ಪ್ರಶಸ್ತಿ ಪುರಸ್ಕಾರಗಳು ಸೌಹಾರ್ದ, ಸಹಕಾರ ಜೀವನಕ್ಕೆ ಪ್ರೇರಣೆಯಾಗಬೇಕು - ಸಂಜಯಕುಮಾರ ಯ. ಬಿರಾದಾರ.
ಕರ್ನಾಟಕ ವಿಶ್ವವಿದ್ಯಾಲಯದ ಪಿ.ಜಿ, ಎನ್.ಎಸ್.ಎಸ್ ಘಟಕ ಹಾಗೂ ನೆಹರು ಯುವ ಕೇಂದ್ರ ಸಂಘಟನೆ ಮತ್ತು ಕ್ಲಾಸಿಕ್ ಸಮೂಹ ಸಂಸ್ಥೆಗಳು ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯ ಸಹಯೋಗದಲ್ಲಿ ದಿನಾಂಕ 07 - ಅಕ್ಟೋಬರ್ 2023ರಂದು ಜಿ.ಡಬ್ಲ್ಯೂ.ಆರ್. ಪ್ರಶಸ್ತಿ ಪ್ರದಾನ ಸಮಾರಂಭವನ್ನು ವಿಶ್ವವಿದ್ಯಾಲಯದ ಸೇನೆಟ್ ಹಾಲ್ ಮತ್ತು ಮಾನಸೋಲ್ಲಾಸ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.
ಸೇನೆಟ್ ಸಭಾಂಗಣದಲ್ಲಿ ಅಕ್ಟೋಬರ್ 07-10-23ರ ಮಧ್ಯಾಹ್ನ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರಾಸ್ತಾವಿಕ ನುಡಿಗಳನ್ನು ಆಯೋಜಕರಾದ ಶ್ರೀ ಸಂಜಯಕುಮಾರ ಯ ಬಿರಾದಾರ ಅವರು ಮಾತನಾಡಿದ ಅವರು ಪ್ರಶಸ್ತಿ ಪ್ರದಾನ ಸಮಾರಂಭ ಅಂದರೆ ಅದು ಕೇವಲ ಒಂದು ದಿನಕ್ಕೆ ಸಿಮಿತವಾಗದೆ ಎರಡು ಮೂರು ದಿನಗಳ ಕಾಲ ಮಾಡುವ ಕಾರ್ಯಕ್ರಮವಾಗಿ ಆಚರಿಸಬೇಕು. ಹಾಗೂ ಪ್ರಶಸ್ತಿ ಪುರಸ್ಕೃತರಿಗೆ ವಿವಿಧ ರೀತಿಯ ಕಲೆ ಮತ್ತು ಸಂಸ್ಕೃತಿ ಪರಿಚಯಿಸುವ ಮೂಲಕ ಸೌಹಾರ್ದ ಮತ್ತು ಸಹಕಾರ ಜೀವನಕ್ಕೆ ಪ್ರೇರಣೆಯಾಗಬೇಕು. ಎಂದರು.
ಕಾರ್ಯಕ್ರಮವನ್ನು ಸಸಿಗೆ ನೀರನ್ನು ಹಾಕುವುದರ ಮೂಲಕ ಉದ್ಘಾಟನೆಯನ್ನು ನೆರವೇರಿಸಿದ ಡಾ. ಉಮಾದೇವಿ ಜಡ್ರಾಮಕುಂಟಿ ಅವರು ಮಾತನಾಡಿ ಮಕ್ಕಳು ಮೊಬೈಲ್ ನ ವ್ಯಸನಕ್ಕೆ ಇಡಾಗದೆ ಸಂಗೀತ, ನೃತ್ಯ, ಮುಂತಾದ ಕಲೆಗಳಲ್ಲಿ ಪರಿಣಿತಿ ಸಾಧಿಸಬೇಕು ಎಂದರು.
