ಧಾರವಾಡದ ಯುವಪ್ರತಿಭೆ ಶ್ರೀ ಸಂಜಯಕುಮಾರ ಬಿರಾದಾರ ಅವರನ್ನು ಪ್ರಶಂಸಿದ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಹಾಗೂ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರಾದ ಡಾ.ಚಂದ್ರಶೇಖರ ಕಂಬಾರರು.
ನಮ್ಮ ಧಾರವಾಡ ಜಿಲ್ಲೆಯ ಕರ್ನಾಟಕ ವಿಶ್ವವಿದ್ಯಾಲಯದ ಯುವಪ್ರತಿಭೆ ಶ್ರೀ ಸಂಜಯಕುಮಾರ ಯಂಕನಗೌಡ ಬಿರಾದಾರ ಅವರ ಸಾಧನೆ ಮಹೋನ್ನತವಾದದ್ದು. ಕೇವಲ ಸಾಹಿತ್ಯ ಕ್ಷೇತ್ರದಲ್ಲಿ ಮಾತ್ರ ತೊಡಗದೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದು ಎಲ್ಲಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಕೇವಲ ತಾವಷ್ಟೇ ಹೆಮ್ಮರವಾಗಿ ಬೆಳೆದರೆ ಸಾಲದು ಅದರಿಂದ ಸಮಾಜಕ್ಕೆ ಯಾವುದೇ ಒಳ್ಳೆ ಫಲ ಸಿಗದು ಬದಲಿಗೆ ಇಡೀ ಸಮಾಜವೇ ಹೆಮ್ಮರವಾಗಿ ಬೆಳೆದಾಗ ನಮ್ಮ ದೇಶಕ್ಕೆ ಒಂದೊಳ್ಳೆ ಉಡುಗೊರೆ ದೊರೆಯುವುದು ಎಂದು ಭಾವಿಸಿದ ಶ್ರೀ ಸಂಜಯಕುಮಾರ ಬಿರಾದಾರ ಅವರು ದೇಶದ ಸರ್ವತೋಮುಖ ಅಭಿವೃದ್ಧಿಗೆ ಸದಾ ಕಾಲ ಶ್ರಮಿಸಿದ ಇವರ ಈ ಒಂದು ಅಘಾದ ಚೈತನ್ಯಕ್ಕೆ ನಮ್ಮೆಲ್ಲರ ಹೃನ್ಮನದಿಂದ ಅನಂತ, ಅನಂತ ನಮನಗಳು..
ಸಂಜಯಕುಮಾರ ಅವರ ಎಲ್ಲಾ ಕ್ಷೇತ್ರದ ಸಾಧನೆಗಳ ಸೃಜನಾತ್ಮಕ ಕ್ರಿಯಾಶೀಲತೆಯನ್ನು ಕಂಡ ಜ್ಞಾನಪೀಠ ಪುರಸ್ಕೃತರಾದ ಚಂದ್ರಶೇಖರ ಕಂಬಾರ ಅವರು ತಮ್ಮ ಅಂತರಾಳದಿಂದ ಶ್ರೀ ಸಂಜಯಕುಮಾರ ಬಿರಾದಾರ ಅವರಿಗೆ “ಪ್ರಶಂಸಾ ಪತ್ರ” ವನ್ನು ನೀಡುವುದರ ಜೋತೆಗೆ ಅವರ ಸಾಧನೆಯ ಸುರಿಮಳೆಯನ್ನು ಲಾಲಿತ್ಯದಿಂದ ಅಮೋಘವಾಗಿ ವರ್ಣಿಸಿದ್ದಾರೆ.
ಕಲಿಕೆ ಎನ್ನುವುದು ಕೇವಲ ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವಿನ ಕೊಂಡಿಯಾಗಿರದೆ, ವಿದ್ಯಾರ್ಥಿ ಮತ್ತು ಸಮುದಾಯದ ನಡುವೆ ಸುಖಕರವಾದ ಮತ್ತು ರಚನಾತ್ಮಕವಾದ ಸಂಬಂಧ ಬೆಳೆಯಬೇಕು. ಎಂಬ ಆಶಯದೊಂದಿಗೆ ಸ್ಥಾಪಿತವಾದ ದೇಶದ ಸಮಗ್ರ ಬೆಳವಣಿಗೆಗೆ ಶ್ರಮಿಸುತ್ತಿರುವ ರಾಷ್ಟೀಯ ಸೇವಾ ಯೋಜನೆಯಲ್ಲಿ ಸ್ವಯಂ ಸೇವಕರಾಗಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಕರ್ನಾಟಕದ ಯುವಪ್ರತಿಭೆ ಶ್ರೀ ಸಂಜಯಕುಮಾರ ಬಿರಾದಾರ ಗುರುತಿಸಿಕೊಂಡಿದ್ದಾರೆ. ಇವರು ಪದವಿ ಮತ್ತು ಸ್ನಾತಕೋತ್ತರ ಅಧ್ಯಯನದ ಸಂದರ್ಭದಲ್ಲಿ ನಾಲ್ಕು ಗೋಡೆಗಳ ನಡುವೆ ಪಾಠ ಕಲಿಯುವುದರ ಜೊತೆಗೆ ಸಮುದಾಯದ ಜನರೊಂದಿಗೆ ಬೆರೆತಿದ್ದಾರೆ. ಅವರ ನೋವು, ನಲಿವು, ಸುಖ, ದುಃಖ, ಕಷ್ಟ, ಕಾರ್ಪಣ್ಯಗಳಲ್ಲಿ ಪಾಲ್ಗೊಳ್ಳುವ ದ್ಯೇಯದೊಂದಿಗೆ ಸ್ವಯಂ ಪ್ರೇರಿತರಾಗಿ ಸಮುದಾಯದ ಸೇವಾಭಾವನೆ ಮೂಡಿಸಲು ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ತೊಡಗಿಸಿಕೊಂಡ ಧಾರವಾಡದ ಸಂಜಯಕುಮಾರ ಬಿರಾದಾರ ಅವರ ಸಾಧನೆ ಶ್ಲಾಘನೀಯವಾಗಿದೆ.
