ಹುಟ್ಟು ಹಬ್ಬದ ಸಂಭ್ರಮ - ಶ್ರೀ ರಾಜು ಸೂಲೇನಹಳ್ಳಿ.
ಕಾದಂಬರಿಕಾರ ಶ್ರೀ ರಾಜು ಕವಿ ಸೂಲೇನಹಳ್ಳಿಯವರಿಗೆ ವಿಚಾರ ಮಂಟಪ ಬಳಗದ ಸಮಸ್ತ ಸದಸ್ಯರ ಪರವಾಗಿ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
ಕವಿ, ಕಾದಂಬರಿಕಾರರು, ಸಾಹಿತ್ಯ ಪರಿಚಾರಕರೂ ಸಾಹಿತ್ಯ ಪೋಷಕರೂ ಆದ ಶ್ರೀ ಎಸ್. ರಾಜು ಸೂಲೇನಹಳ್ಳಿ ಅವರು ದಿನಾಂಕ ೨೫.೧೦.೧೯೮೮ ರಂದು ಜನಿಸಿದ್ದು, ಪ್ರಸ್ತುತ ಎಸ್. ಜೆ. ಎಂ. ವಿಧ್ಯಾ ಸಂಸ್ಥೆ ಅಡಿಯಲ್ಲಿರುವ ಎಸ್. ಜೆ. ಎಂ. ಹಿರಿಯ ಪ್ರಾಥಮಿಕ ಶಾಲೆ ನಾಗೊಂಡನಹಳ್ಳಿ ಮುಖ್ಯೋಪಾಧ್ಯಾಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಶ್ರೀಯುತರು ಎಂ. ಎ. ಬಿ. ಈಡಿ. ಡಿ. ಈಡಿ. ಎಂ.ಫಿಲ್ ವಿಧ್ಯಾರ್ಹತೆಯನ್ನು ಹೊಂದಿದ್ದು, ಸಾಹಿತ್ಯ ಮತ್ತು ಸಂಘಟನೆ
ಕಥೆ, ಕಾದಂಬರಿ, ಲೇಖನ, ಕವನ ಬರೆಯುವುದು
ಸಂಶೋಧನಾ ಲೇಖನಗಳನ್ನು ಬರೆಯುವುದು ಮುಂತಾದ ಹವ್ಯಾಸಗಳನ್ನು ಹೊಂದಿದ್ದಾರೆ.
ಒಲವೇ - ೨೦೧೨ (ಕವನ ಸಂಕಲನ), ಸ್ಪಂದನಾ - ೨೦೧೩- (ಕಾದಂಬರಿ), ಅವಳ ಪ್ರೇಮದ ಅಲೆಗಳು- ೨೦೧೪- (ಕಾದಂಬರಿ),
ಬುಧ್ಧ ಕಾಣದ ನಗೆ - ೨೦೨೧- (ಕವನ ಸಂಕಲನ), ಪ್ರೇಮಸ್ಪರ್ಶ - ಸ್ವ ರಚಿತ ಲೇಖನಗಳು - ೨೦೨೨, ಮಧುರ ಮೈತ್ರಿ -ಸಂಪಾದಿತ ಕವನ ಸಂಕಲನ - ೨೦೨೨, ನಗುವ ಹೂಗಳು (ಸಂಪಾದಿತ ಹನಿಗವನಗಳು) - ೨೦೨೨, ಗದ್ದುಗೆ ಸರ್ಧಾರ - ಕಾದಂಬರಿ (ಹಸ್ತ ಪ್ರತಿ), ಅಜ್ಜಿ ಕೊಡಿಸಿದ ಅಂಗಿ - ಕಥಾ ಸಂಕಲನ (ಹಸ್ತ ಪ್ರತಿ), ಹೂವು ಬಳ್ಳಿ - ಚುಟುಕು ಕವನ ಸಂಕಲನ ( ಹಸ್ತ ಪ್ರತಿ), ಮುಗಿಲ ಮಾಲೆ - ಕಾದಂಬರಿ ( ಹಸ್ತ ಪ್ರತಿ), ಅಮ್ಮನ ಒಡಲು - ಕಾದಂಬರಿ (ಹಸ್ತ ಪ್ರತಿ), ನನ್ನ ಪ್ರೇಮ ಮಹಲು - ಕಾದಂಬರಿ ( ಹಸ್ತ ಪ್ರತಿ) ಮುಂತಾದ ಕೃತಿಗಳನ್ನು ಇವರು ರಚಿಸಿದ್ದಾರೆ.
ಕರುನಾಡ ಹಣತೆ ಕವಿ ಬಳಗ ರಾಜ್ಯಾಧ್ಯಕ್ಷರಾಗಿ, ತನುಶ್ರೀ ಪ್ರಕಾಶನ ಸಂಸ್ಥೆ ಸೂಲೇನಹಳ್ಳಿ ಸಂಸ್ಥಾಪಕರಾಗಿ,
ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆ (ರಿ) ಚಿತ್ರದುರ್ಗ ರಾಜ್ಯಾಧ್ಯಕ್ಷರು ಆಗಿ ಶ್ರೀಯುತರು ಕೆಲಸ ಮಾಡುತ್ತಿದ್ದಾರೆ.
