ಯಶಸ್ವಿಯಾಗಿ ನಡೆದ ತನುಶ್ರೀ ಪ್ರಕಾಶನ ಸಂಸ್ಥೆ ಸೂಲೇನಹಳ್ಳಿ ವತಿಯಿಂದ ಆಯೋಜಿಸಿದ್ದ ಅಂತರ್ಜಾಲ ಆಧಾರಿತ ೧೭ ನೇ ಗೂಗಲ್ ಮೀಟ್ ಸಂವಾದ ಕಾರ್ಯಕ್ರಮ.
ದಿ : ೨೦/೦೨/೨೦೨೨ ರಂದು ತನುಶ್ರೀ ಪ್ರಕಾಶನ ಸೂಲೇನಹಳ್ಳಿ ವತಿಯಿಂದ ಆಯೋಜಿಸಿದ್ದ ಅಂತರ್ಜಾಲ ಆಧಾರಿತ ಗೂಗಲ್ ಮೀಟ್ ಕಾರ್ಯಕ್ರಮ ಮತ್ತು ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು ಈ ಕಾರ್ಯಕ್ರಮ 'ಕನ್ನಡ ಸಾಹಿತ್ಯ ಉಳಿಸುವ ಮಾರ್ಗಗಳು' ಕುರಿತು ಏರ್ಪಡಿಸಿಲಾಗಿತ್ತು ಈ ವಿಷಯ ಬಗ್ಗೆ ಉಪನ್ಯಾಸ ಶ್ರೀಯುತ ನಾಗರಾಜ ವಲ್ಕಂದಿನ್ನಿ ಪ್ರಾಂಶುಪಾಲರು ಮಾತನಾಡಿ 'ಕನ್ನಡ ಸಾಹಿತ್ಯ ಎನ್ನುವುದು ಹಲವು ಶತಮಾನಗಳ ಹಿಂದೆ ಬೆಳೆದು ಬಂದಿದೆ ತನ್ನದೇ ಆದ ಇತಿಹಾಸವಿದೆ ಅಷ್ಟೇ ಅಲ್ಲದೇ ಸಾವಿರಾರು ಕವಿಗಳು ಅನೇಕ ಕೃತಿಗಳನ್ನು ರಚಿಸಿದ್ದಾರೆ ಹಾಗೂ ಕೊಡುಗೆ ಕೂಡಾ ನೀಡಿದ್ದಾರೆ ಪ್ರಸ್ತುತ ದಿನಗಳಲ್ಲಿ ನಾವೆಲ್ಲರೂ ಆದರ ಇತಿಹಾಸ ಕುರಿತು ಓದಬೇಕಿದೆ ಸಂಶೋಧನಾ ಅಧ್ಯಯನ ಮಾಡಿ ಹೊರ ತರಲು ಪ್ರಯತ್ನ ಮಾಡಬೇಕು ವಿನಹ ನಾವೇ ತಿರಸ್ಕಾರದಿಂದ ಕಾಣುವ ಮನೋಭಾವ ಇರಬಾರದು ಕನ್ನಡ ನಾಡು ನುಡಿ ಸಂಸ್ಕೃತಿ ಮತ್ತು ಆದನ್ನ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಆಶಯ ನುಡಿ ಬಸವರಾಜ ಪೂಜಾರ್ ಕೋಡಿಹಳ್ಳಿ ಸಂಶೋಧಕರು ಮಾತನಾಡಿ ತನುಶ್ರೀ ಪ್ರಕಾಶನ ಸೂಲೇನಹಳ್ಳಿ ಕಳೆದ ವರ್ಷದಿಂದ ಸುಮಾರು ೧೭ ಗೂಗಲ್ ಮೀಟ್ ಕಾರ್ಯಕ್ರಮ ಆಯೋಜನೆ ಮಾಡಿ ಪ್ರತಿಯೊಬ್ಬ ಕವಿಗೆ ಉಪಯುಕ್ತ ಮಾಹಿತಿ ಹಂಚುವ ಮೂಲಕ ಎಸ್. ರಾಜುಕವಿ ಸೂಲೇನಹಳ್ಳಿ ಪ್ರಕಾಶಕರು ಉತ್ತಮ ನಾಡು ನುಡಿ ಬೆಳೆಸುವ ಸೇವೆ ಮಾಡುತ್ತಿದ್ದಾರೆ ಇದು ಹೆಮ್ಮೆಯ ಸಂಗತಿ ಎಂದು ಸಂಸ್ಥೆಯು ನ...