ಯಶಸ್ವಿಯಾದ ದೇಶಭಕ್ತಿ ಗೀತ ಗಾಯನ ಸ್ಪರ್ಧೆ - ಹಾಸನ
ದಿ-18-02-2022ರ ಶುಕ್ರವಾರ ಹಾಸನ, ವಿದ್ಯಾನಗರದ ಕ್ರೈಸ್ಟ್ ಶಾಲೆಯಲ್ಲಿ ವಿವಿಧ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ (ರಿ)ಹಾಸನ,ಇನ್ಷ್ಯುರೆನ್ಸ್ ಪುಟ್ಟೇಗೌಡರ ಟ್ರಸ್ಟ್ ಹಾಗೂ ಕ್ರೈಸ್ಟ್ ಶಾಲೆ, ವಿದ್ಯಾನಗರ, ಹಾಸನ ಇವರ ಸಹಯೋಗದೊಂದಿಗೆ ಏರ್ಪಡಿಸಲಾಗಿದ್ದ ದೇಶಭಕ್ತಿ ಗೀತಗಾಯನ ಸ್ಪರ್ಧೆ ಕಾರ್ಯಕ್ರಮ ನಡೆಸಲಾಯಿತು.
ಕ್ರೈಸ್ಟ್ ಶಾಲೆಯ ಕು.ಮಹಾಲಕ್ಷ್ಮಿ,ಶುಭಶ್ರೀ,ಪೂರ್ಣಿಕಾ,ರವರ ಸುಮಧುರವಾದ ಪ್ರಾರ್ಥನೆಯೊಂದಿಗೆ ಶುಭಾರಂಭಗೊಂಡಿತು.
ಸಂಸ್ಥಾಪಕ ಅಧ್ಯಕ್ಷರಾದ ಕಲಾವತಿ ಮಧುಸೂನನರವರು ಕೊರೋನದಿಂದ ಹೈರಾಣಾಗಿರುವ ವಿದ್ಯಾರ್ಥಿಗಳಿಗೆ ನಾಡುನುಡಿನೆಲಜಲ ದೇಶಭಾಷೆ, ಸಂಸ್ಕೃತಿಯ ಸ್ಮರಣೆಯಲ್ಲಿ ಚೈತನ್ಯಮೂಡಿಸಿ ಪ್ರೋತ್ಸಾಹಿಸಿ ಉತ್ಸಾಹ ತುಂಬುವ ಉದ್ದೇಶ ಈ ಕಾರ್ಯಕ್ರಮವಾಗಿದೆ. ಈ ಆಯೋಜನೆಗಾಗಿ ಸಹಕರಿಸಿದ ಎಲ್ಲರನ್ನು ಅಭಿನಂದಿಸಿರು.
ಉದ್ಘಾಟನಾ ನುಡಿಯಾಡಿದ ಕ್ಯಾಪ್ಟನ್ ಜಯರಾಮ್ ರವರು ಯೋಧರನ್ನು ನಿತ್ಯ ಸ್ಮರಿಸಿ ಮುಂಜಾನೆ ಹಾರೈಸುವ ಮೂಲಕ ನಮ್ಮ ಕೃತಜ್ಞತೆಯನ್ನು ಸಲ್ಲಿಸುವ ಪರಿಪಾಠ ಎಲ್ಲರದಾಗಬೇಕೆಂದರು.ಹಲವಾರು ಶಾಲಾ ವಿದ್ಯಾರ್ಥಿಗಳು
ಅತ್ಯುತ್ತಮವಾಗಿ ದೇಶಭಕ್ತಿ ಗೀತಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿದವರಲ್ಲಿ,ಶ್ರೀ ಆದಿಚುಂಚನಗಿರಿ ಕನ್ನಡ ಮಾಧ್ಯಮ ಶಾಲೆ-ಪ್ರಥಮ ಸ್ಥಾನ, ವಿದ್ಯಾ ಸೌಧ ಶಾಲೆ-ದ್ವಿತೀಯ, ವಿಜಯ ಶಾಲೆ- ತೃತೀಯ, ಕ್ರೈಸ್ಟ್ ಶಾಲೆ,ಆದಿಚುಂಚನಗಿರಿ ಆಂಗ್ಲ ಮಾಧ್ಯಮ, ಸರ್ಕಾರಿ ಪ್ರೌಢ ಶಾಲೆ, ದಾಸರ ಕೊಪ್ಪಲು ಕ್ರಮವಾಗಿ ಸಮಾಧಾನಕರ ಪಡೆದು ವಿಜೇತರಾಗಿರುತ್ತಾರೆ.
