ಶ್ರೀ ಆರ್ ಬಿ ಪಾಟೀಲ್ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಕ್ರೀಡಾಕೂಟದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ.

ಇತ್ತೀಚೆಗೆ ಕುಷ್ಟಗಿ ತಾಲೂಕಿನಲ್ಲಿ ನಡೆದಿರುವ ತಾಲೂಕ ಮಟ್ಟದ ಕ್ರೀಡಾಕೂಟದಲ್ಲಿ ಹೂಲಗೇರಿಯ ಶ್ರೀ ಆರ್. ಬಿ.ಪಾಟೀಲ್ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ,
ಪೂಜಾ ತಾವರಗೇರಿ (1500 ಮೀಟರ್ ಓಟ ದ್ವಿತೀಯ ಸ್ಥಾನ ). ಹಾಗೂ ಯಶೋದ ಗುಡಿಮನಿ (100 ಮೀಟರ್ ಓಟ ಪ್ರಥಮ  ಸ್ಥಾನ ). ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
 ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯರಿಗೆ
 ಶ್ರೀ ಆರ್ ಬಿ ಪಾಟೀಲ್ ಪ್ರೌಢಶಾಲೆಯ ಅಧ್ಯಕ್ಷರಾಗಿರುವ ಶ್ರೀ ಎಂ ಆರ್ ಪಾಟೀಲ್ ಮತ್ತು ಮುಖ್ಯ ಗುರುಗಳಾದ ಶ್ರೀ ಎಸ್ ಹೆಚ್ ಬೀಳಗಿ ಹಾಗೂ ದೈಹಿಕ  ಶಿಕ್ಷಕರಾಗಿರುವ ಶ್ರೀ ಬಸವರಾಜ ಬನ್ನಿ ಗುರುಗಳು ಮತ್ತು ಸಹ ಶಿಕ್ಷಕರಾದ  ಶ್ರೀಮತಿ ಗೀತಾ ಪಾಟೀಲ್, ಶ್ರೀ ಅನಿಲ್ ಕುಮಾರ್ ಬಾರಡ್ಡಿ, ಶ್ರೀ ಮುತ್ತು.ಯ.ವಡ್ಡರ, ಶ್ರೀಮತಿ ರತ್ನಾ ನಾಗೂರ, ಶ್ರೀ ರಾಜಪ್ಪ ಗೌಡರ್ ಹಾಗೂ ಎಲ್ಲಾ ಶಾಲಾ ಸಿಬ್ಬಂದಿಯವರು ಮತ್ತು ಊರಿನ ಗಣ್ಯಮಾನ್ಯರು ಹಾಗೂ ಕ್ರೀಡಾ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

Comments

Popular posts from this blog

ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಕರ್ನಾಟಕ ಸಾಂಸ್ಕೃತಿಕ ವೈಭವ ಕಾರ್ಯಕ್ರಮ.

ತುಮಕೂರಿನಲ್ಲಿ ಕವಿಗೋಷ್ಠಿ ಹಾಗೂ ಪುಸ್ತಕ ಓದು ಸಂವಾದ ಕಾರ್ಯಕ್ರಮ.

ಕಾವ್ಯದೀವಿಗೆ ಕೃತಿ ಲೋಕಾರ್ಪಣೆ