Posts

Showing posts from February, 2024

ಬಾ. ಹ. ರಮಾಕುಮಾರಿಯವರಿಗೆ ಅಭಿನಂದನಾ ಸಮಾರಂಭ.

Image
ತುಮಕೂರು: ಪ್ರೊ. ಎಚ್.ಜಿ. ಸಣ್ಣಗುಡ್ಡಯ್ಯ ಪ್ರಶಸ್ತಿ ಪುರಸ್ಕೃತರಾದ ನಿಮಿತ್ತ ಲೇಖಕಿ, ಸಂಘಟಕಿ, ಹೋರಾಟಗಾರ್ತಿ ಬಾ.ಹ. ರಮಾಕುಮಾರಿಯವರಿಗೆ ಅಭಿನಂದನಾ ಸಮಾರಂಭವನ್ನು ನೆರವೇರಿಸಲಾಯಿತು. ನಗರದ ಸಾವಿತ್ರಿ ಓಶೋ ಧ್ಯಾನ ಕೇಂದ್ರದಲ್ಲಿ ಕರ್ನಾಟಕ ಲೇಖಕಿಯರ ಸಂಘ ತುಮಕೂರು, ಓದು ಲೇಖಕಿ ಬಳಗ, ವಿಚಾರ ಮಂಟಪ ಬಳಗ ಹಾಗೂ ಸಾಕ್ಷಿ ಪ್ರಕಾಶನ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಾ.ಹ. ರಮಾಕುಮಾರಿ ಅವರ ಅಭಿನಂದನಾ ಸಮಾರಂಭದಲ್ಲಿ ಪ್ರಸ್ತಾವಿಕ ನುಡಿಗಳನ್ನಾಡಿದ ಓದು ಬಳಗದ ಸಂಚಾಲಕಿ ಆಶಾ ಬಗ್ಗನಡು ನಮ್ಮ ನಡುವಿನ ಅನನ್ಯ ವ್ಯಕ್ತಿತ್ವ ಬಾ. ಹ. ರಮಾಕುಮಾರಿಯವರದು ಜನಪರ ಕಾಳಜಿಯ ಲೇಖಕಿಯಾಗಿ, ಸಾಮಾಜಿಕ ಬದ್ಧತೆಯನ್ನು ಉಸಿರಾಡುತ್ತಾ, ದನಿ ಇಲ್ಲದವರ ದನಿಯಾಗಿ ಈ ಹೊತ್ತಿಗೂ ದಣಿವರಿಯದೆ ದುಡಿಯುತ್ತಿರುವ ಈ ಜೀವ ಒಂದು ಸೋಜಿಗವೇ ಹೌದು. ಇಂತಹ ಮಾತೃ ಹೃದಯಿ ಅಂತಃಕರಣದ ರಮಾಕುಮಾರಿಯವರನ್ನು ಅಭಿನಂದಿಸುತ್ತಿರುವ ಈ ಕಾರ್ಯಕ್ರಮ ನಿಜಕ್ಕೂ ಅರ್ಥಪೂರ್ಣ ಎಂದರು. ಕಲೇಸA ತುಮಕೂರು ಶಾಖೆಯ ಉಪಾಧ್ಯಕ್ಷರಾದ ಸಿ.ಎ. ಇಂದಿರಾ ಅವರು ಅಭಿನಂದನಾ ನುಡಿಗಳನ್ನು ಆಡುತ್ತಾ, ಸಾಹಿತಿಯಾಗಿ ಸಮಾಜ ಸೇವಕಿಯಾಗಿ ಇವರು ಮಾಡಿರುವ ಸಾಧನೆಗಳು ಒಂದೆರಡಲ್ಲ. ತಮ್ಮ ನಿರಂತರ ಹೋರಾಟದ ಮೂಲಕ ಮಹಿಳೆಯರ ಹಕ್ಕುಗಳಿಗಾಗಿ ನಿಸ್ವಾರ್ಥವಾಗಿ ಹೋರಾಡಿದವರು ರಮಾಕುಮಾರಿಯವರು. ಇವರು ಜಿಲ್ಲಾ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾಗಿ ಮಾಡಿರುವ ಸೇವೆ ಅನನ್ಯವಾದದ್ದು. ಅಲ್ಲದೇ, ತುಮಕೂರಿನಲ್ಲ...

ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಕರ್ನಾಟಕ ಸಾಂಸ್ಕೃತಿಕ ವೈಭವ ಕಾರ್ಯಕ್ರಮ.

Image
ದಿನಾಂಕ 25.024 ಭಾನುವಾರ ಕೈವಾರದಲ್ಲಿ ಕರ್ನಾಟಕ ಸಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯುತ್ತದೆ. ಸಂಗೀತ ನೃತ್ಯ ಗೀತ ಗಾಯನ ಕವಿಗೋಷ್ಠಿ ಕಾಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಸದ್ಗುರು ಯೋಗಿ ನಾರಾಯಣ ಪ್ರಶಸ್ತಿ ಕನ್ನಡ ಕಾವ್ಯಶ್ರೀ ಪ್ರಶಸ್ತಿ ಶಿಕ್ಷಕರ ರತ್ನ ಪ್ರಶಸ್ತಿ ಹೆಮ್ಮೆಯ ಕನ್ನಡಿಗ ಕನ್ನಡತಿ ಪ್ರಶಸ್ತಿ ಪ್ರಧಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಡಾ. ಆರೂಢ ಭಾರತಿ ಸ್ವಾಮಿಗಳು ಉದ್ಘಾಟನಾ ಕಾರ್ಯಕ್ರಮ ನೆರವೇರಿಸಲಿದ್ದಾರೆ. ತಾವೆಲ್ಲರೂ ಸಮಾರಂಭಕ್ಕೆ ಆಗಮಿಸಬೇಕೆಂದು ಕೇಳಿಕೊಳ್ಳುತ್ತೇವೆ.. ಇಂತಿ , ಅಧ್ಯಕ್ಷರು  ಡಾ.ಶಿವಣ್ಣ ಜಿ.