ಕ.ರಾ.ಸ್ಪಂದನ ಸಿರಿ ವೇದಿಕೆಯ ಬೆಳಗಾವಿ ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಕಾರ್ಯಕ್ರಮ.

ಕ.ರಾ.ಸ್ಪಂದನ ಸಿರಿ ವೇದಿಕೆಯ ಬೆಳಗಾವಿ ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಕಾರ್ಯಕ್ರಮವನ್ನು ಬೆಳಗಾವಿ ಕಾರಂಜಿ ಮಠದ ಶ್ರೀ ಗುರುಸಿದ್ಧ ಮಹಾಸ್ವಾಮೀಜಿಗಳ ಸರ್ವಾಧ್ಯಕ್ಷತೆಯಲ್ಲಿ ತಮ್ಮ ಸಹೃದಯತೆಯ ಸರಳ ಸಹಜ ಸತ್ವಪೂರ್ಣ ನುಡಿ, ಆಶೀರ್ವಚನಗಳಿಂದ ಸುಸಂಪನ್ನಗೊಳಿಸಿದರು.

ಮಾನವೀಯ ಮೌಲ್ಯಗಳನ್ನು ಸಕಾರಗೊಳಿಸುವಲ್ಲಿ ಮುನ್ನಡಿಯುತ್ತಿರುವ ಸ್ಪಂದನ ಸಿರಿ ವೇದಿಕೆಯ ಸೋದರಿ ಕಲಾವತಿಮಧುಸೂದನರವರ ಹುಟ್ಟು ಹಾಕಿರುವ ಸಂಸ್ಥೆ ಯಾವುದೇ ಉಪನ್ಯಾಸ ಭಾಷಣದ ವೇದಿಕೆಯಲ್ಲ.. ಸಾಮಾಜಿಕ ಸ್ಪಂದನೆಯ ನಿಟ್ಟಿನಲ್ಲಿ ಕೆಲಸ ಮಾಡುವ ಸಂಸ್ಥೆಯಾಗಿದ್ದು,ಈ ಸಂಸ್ಥೆಯ ಆಶಯದಂತೆ ಬೆಳಗಾವಿ ಜಿಲ್ಲಾ ಸಮಿತಿಯು ಕಾರ್ಯಪ್ರವೃತ್ತವಾಗುವ ಮೂಲಕ ವೃದ್ಧರ ಅಸಹಾಯಕರ ಶೋಷಿತರ ಧ್ವನಿಯಾಗಿ ಹಾಗೂ ಮಕ್ಕಳು ಮತ್ತು ಸಮಾಜದ ಶ್ರೇಯೋಭಿವೃದ್ದಿಗಾಗಿ ಶ್ರಮಿಸಬೇಕೆಂದರು.

ಮತ್ತು ಸುಪ್ರಸಿದ್ಧ ಗಾಯಕರು ಮತ್ತು ಆಕಾಶವಾಣಿ ಕಲಾವಿದರೂ ಆಗಿರುವ ಡಾ.ಶ್ರೀರಂಗ ಜೋಷಿಯವರನ್ನು ಬೆಳಗಾವಿ ಜಿಲ್ಲಾಧ್ಯಕ್ಷರಾಗಿ  ಪ್ರಮಾಣ ಪತ್ರ ಪ್ರದಾನಮಾಡಿ ಸನ್ಮಾನಿಸಿ ಗೌರವಿಸಲಾಯಿತು. 
ಪ್ರಮಾಣ ವಚನ ಸ್ವೀಕರಿಸಿದ ಡಾ.ಶ್ರೀರಂಗ ಜೋಶಿಯವರು ತಮ್ಮ ಸದಾಶಯವನ್ನು ಹಂಚಿಕೊಂಡರು.
ಹಾಗೂ ನೂತನವಾಗಿ ರಚಿತವಾಗಿರುವ ಸಮಿತಿಯ ಎಲ್ಲಾ ಪದಾಧಿಕಾರಿಗಳು ಪ್ರಮಾಣ ಪತ್ರ ಸ್ವೀಕರಿಸಿದರು.
ರಾಜ್ಯಧ್ಯಕ್ಷೆ ಕಲಾವತಿಮಧುಸೂದನ ಸಂಸ್ಥೆಯ ಆಶಯವನ್ನು ವ್ಯಕ್ತಪಡಿಸಿ ಸ್ವಾಮೀ ಜಿಗಳಿಗೆ ಪ್ರಣಾಮಗಳನ್ನು ಸಲ್ಲಿಸಿ ಗೌರವವನ್ನು ಸ್ವೀಕರಿಸಿ ಆಶಿರ್ವಾದವನ್ನು ಪಡೆದರು. ಮಹಿಳಾ ತಂಡದ ಭಜನೆಯೊಂದಿಗೆ ಆರಂಭಿಸಿ ಕಾರ್ಯಕ್ರಮ ಉದ್ಘಾಟಿಸಲಾಯಿತು.
ಉಪಾಧ್ಯಕ್ಷೆ ಡಾ. ಅನ್ನಪೂರ್ಣ ಹಿರೇಮಠ್ ರವರ ಅತ್ಯುತ್ತಮ ನಿರೂಪಣೆ, ಶಾರದ ಹಿರೇಮಠ್ ಸ್ವಾಗತ,ಮಹಾದೇವಿ ಕರಿಲಿಂಗರ ವಂದನಾರ್ಪಣೆ ಮಾಡಿದರು. ಪ್ರಸಾದ್ ಹಿರೇಮಠ್,ಮಹಾದೇವಿ ವಿಭೂತಿ,ಶರಣಪ್ಪ ಬಸವರಾಜ,ಶಂಕರ ಬೇವಿನಗಿಡ,ಸಂಜಯ್ ಅರಬಿನ್ ವಾಡೆ, ಶೋಭಾ ಧಾರವಾಡ ಮಠ, ಚಂದ್ರಕಲಾ ರಾಯದುರ್ಗ, ಮಂಜುನಾಥ್ ಬಡಿಗೇರ,ಭಾರತಿ ಪರದಪನವಾಡೆ, ಸುಮಾ ಅರಬಿನ್ ವಾಡೆ ಮುಂತಾದವರು ಉಪಸ್ಥಿತರಿದ್ದರು.


Comments

Post a Comment

Popular posts from this blog

ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಕರ್ನಾಟಕ ಸಾಂಸ್ಕೃತಿಕ ವೈಭವ ಕಾರ್ಯಕ್ರಮ.

ತುಮಕೂರಿನಲ್ಲಿ ಕವಿಗೋಷ್ಠಿ ಹಾಗೂ ಪುಸ್ತಕ ಓದು ಸಂವಾದ ಕಾರ್ಯಕ್ರಮ.

ಕಾವ್ಯದೀವಿಗೆ ಕೃತಿ ಲೋಕಾರ್ಪಣೆ