ಡಾ.ಷಕೀಬ್ ಎಸ್ ಕಣದ್ಮನೆ ನವಿಲೇಹಾಳ್ ಅವರಿಗೆ ಈ ಸಾಲಿನ ಶತಶೃಂಗ ಸಾಹಿತ್ಯ ಪ್ರಶಸ್ತಿ.

  ದಾವಣಗೆರೆ ಜಿಲ್ಲೆಯ ಅಡಿಕೆ ನಾಡಿನ ಮೂಲದವರಾದ ಡಾ. ಷಕೀಬ್ ಎಸ್ ಕಣದ್ಮನೆಯವರು ಸುಮಾರು ವರ್ಷಗಳಿಂದ ನಾಡು‌ನುಡಿಗಾಗಿ ದುಡಿಯುತ್ತಿದ್ದಾರೆ.
ಇವರು ಕವಿ, ವಿಮರ್ಶಕ, ಲೇಖಕ, ಅಂಕಣ ಬರಹಗಾರರಾಗಿ, ಸಂಶೋಧಕರಾಗಿ ಮತ್ತು ಸಂಘಟಕರಾಗಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ *ಮೋಹದ ಮೋಡಗಳು* ಎಂಬ ಕವನ ಸಂಕಲನದ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಮೊಟ್ಟ ಮೊದಲ ಕೊಡುಗೆಯಾಗಿ ನೀಡುವುದರ ಮೂಲಕ ಪರಿಸರ ಪ್ರೇಮಿ, ರೈತಕವಿಯಾಗಿ ಗುರುತಿಸಿಕೊಂಡಿದ್ದಾರೆ. 

 ಅಲ್ಲದೆ ‘ಮಲೆನಾಡ ಮಧುಬಾಲೆ’. ‘ಜಾನಪದ ಬಹುಮುಖಿ ಚಿಂತನೆ’, ಎಂಬ ಕೃತಿಗಳನ್ನು ನೀಡಿದ್ದು, ಸುದ್ದಿದಿನ ಪತ್ರಿಕೆ, ವಿ ಕೆ ನ್ಯೂಸ್, ಮತ್ತು ಓದುಗದೊರೆ ಪತ್ರಿಕೆಯು ‘ದೇಸಿ’ ಎನ್ನುವ ಅಂಕಣ ಬರಹಗಳನ್ನು ಪ್ರಕಟಿಸುತ್ತಿದೆ. ‘ಕನ್ನಡ ಸಾಂಸ್ಕೃತಿಕ ಗತವೈಭವ ಅಕಾಡೆಮಿಯ ಮೂಲಕ ಕನ್ನಡ ಸಂಸ್ಕೃತಿಯನ್ನು ನಾಡಿಗೆ ಪರಿಚಯಿಸುವ ಕಾರ್ಯಕ್ರಮಗಳನ್ನು ಮಾಡುವುದರ ಜೊತೆಗೆ ಯುವ ಸಾಹಿತಿಗಳನ್ನು ಗುರುತಿಸುವ ಕಾರ್ಯ ಮಾಡುತ್ತಿದ್ದಾರೆ‌. 
 
 ಅವರ ಈವರೆಗಿನ ಅತ್ಯುತ್ತಮ ಸಾಮಾಜಿಕ ಸೇವೆಯನ್ನು ಮತ್ತು ಸಾಹಿತ್ಯ ಸೇವೆಯನ್ನು ಪರಿಗಣಿಸಿ ಈ ಸಾಲಿನ *ಶತಶೃಂಗ ಸಾಹಿತ್ಯ ರಾಜ್ಯ ಪ್ರಶಸ್ತಿಗೆ* ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಶಿಕ್ಷಕರ ಸಾಹಿತ್ಯ ಪರಿಷತ್ತಿನ ಗೌರವ ಅದ್ಯಕ್ಷರಾದ ಎಂ.ಕೆ‌.ಶೇಖ್. ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ‌.


ಮಾನ್ಯರಿಗೆ ವಿಚಾರ ಮಂಟಪ ಬಳಗದ ವತಿಯಿಂದ ತುಂಬು ಹೃದಯದ ಅಭಿನಂದನೆಗಳು. 

Comments

Popular posts from this blog

ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಕರ್ನಾಟಕ ಸಾಂಸ್ಕೃತಿಕ ವೈಭವ ಕಾರ್ಯಕ್ರಮ.

ತುಮಕೂರಿನಲ್ಲಿ ಕವಿಗೋಷ್ಠಿ ಹಾಗೂ ಪುಸ್ತಕ ಓದು ಸಂವಾದ ಕಾರ್ಯಕ್ರಮ.

ಕಾವ್ಯದೀವಿಗೆ ಕೃತಿ ಲೋಕಾರ್ಪಣೆ