ಶ್ರೀಮತಿ ವಾಣಿನಾಗೇಂದ್ರ, ಶ್ರೀಮತಿ ಸುನಂದ ಕೃಷ್ಣ ತೀರ್ಪುಗಾರರಾಗಿ ಸಹಕರಿಸಿದರು.
ಅಧ್ಯಕ್ಷತೆ ವಹಿಸಿದ ಕ್ರೈಸ್ಟ್ ಶಾಲೆಯ ಪ್ರಾಂಶುಪಾಲರು ಎಲ್ಲರಿಗೂ ಶುಭಕೋರಿ ಇಂತಹಾ ಕಾರ್ಯಕ್ರಮಗಳು ನಿರಂತರವಾಗಿರುವುದು ಮಕ್ಕಳ ಭವಿಷ್ಯಕ್ಕೆ ಪೂರಕವಾಗಿರುತ್ತದೆ.ಎಂದರು.
ಸ್ಪಂದನ ಸಿರಿ ವೇದಿಕೆಯ ಪುರುಷರ ವಿಭಾಗದ ನೂತನ ಜಿಲ್ಲಾಧ್ಯಕ್ಷರು,ನಿ.ಶಿಕ್ಷಕರು ಆದ ಶ್ರೀ ಜಯರಾಮ್ ಬೆಟ್ಟದಯ್ಯ ರವರು ಬಾಲ್ಯದಿಂದಲೇ ಉತ್ಸಾಹದಿಂದ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡಲ್ಲಿ ಕಲಾವತಿ ಮೇಡಂ ರವರಂತೆ ಸೇವಾ ಸಾರ್ಥಕತೆ ಹಾಗೂ ಉತ್ತಮ ಭವಿಷ್ಯಕ್ಕೆ ಬುನಾದಿಯಾಗುತ್ತದೆ.ಎಂದರು.ಆಸಕ್ತಿಯಿಂದ
ಅಚ್ಚುಕಟ್ಟಾಗಿ ಆಯೋಜನೆಗೆ ಸಹಕರಿಸಿದ ಶಿಕ್ಷಕಿ ಶ್ರೀಮತಿ ನೀಲಾವತಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶ್ರೀಮತಿ ಸ್ಮಿತಾ ಹೇಮೇಶ್ ತಾಂತ್ರಿಕ ಸಹಕಾರ ನೀಡಿದರು. ಹಾಗು ಆಲೂರಿನ ಅಧ್ಯಕ್ಷರಾದ ಶ್ರೀಮತಿ ಲಲಿತಮ್ಮ ಹಾಗೂ ಶೀಕ್ಷಕಿ ನೀಲಾವತಿಯವರು ನಿರ್ವಹಿಸಿದರು.
ಶಾಲಾ ಸಿಬ್ಬಂದಿ ವರ್ಗ ನಿರ್ವಹಣೆಗೆ ಸಹಕರಿಸಿದರು.
ಅತಿಥಿಗಳು ಬಹುಮಾನ ವಿತರಿಸಿ ಶುಭಕೋರಿದರು.
ಶಿಕ್ಷಕಿಯರಾದ ಭವ್ಯ, ನಾಜಿಮ,ಪೂರ್ಣಿಮ,ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಲೇಖನ್,ಸಮ್ಯಕ್,ನಿರೂಪಣೆ,ಅರ್ಜುನ್,
ಸುಭೋಗ್ ರಾಜ್ ಸ್ವಾಗತ,ಪ್ರಥಮರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಸುಸಂಪನ್ನವಾಯಿತು.
ಆತ್ಮೀಯ ಧನ್ಯವಾದಗಳು ಸರ್🙏👍
ReplyDelete