"ಸಾಹಿತ್ಯ ರತ್ನ" ರಾಜ್ಯಮಟ್ಟದ ಪ್ರಶಸ್ತಿಗೆ ಯುವ ಸಾಹಿತಿ ಕೋಡಿಹಳ್ಳಿ ಬಸವರಾಜಪ್ಪ ಪೂಜಾರ ಆಯ್ಕೆ.



ಗದಗ ಮಾರ್ಚ್ 3: ಡಾ. ವ್ಹಿ.ವ್ಹಿ.ಹಿರೇಮಠ ಮೆಮೋರಿಯಲ್ ಪ್ರತಿಷ್ಠಾನ(ರಿ )ಗದಗ ಇವರಿಗೆ ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಜನ್ಮ ದಿನಾಚರಣೆಯ ಪ್ರಯುಕ್ತದಲ್ಲಿ ಯುವ ಸಾಹಿತಿ ಕೋಡಿಹಳ್ಳಿ ಬಸವರಾಜಪ್ಪ ಪೂಜಾರ ಅವರಿಗೆ ರಾಜ್ಯಮಟ್ಟದ "ಸಾಹಿತ್ಯ ರತ್ನ" ಪ್ರಶಸ್ತಿ ನೀಡಲು ಆಯ್ಕೆ ಮಾಡಿದೆ. ಸಾಹಿತ್ಯದಲ್ಲಿ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಜನಪರ ಸೇವೆ ಮಾಡುತ್ತಾ. ಕನ್ನಡದಲ್ಲಿ ಅನೇಕ ಕವಿತೆ, ಲೇಖನಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. ರಾಜ್ಯ ಮತ್ತು ರಾಷ್ಟ್ರಮಟ್ಟದ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ, ತಮ್ಮ ಸಂಶೋಧನೆ ಲೇಖನಗಳನ್ನು ಮಂಡಿಸಿದ್ದಾರೆ. ಇವರು ಪ್ರಕಟವಾಗಿರುವ ಕಥೆಗಳು "ಸಾಬಣ್ಣ ಹೊಲ", "ಅಣ್ಣ ಕೊಡಿಸಿದ ಚಪ್ಪಾಳೆಗಳು", "ಅಣ್ಣನ ಹಳೆಬೈಕ್ ರಿಪೇರಿ", ಮತ್ತೆ ವಿವಿಧ ಕಡೆ ಕವಿಗೋಷ್ಠಿಯಲ್ಲಿ ಕವಿಗೋಷ್ಠಿ ಮಾಡಿ. ಕವಿಗೋಷ್ಠಿಯ ತೀರ್ಪುಗಾರರಾಗಿ ಸೇವೆಸಲ್ಲಿಸಿದ್ದಾರೆ. ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಸಾಹಿತ್ಯದಲ್ಲಿ ಕೂಡ ಸೇವೆ ಸಲ್ಲಿಸಿರುವ ಇವರಿಗೆ "ಸಾಹಿತ್ಯ ರತ್ನ" ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಂತಸದ ಸಂಗತಿಯಾಗಿದೆ. ಮಾರ್ಚ್ 3 ರಂದು ನಡೆಯುವ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷರು ಶ್ರೀಮತಿ ವ್ಹಿ. ವ್ಹಿ.ಹಿರೇಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments

Popular posts from this blog

ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಕರ್ನಾಟಕ ಸಾಂಸ್ಕೃತಿಕ ವೈಭವ ಕಾರ್ಯಕ್ರಮ.

ತುಮಕೂರಿನಲ್ಲಿ ಕವಿಗೋಷ್ಠಿ ಹಾಗೂ ಪುಸ್ತಕ ಓದು ಸಂವಾದ ಕಾರ್ಯಕ್ರಮ.

ಕಾವ್ಯದೀವಿಗೆ ಕೃತಿ ಲೋಕಾರ್ಪಣೆ