ರಾಷ್ಟೀಯ ಸೇವಾ ಯೋಜನೆ "ನನಗಲ್ಲ ನಿನಗೆ " ಎಂಬ ಘೋಷವಾಕ್ಯಕ್ಕೆ ಅನ್ವರ್ಥವಾಗಿ ಶ್ರೀ ಸಂಜಯಕುಮಾರ ಬಿರಾದಾರ ಅವರೊಬ್ಬ ಕ್ರಿಯಾಶೀಲ ವ್ಯಕ್ತಿಯಾಗಿ ಗುರುತಿಸಲ್ಪಡುತ್ತಾರೆ. ಶಿಕ್ಷಣ, ಸಾಹಿತ್ಯ, ಸಂಸ್ಕೃತಿ, ಕಲೆ, ನಾಡ-ನುಡಿ, ನೆಲ-ಜಲ,ಸಮಾಜ, ಸಂಘ-ಸಂಸ್ಥೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಅಧ್ಯಯನದ ಜೊತೆಗೆ ಸೇವಾ ಮನೋಭಾವವನ್ನು ಹೊಂದಿರುವ ಇವರಲ್ಲಿ ನಾಯಕತ್ವದ ಎಲ್ಲಾ ಗುಣಲಕ್ಷಣಗಳು ಕಂಡುಬರುತ್ತವೆ. ಯೋಜನೆ, ತಾಂತ್ರಿಕ, ಸಂವಹನ, ಮುಂದಾಳತ್ವ ಮತ್ತು ಮೌಲ್ಯಮಾಪನ ಕೌಶಲ್ಯತೆ, ಆತ್ಮ ವಿಶ್ವಾಸ ಮತ್ತು ಮಾನವೀಯ ಸಂಬಂಧಗಳ ಶ್ರೇಷ್ಠತೆಯನ್ನು ಸಿದ್ಧಿಸಲು ಮತ್ತು ವೃದ್ಧಿಸಲು ಅನುಕೂಲಕರವಾದ ಚಟುವಟಿಕೆಗಳಿಗೆ ಹೆಚ್ಚಿನ ಪರಿಶ್ರಮಕ್ಕೆ ಒತ್ತು ಕೊಡುವ ಶ್ರೀ ಸಂಜಯಕುಮಾರ ಅವರಲ್ಲಿ ದೇಶಾಭಿಮಾನ ಎದ್ದು ಕಾಣುತ್ತದೆ.
ಶ್ರೀ ಸಂಜಯಕುಮಾರ ಬಿರಾದಾರ ಅವರು "ಕಾಯಕವೇ ಕೈಲಾಸ "ಎಂಬ ಬಸವಣ್ಣನ ನುಡಿಯಂತೆ ಸಂಸ್ಕೃತಿಕ ಹಾಗೂ ಸಮಾಜಮುಖಿ ಕೆಲಸಗಳ ಮೂಲಕ ನಾಡಿನ ಹಿರಿಯ ಸಾಹಿತಿಗಳು, ಕಲಾವಿದರು ಮತ್ತು ಅಧಿಕಾರಿಗಳಿಂದ ಪ್ರಶಂಸಿಸಲ್ಪಟ್ಟಿದ್ದು,ಅನೇಕ ಪ್ರಶಸ್ತಿ, ಪುರಸ್ಕಾರ ಗೌರವಗಳಿಗೆ ಪಾತ್ರರಾಗಿರುವುದು ಹೆಮ್ಮೆಯ ವಿಷಯವಾಗಿದೆ. ಸರಳ ಸಜ್ಜನಿಕೆ, ಆತ್ಮೀಯತೆಯ ಮೂಲಕ ಎಲ್ಲರನ್ನು ಪ್ರೀತಿ, ಅಭಿಮಾನದಿಂದ ಗೌರವಿಸುವ ಗುಣ ಸ್ವಭಾವ ಶ್ರೀ ಸಂಜಯಕುಮಾರ ಬಿರಾದಾರ ಅವರ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸುತ್ತೇನೆ...
ಎಂದು ನಮ್ಮ ಹೆಮ್ಮೆಯ ಕನ್ನಡದ ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಅವರು ನಮ್ಮೆಲ್ಲರ ಮನೆ ಮಗನಾದ ಯುವಪ್ರತಿಭೆ ಶ್ರೀ ಸಂಜಯಕುಮಾರ ಯಂಕನಗೌಡ ಬಿರಾದಾರ ಅವರನ್ನು ಪ್ರಶಂಸಿಸಿದ್ದಾರೆ...
Comments
Post a Comment