ಯಶಸ್ವಿಯಾಗಿ ನಡೆದ ವಿಚಾರ ಮಂಟಪ ಪುಸ್ತಕ ಓದು ಸರಣಿ -೦೩ ಕಾರ್ಯಕ್ರಮ
ದಿನಾಂಕ : 20.02.2022
ವಿಚಾರ ಮಂಟಪ ಸಾಹಿತ್ಯ ಬಳಗ, ಕರುನಾಡ ಸಾಹಿತ್ಯ ಪರಿಷತ್ತು, ಸ್ಪಂದನಸಿರಿ ಸಾಹಿತ್ಯ ವೇದಿಕೆ ಮತ್ತು ತನುಶ್ರೀ ಪ್ರಕಾಶನ ಸಂಸ್ಥೆ ಇವರ ಜಂಟಿ ಸಹಯೋಗದಲ್ಲಿ ಆನ್ ಲೈನ್ ಗೂಗಲ್ ಮೀಟ್ ಮೂಲಕ ಪುಸ್ತಕ ಓದು ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ರಾಕೇಶ್ ಎಂ, ಶಿಕ್ಷಕರು ಇವರು ಸಂವಿಧಾನ ಓದು ಪುಸ್ತಕವನ್ನು ಓದುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀ ರಜನಿಕಾಂತ ಎಚ್. ಪಟಗಾರ ಅವರು ಕಾರ್ಯಕ್ರಮದ ನಿರೂಪಣೆ ಮತ್ತು ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಎಚ್. ಗಂಗಾಧರನ್ ಅವರ ಬುದ್ಧ ಭಗವಾನ್ ಕೃತಿಯನ್ನು ಚರ್ಚೆಗೆ ಆಯ್ದುಕೊಂಡು ಕೃತಿಯ ವಿವಿಧ ಭಾಗಗಳನ್ನು ಓದಿ ಸಂವಾದಿಸಲಾಯಿತು. ಸಂವಾದದಲ್ಲಿ ರಜನಿಕಾಂತ್ ಎಚ್. ಪಟಗಾರ, ಗೌತಮ್ ಗೌಡ, ಸೋಮೇಶ್ ಪ್ರಚಂಡಿ, ಗಾಯಿತ್ರಿ ಬಿ, ಹನುಮಂತ ಕುರುಬರ, ರಾಕೇಶ್ ಎಂ, ಪ್ರತಿಮಾ ಎಚ್ ಎಸ್, ಶ್ರೀಮತಿ ಸುಮಾ ಬಸವರಾಜ ಹಡಪದ ಮುಂತಾದವರು ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿ ಗಳಾಗಿದ್ದ ಶ್ರೀಮತಿ ಕಲಾವತಿ ಮಧುಸೂದನ, ಶ್ರೀ ವರುಣ್ ರಾಜ್ ಜಿ., ಮುಂತಾದವರು ಪಾಲ್ಗೊಂಡಿದ್ದರು. ಬುದ್ಧನ ಬಾಲ್ಯ, ವೈರಾಗ್ಯ, ಜ್ಞಾನೋದಯ, ಬುದ್ಧನ ಚಿಂತನೆಗಳ ಇಂದಿನ ಪ್ರಸ್ತುತತೆ ಮುಂತಾದ ವಿಚಾರಗಳ ಕುರಿತು ಸಂವಾದ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಶ್ರೀ ಫಯಾಜ್ ಅಹಮದ್ ಖಾನ್ ಇವರು ಮಾತನಾಡುತ್ತಾ ಇಂದಿನ ಕಾರ್ಯಕ್ರಮ ಬಹಳ ಅರ್ಥಪೂರ್ಣವಾಗಿ ಯಶಸ್ವಿಯಾಗಿ ಮುಗಿದಿರುವುದು ಬಹಳ ಸಂತೋಷದ ವಿಚಾರ ಎಂದು ಹೇಳುತ್ತಾ ಬುದ್ಧನ ಚಿಂತನೆಗಳ ಮಹತ್ವ, ಬುದ್ಧನ ಅಷ್ಟಾಂಗ ಮಾರ್ಗಗಳು, ಅವರ ಭೋದನೆಗಳು, ಬೌದ್ಧ ದರ್ಮದ ಮಹತ್ವ ಮತ್ತು ಅದರ ಭಾರತದಲ್ಲಿ ಬೌದ್ಧ ಧರ್ಮದ ಅವನತಿ ಮುಂತಾದ ವಿಚಾರಗಳನ್ನು ವಿವರವಾಗಿ ವಿಶ್ಲೇಷಿಸಿದರು.
- ವರದಿ : ಗೌತಮ್ ಗೌಡ.
(ಪುಸ್ತಕ ಓದು ಚರ್ಚೆಯಲ್ಲಿ ಭಾಗವಹಿಸುವ, ಪುಸ್ತಕ ಓದುವ ಆಸಕ್ತಿ ಉಳ್ಳವರು ದಯಮಾಡಿ ವಾಟ್ಸಪ್ ಮೂಲಕ 9902649766 ಸಂಪರ್ಕಿಸಿ ಅಭಿಯಾನಕ್ಕೆ ನೊಂದಣಿ ಮಾಡಿಕೊಳ್ಳಿ)
(ಸಾಹಿತ್ಯ ಸುದ್ದಿಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಪ್ರತಿಯೊಬ್ಬರಿಗೂ ತುಂಬು ಹೃದಯದ ಧನ್ಯವಾದಗಳು 💐🙏
ReplyDeleteಒಂದು ಅರ್ಥಪೂರ್ಣ ಚರ್ಚೆ ನಡೆಯಿತು.