ಯಶಸ್ವಿಯಾದ ಸರ್ಜೀ ಆಡಿಯೋ ಸಂಸ್ಥೆಯ ಎರಡನೇ ಸಂಚಿಕೆ ಸಂಗೀತ ಸ್ಪರ್ಧೆಯ ಕಾರ್ಯಕ್ರಮ.

ಈ ದಿನ ಮೊಳಕಾಲ್ಮೂರು ಟೌನ್ ನಲ್ಲಿ ದ್ವಿತೀಯ ಸಂಗೀತ ಸ್ಪರ್ಧೆ ಕಾರ್ಯಕ್ರಮ ಸರ್ಜೀ ಆಡಿಯೋ ಸಂಸ್ಥೆಯ ಸಂಸ್ಥಾಪಕರು ಆದ ಸಂತೋಷ್ ಉಡೇವು ಅವರ ಸಾರಥ್ಯದಲ್ಲಿ ಆಯೋಜನೆ ಮಾಡಲಾಗಿತ್ತು  ಈ ಕಾರ್ಯಕ್ರಮದಲ್ಲಿ ಉಧ್ಘಾಟನೆ ಶ್ರೀಯುತ ಉಮೇಶ್ ಸಬ್ ಇನ್ಸ್‌ಪೆಕ್ಟರ್ ಮೊಳಕಾಲ್ಮೂರು ಟೌನ್ ನೇರವೇರಿಸಿದರು ಹಾಗೂ ಮುಖ್ಯ ಅತಿಥಿಗಳಾಗಿ ಡಾ. ಅಭಿನವ್ ವೈದ್ಯಾಧಿಕಾರಿಗಳು, ಶ್ರೀಯುತ ಶ್ರೀರಾಮುಲು ನಿಕಟ ಪೂರ್ವ ಪ್ರಧಾನ ಕಾರ್ಯದರ್ಶಿ ಕನ್ನಡ ಸಾಹಿತ್ಯ ಪರಿಷತ್ ಮೊಳಕಾಲ್ಮೂರು, ಭಾಗವಹಿಸಿದ್ದರು ಕಾರ್ಯಕ್ರಮದ ದಿವ್ಯ ಸಾನಿಧ್ಯ ಶ್ರೀ ಬಸವಲಿಂಗ ಮಹಾಸ್ವಾಮಿಗಳು ಸಿದ್ದಯ್ಯನಕೋಟೆ ವಹಿಸಿದ್ದರು. ನಂತರ ಕಾರ್ಯಕ್ರಮದ ಅಧ್ಯಕ್ಷತೆ ಶ್ರೀಯುತ ತಿರುಮಲೇಶ್ ವಹಿಸಿದ್ದರು. ತಮ್ಮ ಉಧ್ಘಾಟನ ನುಡಿಗಳಲ್ಲಿ ಉಮೇಶ್ ಸರ್ ಅವರು ನಶಿಸಿ ಹೋಗುತ್ತಿರುವ ಕಲಾವಿದರ ಬದುಕು ಹಾಗೂ ಪ್ರಸ್ತುತ ವಿದ್ಯಮಾನ ಪ್ರಭಾವ ಮರೆಯಾಗುತ್ತಿರುವ ಕಲೆ ಕುರಿತು ಸಂಕ್ಷಿಪ್ತವಾಗಿ ನುಡಿದರು. ಪ್ರಾಸ್ತಾವಿಕವಾಗಿ ಕೆ. ಓ. ಶಿವಣ್ಣ ಸಂಗೀತ ಶಿಕ್ಷಕರು ತುಮಕೂರ್ಲಹಳ್ಳಿ ಇವರು ಮಾತನಾಡಿ ಸಂಗೀತ ಬೆಳೆದು ಬಂದ ಹಾದಿ ಆದರ ತುಡಿತ ನಿರಂತರ ಅಭ್ಯಾಸ ಸತತ ಪರಿಶ್ರಮ ಬಗ್ಗೆ ಮನವರಿಕೆ ಆಗುವ ಹಾಗೇ ತಿಳಿ ಹೇಳಿದರು. ಶ್ರೀ ಬಸವ ಲಿಂಗ ಮಹಾಸ್ವಾಮಿಗಳು ಸರ್ವರಿಗೂ ಆಶೀರ್ವದಿಸಿ ಸಂಸ್ಥೆ ಬಗ್ಗೆ ಉತ್ಸಾಹ ಕೊಂಡಾಡಿದರು. 


