಂಕಲನ), ಸ್ಪಂದನಾ - ೨೦೧೩- (ಕಾದಂಬರಿ), ಅವಳ ಪ್ರೇಮದ ಅಲೆಗಳು- ೨೦೧೪- (ಕಾದಂಬರಿ),  ಬುಧ್ಧ ಕಾಣದ ನಗೆ - ೨೦೨೧- (ಕವನ ಸಂಕಲನ), ಪ್ರೇಮಸ್ಪರ್ಶ - ಸ್ವ ರಚಿತ ಲೇಖನಗಳು - ೨೦೨೨, ಮಧುರ ಮೈತ್ರಿ -ಸಂಪಾದಿತ ಕವನ ಸಂಕಲನ - ೨೦೨೨, ನಗುವ ಹೂಗಳು (ಸಂಪಾದಿತ ಹನಿಗವನಗಳು) - ೨೦೨೨, ಗದ್ದುಗೆ ಸರ್ಧಾರ - ಕಾದಂಬರಿ (ಹಸ್ತ ಪ್ರತಿ), ಅಜ್ಜಿ ಕೊಡಿಸಿದ ಅಂಗಿ - ಕಥಾ ಸಂಕಲನ (ಹಸ್ತ ಪ್ರತಿ), ಹೂವು ಬಳ್ಳಿ - ಚುಟುಕು ಕವನ ಸಂಕಲನ ( ಹಸ್ತ ಪ್ರತಿ), ಮುಗಿಲ ಮಾಲೆ - ಕ...

ಜಿ. ಡಬ್ಲ್ಯೂ. ಆರ್ ನ ಪ್ರಶಸ್ತಿ ಪ್ರಧಾನ ಸಮಾರಂಭ.

Image
ಕರ್ನಾಟಕ ವಿಶ್ವವಿದ್ಯಾಲಯದ ಮಾನಸೋಲ್ಲಾಸ ಸಭಾಂಗಣದಲ್ಲಿ ದಿನಾಂಕ 08 ಅಕ್ಟೋಬರ್ 2023 ರಂದು ಜಿ.ಡಬ್ಲ್ಯೂ.ಆರ್ ಪ್ರಶಸ್ತಿ ಪ್ರಧಾನ ಸಮಾರಂಭವು ವಿಜೃಂಭಣೆಯಿಂದ ನಡೆಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸುಮಾರು 33 ಜನ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಯಿತು. ಗ್ಲೋಬಲ್ ವರ್ಡ್ ರೆಕಾರ್ಡ್ ಸಂಸ್ಥೆಯು ಜಿ.ಡಬ್ಲ್ಯೂ.ಆರ್ ಎ.ಪಿ.ಜೆ ಅಬ್ದುಲ್ ಕಲಾಂ ಪ್ರಶಸ್ತಿ ಹಾಗೂ ಜಿ.ಡಬ್ಲ್ಯೂ.ಆರ್ ಇಂಟರ್ನ್ಯಾಷನಲ್ ಐಕಾನ್ ಪ್ರಶಸ್ತಿಗಳನ್ನು ಪ್ರತಿ ವರ್ಷ ಅಂತರಾಷ್ಟ್ರೀಯ ಮಟ್ಟದಲ್ಲಿ ನೀಡುತ್ತಾ ಬಂದಿದ್ದು, ಈ ವರ್ಷ ಅಂದರೆ 2023ರ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಕರ್ನಾಟಕದಲ್ಲಿ ಆಯೋಜಿಸಿರುವುದು ವಿಶೇಷವಾಗಿದೆ. ಸಮಾರಂಭವನ್ನು ಕ್ಲಾಸಿಕ್ ಸಮೂಹ ಸಂಸ್ಥೆಯ ನಿರ್ದೇಶಕರಾದ ಶ್ರೀ ಲಕ್ಷ್ಮಣ್ ಎಸ್. ಉಪ್ಪಾರ್ ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು "ಜೀವನದಲ್ಲಿ ಮಾಡುವ ಕೆಲಸಗಳನ್ನು ಶ್ರದ್ಧೆ ಮತ್ತು ಪ್ರೀತಿ ಪ್ರಾಮಾಣಿಕತೆಯಿಂದ ಮಾಡಬೇಕು ಹಾಗೂ ನಿಮ್ಮ ಬದುಕನ್ನು ನೀವು ಪ್ರೀತಿಸಬೇಕು  ಮತ್ತು ವೃತ್ತಿಯನ್ನು ಗೌರವಿಸಬೇಕು ಹಾಗೆಯೇ ಸಮಾಜದಲ್ಲಿ ಇತರರನ್ನು ಗೌರವದಿಂದ ಕಾಣಬೇಕು. ಇಂತಹ ಪ್ರಶಸ್ತಿಗಳು ನಿಮ್ಮ ಬದುಕಿಗೆ ಪ್ರೇರಣೆಯಾಗಲಿ" ಎಂದು ಹೇಳಿದರು. ಸಮಾರಂಭಕ್ಕೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಚಂದ್ರಮ್ಮ ಎಂ. ಪ್ರಶಸ್ತಿಗಳನ್ನು ಪ್ರಧ...