ನಂತರದಲ್ಲಿ ಮಾತನಾಡಿದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಮ್ಮು ಮತ್ತು ಕಾಶ್ಮೀರದ ಶ್ರೀ ತರೀಖ್ ಅಹ್ಮದ್ ಶೇರಾ ಅವರು ಕರ್ನಾಟಕಕ್ಕೆ ಮೊಟ್ಟ ಮೊದಲ ಬಾರಿಗೆ ಬಂದಿದ್ದು ಇಲ್ಲಿಯ ಜನರ ಪ್ರೀತಿ, ಕಾಳಜಿ, ಸಾಂಸ್ಕೃತಿ, ಸುಂದರ ಪರಿಸರ ಇದನ್ನೆಲ್ಲ ನೋಡಿ - ಅತ್ಯಂತ ಸಂತೋಷವಾಗಿದೆ. ಎಂದರು. ಅಲ್ಲದೆ ಕಾಶ್ಮೀರದಲ್ಲಿ ನಾವು ಹೀಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದಾಗ ಕರ್ನಾಟಕದ - ಕಲಾವಿದರಿಗೂ ಭಾಗವಹಿಸಲು ಆಮಂತ್ರಿಸುತ್ತೇವೆ ಎಂದು ನುಡಿದರು.
ನಂತರದಲ್ಲಿ ಮಾತನಾಡಿದ ಇನ್ನೊರ್ವ ಅತಿಥಿ ಶ್ರೀಮತಿ ಪ್ರಭಾವತಿ ಬೆಳವಣಿಕೆಮಠ ಅವರು ಇಂತಹ ಸಾಂಸ್ಕೃತಿಕ ಚಟುವಟಿಕೆಗಳು ಹೆಚ್ಚು ಹೆಚ್ಚಾಗಿ ನಡೆಯಬೇಕು. ಇದರಿಂದ ನಮ್ಮ ಮಕ್ಕಳ ವ್ಯಕ್ತಿತ್ವದ ಸರ್ವತೋಮುಖ ಅಭಿವೃದ್ಧಿಗೆ ಈ ಸಾಂಸ್ಕೃತಿಕ ಚಟುವಟಿಕೆಗಳು ಅತ್ಯಂತ ಸಹಾಯಕವಾಗುತ್ತವೆ. ಎಂದರು.
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಬೆಂಗಳೂರಿನ ಸಮಾಜ ಸೇವಕಿಯಾದ ಶ್ರೀಮತಿ ಕಮಲಾ ಸುದರ್ಶನ್ ಅವರು ಹಾಗೂ ಕಿತ್ತೂರಿನ ವಕೀಲರಾದ ಶ್ರೀಮತಿ ಸರಸ್ವತಿ ಪೂಜಾರ ಅವರು ಉಪಸ್ಥಿತರಿದ್ದರು.
ನಂತರ ಧಾರವಾಡದ ಪ್ರಸಿದ್ಧ ನೃತ್ಯ ತರಬೇತಿ ಸಂಸ್ಥೆಯಾದ ಯುವ ಡ್ಯಾನ್ಸ್ ಅಕಾಡೆಮಿಯ ನಿರ್ದೇಶಕರಾದ ಶ್ರೀ ರಮೇಶ್ ಪಾಟಿಲ್ ಅವರ ನೇತೃತ್ವದಲ್ಲಿ ವಿವಿಧ ಶೈಲಿಯ ನೃತ್ಯಗಳನ್ನು ಮಕ್ಕಳು ಪ್ರದರ್ಶಿಸಿದರು.
ಈ ಕಾರ್ಯಕ್ರಮವನ್ನು ವಿನೋದ್ ಅವರು ನಿರೂಪಿಸಿದರು, ಪೂಜಾ ಅವರು ವಂದಿಸಿದರು. ಈ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಆಹ್ವಾನಿತರು ಅತ್ಯಂತ ಉತ್ಸಾಹದಿಂದ ವಿಕ್ಷಿಸಿದರು ಮತ್ತು ಆನಂದಿಸಿದರು.
Comments
Post a Comment