ಇವರಿಗೆ, ಸಿರಿಗನ್ನಡ ಸಾಹಿತ್ಯ ರತ್ನ ರಾಜ್ಯ ಪ್ರಶಸ್ತಿ - ೨೦೧೮, ಕರುನಾಡ ಸಿರಿ ರತ್ನ ರಾಜ್ಯ ಪ್ರಶಸ್ತಿ - ೨೦೧೯, ಕರ್ನಾಟಕ ಶಿಕ್ಷಣ ಸೇವಾ ರತ್ನ - ೨೦೧೯, ಕನ್ನಡ ರಾಜ್ಯೋತ್ಸವ ಪ್ರಶಸ್ತಿ - ೨೦೧೯,
ಕನ್ನಡ ಸಾಹಿತ್ಯ ರತ್ನ ರಾಜ್ಯ ಪ್ರಶಸ್ತಿ - ೨೦೧೯, ಸಾಹಿತ್ಯ ವಿಭೂಷಣ ಪ್ರಶಸ್ತಿ - ೨೦೧೯, ಮಾಸ್ತಿ ರಾಷ್ಟ್ರ ಪ್ರಶಸ್ತಿ - ೨೦೨೦, ಮೈತ್ರಿ ಸಾಹಿತ್ಯ ರತ್ನ ಪ್ರಶಸ್ತಿ - ೨೦೨೧, ಕನ್ನಡ ಸಾಹಿತ್ಯ ವಿಭೂಷಣ ರಾಜ್ಯ ಪ್ರಶಸ್ತಿ - ೨೦೨೧, ಕನ್ನಡ ರತ್ನ ಪ್ರಶಸ್ತಿ - ೨೦೨೧, ಕನ್ನಡ ಸೇವಾ ರತ್ನ ಪ್ರಶಸ್ತಿ - ೨೦೨೧, ಸಾಹಿತ್ಯ ಸಿರಿ ಪ್ರಶಸ್ತಿ - ೨೦೨೧, ಕರುನಾಡ ಹರಿಕಾರಶ್ರೀ ರಾಜ್ಯ ಪ್ರಶಸ್ತಿ - ೨೦೨೧, ಕರುನಾಡು ಸೇವಾ ಟ್ರಸ್ಟ್ ಮಂಡ್ಯ - ೨೦೨೧, ಕಲಾ ಚರಕ ರಾಜ್ಯ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿ ಸನ್ಮಾಗಳು ಸಂದಿವೆ.
ಅಲ್ಲದೇ, ದೆಹಲಿಯ ಗಣರಾಜ್ಯೋತ್ಸವ ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದ ಶ್ರೀಯುತರು ಮೈಸೂರು ದಸರಾ ಕವಿಗೋಷ್ಠಿಯಲ್ಲಿ ಭಾಗವಹಿಸಿ ಕವನ ವಾಚನ ಮಾಡಿದ್ದಾರೆ.
ಇವರ ತನುಶ್ರೀ ಪ್ರಕಾಶನ ಸಂಸ್ಥೆಯವತಿಯಿಂದ ಸುಮಾರು ೩೦ ಕೃತಿಗಳನ್ನು ಪ್ರಕಟಿಸಿದ್ದು, ಸಾಕಷ್ಟು ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬರುತ್ತಿದ್ದಾರೆ. ಅಲ್ಲದೇ, ಸಾಕಷ್ಟು ರಾಜ್ಯ, ರಾಷ್ಟ್ರ ಮಟ್ಟದ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿ ಯಶಸ್ವಿಯಾಗಿರುವ ಕೀರ್ತಿ ಶ್ರೀಯುತರಿಗಿದೆ.
ಶ್ರೀ ರಾಜು ಕವಿ ಸೂಲೇನಹಳ್ಳಿ ಇವರು ಸಾಹಿತಿಗಳಾಗಿ, ಸಂಘಟಕರಾಗಿ, ಸಾಹಿತ್ಯ ಪರಿಚಾರಕರು, ಪೂಷಕರು ಆಗಿ ನಾಡಿನೆಲ್ಲೆಡೆ ಮನೆಮಾತಾಗಿದ್ದು ಇವರ ಹುಟ್ಟು ಹಬ್ಬದ ಈ ಶುಭ ಸಂದರ್ಭದಲ್ಲಿ
ಮಾನ್ಯರಿಗೆ ಕನ್ನಡ ನಾಡಿನ ಸಮಸ್ತ ಜನತೆಯ ಪರವಾಗಿ ಪ್ರೀತಿಯ ಶುಭಾಶಯಗಳನ್ನು ಸಲ್ಲಿಸುತ್ತೇವೆ.
Comments
Post a Comment