THE GIFT OF A LIFETIME - Manjunath Hiremath Dandasolapur (chamanal).

Image
Teaching is a profession that teaches all other profession. A day is kept aside to remember all the teachers. This is the celebrated in commemoration of Dr. Radhakrishnan, who was a staunch believer of education and was the well known diplomat scholar and above all a teacher. To carry forward this tradition kalpavruksha college of education moratagi celebrated this occasion with much enthusiasm.  Shree Ashok Managuli acquainted students with the guest of the day he added that good teacher is a piller in the life of students. He added in his speech he motivated the students to become a good person and good teacher. "👉Priceless gift all parents can give to their children" (message of the Chairman -Shee Shivasharanagouda Biradar)         Parents share a Universal hope that their children will live happily ever after with minimal worries and the ability to be successful as adults. Every tries to give their child a strong moral foundation as well as the necessary li...

ಪ್ರಶಸ್ತಿ ಪುರಸ್ಕಾರಗಳು ಸೌಹಾರ್ದ, ಸಹಕಾರ ಜೀವನಕ್ಕೆ ಪ್ರೇರಣೆಯಾಗಬೇಕು - ಸಂಜಯಕುಮಾರ ಯ. ಬಿರಾದಾರ.

Image
ಕರ್ನಾಟಕ ವಿಶ್ವವಿದ್ಯಾಲಯದ ಪಿ.ಜಿ, ಎನ್.ಎಸ್.ಎಸ್ ಘಟಕ ಹಾಗೂ ನೆಹರು ಯುವ ಕೇಂದ್ರ ಸಂಘಟನೆ ಮತ್ತು ಕ್ಲಾಸಿಕ್ ಸಮೂಹ ಸಂಸ್ಥೆಗಳು ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯ ಸಹಯೋಗದಲ್ಲಿ ದಿನಾಂಕ 07 - ಅಕ್ಟೋಬರ್ 2023ರಂದು ಜಿ.ಡಬ್ಲ್ಯೂ.ಆರ್. ಪ್ರಶಸ್ತಿ ಪ್ರದಾನ ಸಮಾರಂಭವನ್ನು ವಿಶ್ವವಿದ್ಯಾಲಯದ ಸೇನೆಟ್ ಹಾಲ್ ಮತ್ತು ಮಾನಸೋಲ್ಲಾಸ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ಸೇನೆಟ್ ಸಭಾಂಗಣದಲ್ಲಿ ಅಕ್ಟೋಬರ್ 07-10-23ರ ಮಧ್ಯಾಹ್ನ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರಾಸ್ತಾವಿಕ ನುಡಿಗಳನ್ನು ಆಯೋಜಕರಾದ ಶ್ರೀ ಸಂಜಯಕುಮಾರ ಯ ಬಿರಾದಾರ ಅವರು ಮಾತನಾಡಿದ ಅವರು ಪ್ರಶಸ್ತಿ ಪ್ರದಾನ ಸಮಾರಂಭ ಅಂದರೆ ಅದು ಕೇವಲ ಒಂದು ದಿನಕ್ಕೆ ಸಿಮಿತವಾಗದೆ ಎರಡು ಮೂರು ದಿನಗಳ ಕಾಲ ಮಾಡುವ ಕಾರ್ಯಕ್ರಮವಾಗಿ ಆಚರಿಸಬೇಕು. ಹಾಗೂ ಪ್ರಶಸ್ತಿ ಪುರಸ್ಕೃತರಿಗೆ ವಿವಿಧ  ರೀತಿಯ ಕಲೆ ಮತ್ತು ಸಂಸ್ಕೃತಿ ಪರಿಚಯಿಸುವ ಮೂಲಕ ಸೌಹಾರ್ದ ಮತ್ತು ಸಹಕಾರ ಜೀವನಕ್ಕೆ ಪ್ರೇರಣೆಯಾಗಬೇಕು. ಎಂದರು. ಕಾರ್ಯಕ್ರಮವನ್ನು ಸಸಿಗೆ ನೀರನ್ನು ಹಾಕುವುದರ ಮೂಲಕ ಉದ್ಘಾಟನೆಯನ್ನು ನೆರವೇರಿಸಿದ ಡಾ. ಉಮಾದೇವಿ ಜಡ್ರಾಮಕುಂಟಿ ಅವರು ಮಾತನಾಡಿ ಮಕ್ಕಳು ಮೊಬೈಲ್ ನ ವ್ಯಸನಕ್ಕೆ ಇಡಾಗದೆ ಸಂಗೀತ, ನೃತ್ಯ, ಮುಂತಾದ ಕಲೆಗಳಲ್ಲಿ ಪರಿಣಿತಿ ಸಾಧಿಸಬೇಕು ಎಂದರು.  ನಂತರದಲ್ಲಿ ಮಾತನಾಡಿದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಮ್ಮು ಮತ್ತು ಕಾಶ್ಮೀರದ ಶ್ರೀ ತರೀಖ್ ಅಹ್ಮದ್ ಶೇರಾ ಅವರು...