ಜಿ. ಡಬ್ಲ್ಯೂ. ಆರ್ ನ ಪ್ರಶಸ್ತಿ ಪ್ರಧಾನ ಸಮಾರಂಭ.


ಕರ್ನಾಟಕ ವಿಶ್ವವಿದ್ಯಾಲಯದ ಮಾನಸೋಲ್ಲಾಸ ಸಭಾಂಗಣದಲ್ಲಿ ದಿನಾಂಕ 08 ಅಕ್ಟೋಬರ್ 2023 ರಂದು ಜಿ.ಡಬ್ಲ್ಯೂ.ಆರ್ ಪ್ರಶಸ್ತಿ ಪ್ರಧಾನ ಸಮಾರಂಭವು ವಿಜೃಂಭಣೆಯಿಂದ ನಡೆಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸುಮಾರು 33 ಜನ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಯಿತು. ಗ್ಲೋಬಲ್ ವರ್ಡ್ ರೆಕಾರ್ಡ್ ಸಂಸ್ಥೆಯು ಜಿ.ಡಬ್ಲ್ಯೂ.ಆರ್ ಎ.ಪಿ.ಜೆ ಅಬ್ದುಲ್ ಕಲಾಂ ಪ್ರಶಸ್ತಿ ಹಾಗೂ ಜಿ.ಡಬ್ಲ್ಯೂ.ಆರ್ ಇಂಟರ್ನ್ಯಾಷನಲ್ ಐಕಾನ್ ಪ್ರಶಸ್ತಿಗಳನ್ನು ಪ್ರತಿ ವರ್ಷ ಅಂತರಾಷ್ಟ್ರೀಯ ಮಟ್ಟದಲ್ಲಿ ನೀಡುತ್ತಾ ಬಂದಿದ್ದು, ಈ ವರ್ಷ ಅಂದರೆ 2023ರ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಕರ್ನಾಟಕದಲ್ಲಿ ಆಯೋಜಿಸಿರುವುದು ವಿಶೇಷವಾಗಿದೆ. ಸಮಾರಂಭವನ್ನು ಕ್ಲಾಸಿಕ್ ಸಮೂಹ ಸಂಸ್ಥೆಯ ನಿರ್ದೇಶಕರಾದ ಶ್ರೀ ಲಕ್ಷ್ಮಣ್ ಎಸ್. ಉಪ್ಪಾರ್ ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು "ಜೀವನದಲ್ಲಿ ಮಾಡುವ ಕೆಲಸಗಳನ್ನು ಶ್ರದ್ಧೆ ಮತ್ತು ಪ್ರೀತಿ ಪ್ರಾಮಾಣಿಕತೆಯಿಂದ ಮಾಡಬೇಕು ಹಾಗೂ ನಿಮ್ಮ ಬದುಕನ್ನು ನೀವು ಪ್ರೀತಿಸಬೇಕು  ಮತ್ತು ವೃತ್ತಿಯನ್ನು ಗೌರವಿಸಬೇಕು ಹಾಗೆಯೇ ಸಮಾಜದಲ್ಲಿ ಇತರರನ್ನು ಗೌರವದಿಂದ ಕಾಣಬೇಕು. ಇಂತಹ ಪ್ರಶಸ್ತಿಗಳು ನಿಮ್ಮ ಬದುಕಿಗೆ ಪ್ರೇರಣೆಯಾಗಲಿ" ಎಂದು ಹೇಳಿದರು.

ಸಮಾರಂಭಕ್ಕೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಚಂದ್ರಮ್ಮ ಎಂ. ಪ್ರಶಸ್ತಿಗಳನ್ನು ಪ್ರಧಾನ ಮಾಡಿದರು. ನಂತರ ಮಾತನಾಡಿದ ಅವರು "ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಪ್ರಶಸ್ತಿಗಳನ್ನು ನೀಡಿರುವುದು ಮಹತ್ವದ್ದಾಗಿದೆ. ಮತ್ತು ಈ ಪ್ರಶಸ್ತಿಗಳು ನಿಮ್ಮ ಮುಂದಿನ ಸಮಾಜಮುಖಿ ಸೇವೆಗೆ ಪ್ರೇರಣೆಯಾಗಲಿ" ಎಂದು ಪ್ರಶಸ್ತಿ ಪುರಸ್ಕೃತರನ್ನು ಉದ್ದೇಶಿಸಿ ಮಾತನಾಡಿದರು.

ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿ.ಡಬ್ಲ್ಯೂ.ಆರ್ ನಿರ್ದೇಶಕರಾದ ಶ್ರೀಮತಿ ಪರಿನಿತಾ ಲಿಂಗಮ್ ಅವರು ಜಿ. ಡಬ್ಲ್ಯೂ.ಆರ್  ಪ್ರಶಸ್ತಿ ಪುರಸ್ಕೃತರಿಗೆ ಶುಭಕೋರಿ ಕಾರ್ಯಕ್ರಮದ ಕುರಿತು ಸಂಕ್ಷಿಪ್ತವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿ.ಡಬ್ಲ್ಯೂ.ಆರ್ ನ ಮ್ಯಾನೇಜಿಂಗ್ ಸಮಿತಿಯ ಸದಸ್ಯರಾದ ಶ್ರೀ ರಾಜೇಶಕುಮಾರ್ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತನಾಡಿ ಜಿ.ಡಬ್ಲ್ಯೂ.ಆರ್ ಅನ್ನು ಸವಿಸ್ತಾರ ಪರಿಚಯಸಿ ಪ್ರಶಸ್ತಿಯ ಮಹತ್ವವನ್ನು ಸಭೆಗೆ ತಿಳಿಸಿದರು.

ಕಾರ್ತಿಕ್ ಕಣವಿಯವರು ಸಮಾರಂಭಕ್ಕೆ ಆಗಮಿಸಿದ ಪ್ರಶಸ್ತಿ ಪುರಸ್ಕೃತರನ್ನು ಹಾಗೂ ಆಹ್ವಾನಿತರನ್ನು ಶಿಷ್ಟಾಚಾರದಂತೆ ಸ್ವಾಗತಿಸಿದರು.

ಸಮಾರಂಭದ ಆಯೋಜಕರಾದ ಶ್ರೀ ಸಂಜಯಕುಮಾರ ಯ. ಬಿರಾದಾರ ಅವರು ಸಮಾರಂಭಕ್ಕೆ ಆಗಮಿಸಿದ ಸರ್ವರಿಗೂ ವಂದನೆಯನ್ನು ಅರ್ಪಿಸಿದರು. ಸಮಾರಂಭದಲ್ಲಿ ಸಂಜಯಕುಮಾರ ಬಿರಾದಾರ ಅವರಿಗೆ ಜಿ.ಡಬ್ಲ್ಯೂ.ಆರ್ ಸಂಸ್ಥೆಯ ವತಿಯಿಂದ ಸನ್ಮಾನಿಸಿತು. ಇದೇ ವೇಳೆಗೆ ಅವರ ತಾಯಿಯವರಾದ ಶ್ರೀಮತಿ ಸುವರ್ಣಾ ಯಂಕನಗೌಡ ಬಿರಾದಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಮಾರಂಭದಲ್ಲಿ ಧಾರವಾಡದ ಎ.ಪಿ.ಎಂ.ಸಿ ಯ ಮಾಜಿ ಅಧ್ಯಕ್ಷರಾದ ಶ್ರೀ ಕೃಷ್ಣಾ ಕೊಳ್ಳನ್ನಟ್ಟಿಯವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಅತಿಥಿಗಳಾಗಿ ಪ್ರೊ. ವ್ಹಿ.ಬಿ.ಸಾವಿರಮಠ, ಪ್ರೊ. ಸಂಗಪ್ಪ ಚಲವಾದಿ, ಡಾ. ಉಮಾದೇವಿ ಜಡ್ರಾಮಕುಂಟಿ ಹಾಗೂ ಎನ್. ಟಿ. ಎಸ್. ಎಸ್ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಶ್ರೀನಿವಾಸ ನಾನಾಜಕರ್ ಅವರು ಸಮಾರಂಭದಲ್ಲಿ  ಉಪಸ್ಥಿತರಿದ್ದರು. ಹಾಗೂ ಪ್ರಶಸ್ತಿ ಪುರಸ್ಕೃತರ ತಂದೆ-ತಾಯಿಗಳು, ಹಿತೈಷಿಗಳು ಸ್ನೇಹಿತರು ಮತ್ತು ಎನ್. ಟಿ. ಎಸ್. ಎಸ್ ಕಾಲೇಜಿನ ವಿದ್ಯಾರ್ಥಿಗಳಿಂದ  ಸಂಭ್ರಮದಿಂದ ಕೂಡಿತ್ತು. ಕಾರ್ಯಕ್ರಮದಲ್ಲಿ ವಿವಿಧ ಐದು ರಾಜ್ಯಗಳಿಂದ ಸುಮಾರು ಹದಿನೈದು ಜಿಲ್ಲೆಗಳಿಂದ ಅತಿಥಿಗಳು ಆಗಮಿಸಿದ್ದರು. ವಿಜಯಲಕ್ಷ್ಮೀ ಮೇಸ್ತ್ರಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

Comments

Popular posts from this blog

ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಕರ್ನಾಟಕ ಸಾಂಸ್ಕೃತಿಕ ವೈಭವ ಕಾರ್ಯಕ್ರಮ.

ತುಮಕೂರಿನಲ್ಲಿ ಕವಿಗೋಷ್ಠಿ ಹಾಗೂ ಪುಸ್ತಕ ಓದು ಸಂವಾದ ಕಾರ್ಯಕ್ರಮ.

ಕಾವ್ಯದೀವಿಗೆ ಕೃತಿ ಲೋಕಾರ್ಪಣೆ