ಈ ಕಾರ್ಯಕ್ರಮದಲ್ಲಿ ತೀರ್ಪುಗಾರರು ಆಗಿ ಎಸ್. ರಾಜುಕವಿ ಸೂಲೇನಹಳ್ಳಿ ಕಾದಂಬರಿಕಾರ ಹಾಗೂ ರಾಜ್ಯಾಧ್ಯಕ್ಷರು ಕರುನಾಡ ಹಣತೆ ಕವಿ ಬಳಗ ರಾಜ್ಯ ಘಟಕ ಚಿತ್ರದುರ್ಗ, ಕೆ. ಓ. ಶಿವಣ್ಣ ಸಂಗೀತ ಶಿಕ್ಷಕರು ತುಮಕೂರ್ಲಹಳ್ಳಿ, ಡಿ. ಜಿ. ತಿರುಮಲ ಕಲಾವಿದರು ರಾಜಾಪುರ, ಶ್ರೀಯುತ ಜಗದೀಶ್ ಯಾದವ್ ಗಾಯಕರು ಬಳ್ಳಾರಿ, ಶ್ರೀಯುತ ಗುರುನಾಥ ದತ್ತ ಗಾಯಕರು ಬಳ್ಳಾರಿ, ಎಂ. ಡಿ. ಲತೀಪ್ ಸಾಬ್ ಹಿರಿಯ ಕಲಾವಿದರು ಮೊಳಕಾಲ್ಮೂರು ಈ ಆರು ಜನ ತೀರ್ಪುಗಾರರು ಆಗಿ ಅಚ್ಚುಕಟ್ಟಾಗಿ ತಮ್ಮ ಕೆಲಸ ಮಾಡಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ೪೦ ಸ್ಪರ್ಧಿಗಳಲ್ಲಿ ಎರಡು ಸುತ್ತಿನ ಆಯ್ಕೆ ಪ್ರಕ್ರಿಯೆ ಮುಗಿಸಿ ಅಂತಿಮವಾಗಿ ಶ್ರೀಮತಿ ಸುಮ (ಪ್ರಥಮ) ಕು. ಶ್ವೇತಾ ಕೊಟ್ಟೂರು (ದ್ವಿತೀಯ) ಮಂಜು ಸಣ್ಣ ಕವಿ ಕೂಡ್ಲಿಗಿ (ತೃತೀಯ) ಈ ಮೂರು ವಿಜೇತರನ್ನು ಆಯ್ಕೆ ಮಾಡಿ ಪ್ರಾಮಾಣಿಕ ಫಲಿತಾಂಶ ನೀಡಿದರು. ಈ ಕಾರ್ಯಕ್ರಮದಲ್ಲಿ ನಿರೂಪಣೆಯನ್ನು ಸುಲಲಿತವಾಗಿ ಶ್ರೀಯುತ ಓಬಣ್ಣ ಶಿಕ್ಷಕರು ಗಾಯಿತ್ರಿ ಹಿರಿಯ ಪ್ರಾಥಮಿಕ ಶಾಲೆ ಮೊಳಕಾಲ್ಮೂರು ಚೆನ್ನಾಗಿ ನಡೆಸಿ ಕೊಟ್ಟರು ಕಾರ್ಯಕ್ರಮ ಸ್ವಾಗತ ಶ್ರೀಯುತ ಮುಜಿಮಿಲ್ಲಾ ಶಿಕ್ಷಕರು ನೇರವೇರಿಸಿದರು. ಕೊನೆಗೆ ಎಲ್ಲಾ ಕವಿಗಳಿಗೆ ಹಾಗೂ ತೀರ್ಪುಗಾರರಿಗೆ ಮತ್ತು ಮುಖ್ಯ ಅತಿಥಿಗಳಿಗೆ ಸನ್ಮಾನ ಮಾಡಲಾಯಿತು.

Comments

  1. ಅತ್ಯುತ್ತಮ ಕಾರ್ಯಕ್ರಮ 👌👍🌹

    ReplyDelete

Post a Comment

Popular posts from this blog

ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಕರ್ನಾಟಕ ಸಾಂಸ್ಕೃತಿಕ ವೈಭವ ಕಾರ್ಯಕ್ರಮ.

ತುಮಕೂರಿನಲ್ಲಿ ಕವಿಗೋಷ್ಠಿ ಹಾಗೂ ಪುಸ್ತಕ ಓದು ಸಂವಾದ ಕಾರ್ಯಕ್ರಮ.

ಕಾವ್ಯದೀವಿಗೆ ಕೃತಿ ಲೋಕಾರ್ಪಣೆ